
Saturday, July 18, 2009
ಇಕೋ ಕ್ಲಬ್ ಉದ್ಘಾಟನೆ/Inaugaration-Eco Club-Neerchal

ಮದುವೆಗೆ ಮುಂಚೆ ಕನ್ಯತ್ವ, ಗರ್ಭ ಪರೀಕ್ಷೆ!/Marriage-pregnency test

ಕಳ್ಳಭಟ್ಟಿ ದುರಂತ, ಪ್ರಮುಖ ಆರೋಪಿ ಸೆರೆ/Gujarath Hooch Tragedy-Arrest
ಆರೋಪಿ ವಿನೋದ್ ತನ್ನ ಹಳ್ಳಿಯಾದ ಖೇಡ್ ಜಿಲ್ಲೆಯ ಮಹೇಮಬಾದ್ ನಲ್ಲಿ ನಕಲಿ ಮಧ್ಯ ತಯಾರಿಸುತ್ತಿದ್ದ. ಪೋಲೀಸರ ಪ್ರಕಾರ ಈತ 1100 ಲೀಟರ್ ನಷ್ಟು ನಕಲಿ ಮಧ್ಯವನ್ನು ಜುಲೈ ಮೊದಲ ವಾರದಲ್ಲಿ ನಗರಕ್ಕೆ ಸರಬರಾಜು ಮಾಡಿದ್ದ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಮದುವೆಗೆ ಮಂಗಳಸೂತ್ರ ಕಡ್ಡಾಯವಲ್ಲ : ಕೋರ್ಟ್/Madras H.Court-Mangalasutra
ಕಲಾದರ್ ಎಂಬ ವ್ಯಕ್ತಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎಂ ಎಂ ಸುಂದರೇಶ್ ಈ ತೀರ್ಪು ನೀಡಿದ್ದಾರೆ. 21 ರ ಹರೆಯದ ಮಹಿಳೆಯ ಜೊತೆ ಕಲಾದರ್ ವಿವಾಹವಾಗಿದ್ದು ನಿಜ ಎಂದು ಕೆಳ ನ್ಯಾಯಾಲಯ ಈ ಹಿಂದೆ ತೀರ್ಪು ನೀಡಿತ್ತು. ಆದರೆ, ತಾನು ಆ ಯುವತಿಗೆ ತಾಳಿಯನ್ನೇ ಕಟ್ಟಿಲ್ಲ. ಹೀಗಾಗಿ ಅದು ಮದುವೆ ಆಗುವುದಿಲ್ಲ ಎಂದು ಕಲಾದರ್ ವಾದಿಸಿದ್ದ.
ದೇವಾಲಯದಲ್ಲಿ ಪುರೋಹಿತರ ಸಮ್ಮುಖದಲ್ಲಿ ನಾವಿಬ್ಬರು ಹಾರ ಬದಲಾಯಿಸಿದ್ದೇವೆ ಎಂದು ಯುವತಿ ವಾದಿಸಿದ್ದರು. 1987 ಡಿಸೆಂಬರ್ 13 ರಂದು ದೇವಾಲಯದಲ್ಲಿ ಈ ಇಬ್ಬರು ಹಾರ ಬದಲಿಸಿಕೊಂಡಿದ್ದರು. ವರದಕ್ಷಿಣೆದೆ ಸಂಬಂಧಿಸಿದಂತೆ ಕಲಾದರ್ ಪತ್ನಿಯನ್ನು ಪೀಡಿಸುತ್ತಿದ್ದ ಎಂದು ಮಹಿಳೆ ನ್ಯಾಯಾಲಯದಲ್ಲಿ ವಿವರಣೆ ನೀಡಿದ್ದಳು.
