Wednesday, July 14, 2010

ಸಾಂಕ್ರಾಮಿಕ ರೋಗ ನಿಯಂತ್ರಣ

ಕಾಸರಗೋಡು ಜಿಲ್ಲೆಗೆ ರೂ.21 ಲಕ್ಷ


ಕಾಸರಗೋಡು: ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಸೊಳ್ಳೆಯಿಂದ ಹರಡುವ ರೋಗಗಳನ್ನು ನಿಯಂತ್ರಿಸುವ ಸಲುವಾಗಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲು ಹಾಗೂ ಜ್ವರ ಬಾಧಿತ ಪ್ರದೇಶಗಳಲ್ಲಿ ವೈದ್ಯಕೀಯ ಶಿಬಿರ ನಡೆಸಲು ಜಿಲ್ಲೆಗೆ 21 ಲಕ್ಷ ರೂಪಾಯಿಗಳನ್ನು ಸರ್ಕಾರ ಮಂಜೂರು ಮಾಡಿದೆ.

ಜಿಲ್ಲೆಯಲ್ಲಿ ಜ್ವರ ಹೆಚ್ಚಾಗಿ ಪತ್ತೆಯಾಗಿರುವ ಕುತ್ತಿಕೋಲ್, ಕಳ್ಳಾರ್, ಪನತ್ತಡಿ, ಬಳಾಲ್, ಕೋಡೋಂ-ಬೆಳೂರ್, ಬೇಡಡ್ಕ, ದೇಲಂಪಾಡಿ, ಮುಳಿಯಾರು, ಕಾರಡ್ಕ, ಪುಲ್ಲೂರು-ಪೆರಿಯ, ಮಡಿಕೈ, ಕಿನಾನೂರ್-ಕರಿಂದಳ, ಈಸ್ಟ್ ಎಳೇರಿ, ವೆಸ್ಟ್ ಎಳೇರಿ ಪಂಚಾಯ್ತಿಗಳನ್ನು ಕೇಂದ್ರೀಕರಿಸಿ ಜಾಗೃತಿ ಕಾರ್ಯಕ್ರಮ ನಡೆಯಲಿದೆ.

ವಾರ್ಡ್ ಮಟ್ಟದಿಂದ ಪಂಚಾಯ್ತಿ ಸದಸ್ಯರು, ಆರೋಗ್ಯ ಕಾರ್ಯಕರ್ತರ ನೇತೃತ್ವದಲ್ಲಿ ಸೊಳ್ಳೆಗಳನ್ನು ನಿರ್ಮೂಲನ ಮಾಡಲಾಗುವುದು. ವೈದ್ಯಕೀಯ ಶಿಬಿರ, ಜಾಗೃತಿ ಕಾರ್ಯಕ್ರಮಗಳೂ ನಡೆಯಲಿದೆ. ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸಿ ಅವರವರ ಮನೆಗಳ ವಠಾರವನ್ನು ಶುಚಿಗೊಳಿಸಲಾಗುವುದು. ಜಾಗೃತಿ ಜಾಥಾ, ಸಾಂಸ್ಕೃತಿಕ ಕಾರ್ಯಕ್ರಮಗಳು, ಚರಂಡಿ, ಬಸ್ ನಿಲ್ದಾಣ, ಇತರ ಸಾರ್ವಜನಿಕ ಸಂಸ್ಥೆಗಳನ್ನು ಸ್ವಚ್ಛಗೊಳಿಸಲಾಗುವುದು. ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿಯೂ ಜ್ವರ ಮತ್ತು ಇತರ ಸಾಂಕ್ರಾಮಿಕ ರೋಗಗಳಿಗೆ ಔಷಧಿಗಳು ಲಭ್ಯವಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಜೋಸ್ ಡಿಕ್ರೂಸ್ ತಿಳಿಸಿದ್ದಾರೆ.

ಪ್ರಜಾವಾಣಿ ೧೪ /೭/೨೦೧೦
ವರದಿ : ಸುರೇಶ್ ಎಡನಾಡು

No comments:

Post a Comment