Friday, July 17, 2009
ಗಾಯಕಿ ಗಂಗೂಬಾಯಿ ಆರೋಗ್ಯಸ್ಥಿತಿ ಗಂಭೀರ/Gangubai Hanagal Serious
ಉಸಿರಾಟದ ತೊಂದರೆಯಿಂದ ಬಳಲುತ್ತಿರವ 97 ವರ್ಷದ ಗಂಗೂಬಾಯಿ ಅವರನ್ನು ಮಂಗಳವಾರ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರ ಆರೋಗ್ಯ ತುಂಬಾ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಅವರನ್ನು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಗಂಗೂಬಾಯಿ ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ನರಳುತ್ತಿದ್ದು, ಇದೀಗ ಚಿಕಿತ್ಸೆಗೆ ಅವರ ಆರೋಗ್ಯ ಸ್ಪಂದಿಸುತ್ತಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ.ಕಾಲಾಮದನಿ ತಿಳಿಸಿದ್ದಾರೆ.
ಏತನ್ಮಧ್ಯೆ ಅನಾರೋಗ್ಯದಿಂದ ಬಳಲುತ್ತಿರುವ ಖ್ಯಾತ ಗಾಯಕಿ ಗಂಗೂಬಾಯಿ ಅವರು ಶೀಘ್ರ ಗುಣಮುಖರಾಗಲೆಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಶುಭ ಹಾರೈಸಿದ್ದಾರೆ.
ಶನಿವಾರ ಪುರಭವನದಲ್ಲಿ ಕಪ್ಪು ಅಕ್ಷರಗಳು/Black Letters
7 ವರ್ಷಗಳ ಹಿಂದೆ ಪ್ರದರ್ಶನ ಕಂಡಿದ್ದ ಈ ಮಲ್ಟಿ ಮೀಡಿಯ ನಾಟಕ ನೂತನ ಆವಿಷ್ಕಾರಗಳೊಂದಿಗೆ ನಗರದಲ್ಲಿ ಮತ್ತೆ ತೆರೆ ಕಾಣಲಿದೆ.
ರಂಗಕಮರ್ಿ ಸಿನಿಮಾ ನಟ ಪ್ರದೀಪ್ ಕಾಸರಗೋಡು ಅಭಿನಯದ ಈ ನಾಟಕವನ್ನು ಗೋಪಿ ಕುತ್ತಿಕೋಲ್ ನಿದರ್ೇಶಿಸಿದ್ದಾರೆ.
ಕನ್ನಡ ಸಹಿತ ಮಲೆಯಾಳ ಮತ್ತು ಇಂಗ್ಲಿಷ್ನಲ್ಲಿಯೂ ಈ ನಾಟಕವನ್ನು ದೇಶದಾದ್ಯಂತ ಪ್ರದಶರ್ಿಸಲಾಗುವುದು.
ಶನಿವಾರ ಶೋಭಾ ಕರಂದ್ಲಾಜೆ ಎಡನೀರಿಗೆ
ಕಾಸರಗೋಡು: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ನಾಳೆ(18ರಂದು) ಇಲ್ಲಿನ ಎಡನೀರು ಮಠವನ್ನು ಸಂದಶರ್ಿಸುವರು.
ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ನೂತನ ಕಟ್ಟಡವನ್ನು ಅವರು ಉದ್ಘಾಟಿಸುವರು.
ಅಡುಗೆ ಅನಿಲ ಸಂಪರ್ಕ : ಸಿದ್ಧತೆ
ಕಾಸರಗೋಡು: ಗೃಹ ಬಳಕೆಯ ಅಡುಗೆ ಅನಿಲ ಪೂರೈಕೆ ಮಾಡದೆ ಉಳಿದಿರುವ ಅಜರ್ಿಯನ್ನು ಶೀಘ್ರದಲ್ಲಿಯೇ ಇತ್ಯರ್ಥಪಡಿಸಬೇಕು ಎಂದು ಕೇಂದ್ರ ಸಕರ್ಾರ ಆದೇಶಿಸಿದ ಹಿನ್ನೆಲೆಯಲ್ಲಿ ಬರುವ ಮೂರು ತಿಂಗಳೊಳಗೆ 70 ಸಾವಿರ ಅಡುಗೆ ಅನಿಲ ಸಂಪರ್ಕ ನೀಡಲು ತೈಲ ಕಂಪೆನಿಗಳು ಸಿದ್ಧತೆ ನಡೆಸುತ್ತಿದೆ.
ರಾಜ್ಯದಲ್ಲಿ ಓಣಂ ಮತ್ತು ರಂಜಾನ್ ಹಬ್ಬದ ಹೊತ್ತಿಗೆ ಸಂಪರ್ಕ ಕಲ್ಪಿಸಲಾಗುವುದು. ಅಲ್ಲದೆ ಹೆಚ್ಚುವರಿ ಸಿಲಿಂಡರ್ ವಿತರಿಸಲು ತೀಮರ್ಾನಿಸಲಾಗಿದೆ.
ದೇವಸ್ವಂ ಮಂಡಳಿ ಅಹವಾಲು ಸ್ವೀಕಾರ
ಮಂಜೇಶ್ವರ: ಮಲಬಾರ್ ದೇವಸ್ವಂ ಮಂಡಳಿಯ ವಿಶೇಷ ಆಯುಕ್ತ ಸಿ.ಮೋಹನ್ ಇದೇ 20ರಂದು ಬೆಳಗ್ಗೆ 11 ಗಂಟೆಗೆ ಕನಿಲ ಶ್ರೀ ಭಗವತಿ ಕ್ಷೇತ್ರದಲ್ಲಿ ಅಹವಾಲುಗಳನ್ನು ಸ್ವೀಕರಿಸುವರು.
ಕಾಸರಗೋಡು ತಾಲೂಕಿನ ವಿವಿಧ ಕ್ಷೇತ್ರ ಸ್ಥಾನಿಕರ ಮತ್ತು ದೇವಸ್ಥಾನಗಳ ಅರ್ಚಕರು, ಸಹಾಯಕ ಅರ್ಚಕರಿಗೆ ಗೌರವ ಧನ ನೀಡಲು ಅಜರ್ಿ ಸ್ವೀಕರಿಸಲಿದ್ದಾರೆ.
ಕಾಸರಗೋಡು ಸರ್ಕಾರಿ ಕಾಲೇಜಿಗೆ 3 ಕೋಟಿ ರೂ./Release Rs.2 Crore- Kasaragod Govt College
ಕಾಸರಗೋಡು: ಕಾಸರಗೋಡು ಸರ್ಕಾರಿ ಕಾಲೇಜಿನ ಸುವರ್ಣ ಸಂಭ್ರಮದ ಪ್ರಯುಕ್ತ ನಿರ್ಮಿಸುವ ಗ್ರಂಥಾಲಯ ಕಟ್ಟಡ, ವಿದ್ಯಾರ್ಥಿ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ 3 ಕೋಟಿ ರೂ.ಗಳ ಯೋಜನೆಗೆ ಅಂಗೀಕಾರ ಲಭಿಸಿದೆ
ಎಂದು ಶಾಸಕ ಸಿ.ಟಿ. ಅಹಮ್ಮದಾಲಿ ತಿಳಿಸಿದ್ದಾರೆ.
ಮಾಲಿನ್ಯ ಸಮಸ್ಯೆ: ಲಾರಿ ತಡೆದ ಸ್ಥಳೀಯರು
ಕಾಸರಗೋಡು: ಇಲ್ಲಿಗೆ ಸಮೀಪದ ಕೇಳುಗುಡ್ಡೆಯಲ್ಲಿ ನಗರದ ತ್ಯಾಜ್ಯಗಳನ್ನು ರಾಶಿ ಹಾಕಿರುವ ಪ್ರದೇಶದಿಂದ ಮಲಿನ ನೀರು ರಸ್ತೆ ಮತ್ತು ಸಮೀಪದ ಮನೆಗಳ ವಠಾರಗಳಲ್ಲಿ ಹರಿಯುತ್ತಿದ್ದು, ಸ್ಥಳೀಯರು ಇಂದು ತ್ಯಾಜ್ಯ ಹೇರಿಕೊಂಡ ಬಂದ ಲಾರಿಗಳನ್ನು ತಡೆದ ಘಟನೆ ನಡೆದಿದೆ.
ನಗರ ಸಭಾ ಸದಸ್ಯನ ಬಂಧನ
ಕಾಸರಗೋಡು: ಇಲ್ಲಿನ ನಗರ ಸಭಾ ಸದಸ್ಯ ಹಾಗೂ ನ್ಯಾಶನಲ್ ಯೂತ್ ಲೀಗ್ ಜಿಲ್ಲಾ ಕಾರ್ಯದರ್ಶಿ ಮಮ್ಮು ಚಾಲ ಎಂಬವರನ್ನು ನಗರ ಪೊಲೀಸರು ಬಂಧಿಸಿದ್ದಾರೆ.
2006 ಅ.30ರಂದು ವಿದ್ಯಾನಗರ ಬಳಿ ಹಾರಿಸ್ ಹಾದಿಮ್ ಎಂಬವರಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿ 5ನೇ ಆರೋಪಿಯಾಗಿರುವ ಮಮ್ಮು ಚಾಲ ಅವರನ್ನು ಬಂಧಿಸುವಂತೆ ನ್ಯಾಯಾಲಯ ವಾರೆಂಟ್ ಹೊರಡಿಸಿದೆ. ಆರೋಪಿ ನ್ಯಾಯಾಲಯದಲ್ಲಿ ಹಾಜರಾಗಿರಲಿಲ್ಲ.
ಇನ್ನೊಂದು ಪ್ರಕರಣದಲ್ಲಿಯೂ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಸರಗೋಡಿನಲ್ಲಿ ಬಿಗ್ಬಜಾರ್: ಅನುಮತಿ ನೀಡದ ನಗರಸಭೆ
ಕಾಸರಗೋಡು: ದೇಶದ ಪ್ರಮುಖ ಸುಪರ್ ಮಾರ್ಕೆಟ್ ಕಂಪೆನಿಯಾಗಿರುವ ಬಿಗ್ಬಜಾರ್ ತನ್ನ ಶಾಖೆಯನ್ನು ಕಾಸರಗೋಡಿನಲ್ಲಿ ತೆರೆಯಲು ಅನುಮತಿ ಕೋರಿ ಸಲ್ಲಿಸಿದ ಅರ್ಜಿಯನ್ನು ನಗರಸಭೆ ತಿರಸ್ಕರಿಸಿದೆ.
ಹೊಸ ಬಸ್ಸು ನಿಲ್ದಾಣದ ಬಳಿ 30,000 ಚದರ ಅಡಿ ವಿಸ್ತೀರ್ಣ ಪ್ರದೇಶದಲ್ಲಿ ಸುಪರ್ ಮಾರ್ಕೆಟ್ ಕಾರ್ಯನಿರ್ವಹಿಸಲು ಸಿದ್ಧತೆಗಳು ನಡೆಯುತ್ತಿದ್ದು, ನಗರದ ವ್ಯಾಪಾರಿಗಳ ಮನವಿಯನ್ನು ಪರಿಗಣಿಸಿ ಈ ಕ್ರಮಕೈಗೊಳ್ಳಲಾಗಿದೆ ಎಂದು ನಗರಸಭೆಯ ಅಧ್ಯಕ್ಷೆ ಬೀಫಾತಿಮಾ ಇಬ್ರಾಹಿಂ ತಿಳಿಸಿದ್ದಾರೆ.
ಪನ್ನಿಪ್ಪಾರೆ ಲೈಂಗಿಕ ದಂಧೆ: ಮಧ್ಯವರ್ತಿ ಸೆರೆ
ಕಾಸರಗೋಡು: ಪನ್ನಿಪ್ಪಾರೆ ಲೈಂಗಿಕ ದಂಧೆಯ ಮಧ್ಯವರ್ತಿ ವಾಹಿದಾ ಎಂಬಾಕೆಯನ್ನು ಶುಕ್ರವಾರ ಸಂಜೆ ನಗರ ಪೊಲೀಸರು ಬಂಧಿಸಿದರು.
ಈ ಪ್ರಕರಣದಲ್ಲಿ ಈಗಾಗಲೇ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿಗೆ ಸಮೀಪದ ಪನ್ನಿಪ್ಪಾರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ 16ರ ಹರೆಯದ ಬಾಲಕಿಯನ್ನು ಕಳೆದ ಎರಡೂವರೆ ವರ್ಷಗಳ ವರೆಗೆ ವಾಹಿದಾ ಮತ್ತು ಕೆಲವು ಮಹಿಳೆಯರು ದಂಧೆಯಲ್ಲಿ ಬಳಸಿಕೊಂಡಿದ್ದಾರೆ.
ಕೆಲವು ದಿನಗಳಿಂದ ಮೌನವಾದ ಈ ಪ್ರಕರಣದ ಕೆಲವು ಆರೋಪಿಗಳನ್ನು ಪಾರು ಮಾಡುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದ ಬೆನ್ನಿಗೆ ಮಧ್ಯವರ್ತಿ ಪೊಲೀಸ್ ಬಲೆಗೆ ಬಿದ್ದಿದ್ದಾಳೆ.
ಬಾವಿ ಕುಸಿತ: ಸಾವು
ಕಾಸರಗೋಡು: ಪಯ್ಯನ್ನೂರು ಸಮೀಪ ಚೆರುಪುಳ ತಿಮಿರಿ ಎಂಬಲ್ಲಿ ಬಾವಿ ಕುಸಿದು ಬಿದ್ದು ಸ್ಥಳೀಯ ಶಾಲಾ ಮುಖ್ಯೋಪಾಧ್ಯಾಯ ಕುಞ್ಞಿರಾಮನ್(51) ಎಂಬವರು ಸಾವನ್ನಪ್ಪಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಅಗ್ನಿಶಾಮಕ ದಳ ಶವವನ್ನು ಮೇಲಕ್ಕೆತ್ತಿದೆ.
ಯುವಕನ ಅಪಹರಣ: ದೂರು
ಕಾಸರಗೋಡು: ನಾಲ್ವರನ್ನೊಳಗೊಂಡ ತಂಡ ಯುವಕನನ್ನು ಅಪಹರಿಸಿದೆ ಎಂದು ಕುಂಬಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಕುಂಬಳೆಯ ಸರ್ಫ್ರಾಸ್ ಯಾನೆ ಮುನ್ನಾ(32) ಅಪಹರಣಕ್ಕೆ ಒಳಗಾದ ಯುವಕ.
ಇತ್ತೀಚೆಗೆ ಶಿರಿಯ ಬಳಿ ನಿಂತಿದ್ದ ಈತನನ್ನು ಪೊಲೀಸ್ ವೇಷಧಾರಿಗಳ ಸಹಿತ ಬಂದ ತಂಡ ಟಾಟಾ ಸುಮೋ ಕಾರಿನೊಳಗೆ ಬಲವಂತವಾಗಿ ಕೂಡಿಹಾಕಿ ಪರಾರಿಯಾಗಿದೆ.
ಪಾಲಿಟೆಕ್ನಿಕ್ಗೆ ಬಾಂಬ್ ಬೆದರಿಕೆ
ಆರೋಪಿ ಸೆರೆ
ಕಾಸರಗೋಡು: ಇತ್ತೀಚೆಗೆ ಕಾಞಂಗಾಡು ಪಾಲಿಟೆಕ್ನಿಕ್ಗೆ ಬಾಂಬ್ ಬೆದರಿಕೆ ಒಡ್ಡಿದ ಆರೋಪಿಯನ್ನು ಪೊಲೀಸರು ಬಂಧಿದ್ದಾರೆ.
ಇದೇ ಸಂಸ್ಥೆಯ ಮೆಕಾನಿಕ್ ದ್ವಿತೀಯ ವರ್ಷದ ವಿದ್ಯಾಥರ್ಿ ಚೆರ್ಕಳದ ಬಾಲನಡ್ಕ ನಿವಾಸಿ ಶ್ಯಾಮ್ರವಿ ಎಂಬಾತನೇ ಆರೋಪಿ.
ಈತ ಇದೇ 13ರಂದು ಕಾಞಂಗಾಡು ಪೆಟ್ರೋಲ್ ಪಂಪ್ ಬಳಿಯ ನಾಣ್ಯ ಬೂತ್ನಿಂದ ಕಾಲೇಜಿಗೆ ಕರೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಘರ್ಷಣೆ: ದುಬೈಯಲ್ಲಿ ಕಾಸರಗೋಡು ನಿವಾಸಿಗೆ ಇರಿತ
ಕಾಸರಗೋಡಿನ ಪೊವ್ವಲ್ ನಿವಾಸಿ ಅಯೂಬ್ ಯಾನೆ ಅಬ್ದುಲ್ಲ ಮುಹಮ್ಮದಲಿ ಎಂಬಾತ ಹೊಟ್ಟೆಗೆ ಗಂಭೀರವಾಗಿ ಗಾಯಗೊಂಡು ದುಬೈಯ ರಾಶಿದ್ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಪಾಕಿಸ್ಥಾನ ಮತ್ತು ಬಲೂಚಿಸ್ಥಾನದ ನಿವಾಸಿಗಳು ಇರಿದಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜುಲೈ 22ರಂದು ಗ್ರಹಣಗಳ ಕೌತುಕ ನೋಡಿ/Eclipsed-July 22nd

ಭೂಹಗರಣ;ಇಂದಿನ ಕಲಾಪವೂ ಗದ್ದಲದಲ್ಲೇ ಅಂತ್ಯ/B'lore: Sesion
ಮಾಯಾವತಿ: ಯುಪಿಸಿಸಿ ಅಧ್ಯಕ್ಷೆ ರೀಟಾ ಬಂಧನ/UPCC President Reeta Arested
ಸಂಗೀತ 'ಭೈರವಿ' ಡಿ.ಕೆ. ಪಾಟ್ಟ್ ಅಮ್ಮಾಳ್ ನಿಧನ /D.K.Pattammal-Obituary
ಮಾತುಕತೆ ಇಲ್ಲ: ಸ್ಪಷ್ಟನೆಗೆ ಹೆಣಗಿದ ಪ್ರಧಾನಿ/No Discusion

ವಿಶ್ವದ ಅತಿ ಕಿರಿಯ ವೆಬ್ ಡಿಸೈನರ್ /Worlds Smallest Web Designer


Thursday, July 16, 2009
ಮಳೆ: ಕಾಸರಗೋಡಿನಲ್ಲಿ 2 ಕೋಟಿ ನಾಶ ನಷ್ಟ/Rain in Ksd
ಕಾಸರಗೋಡು: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೃಷಿ ಮತ್ತು ಮನೆಗಳಿಗೆ ಹಾನಿ ಸಂಭವಿಸಿದ್ದು, 2 ಕೋಟಿ ರೂ. ಮಿಕ್ಕಿ ನಾಶ ನಷ್ಟ ಸಂಭವಿಸಿದೆ.
ಜಿಲ್ಲೆಯಲ್ಲಿ ಇದು ವರೆಗೆ 41 ಮನೆಗಳು ಧರಾಶಾಯಿಯಾಗಿದೆ. 437 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ. ಮನೆಗಳು ಕುಸಿದು ಬಿದ್ದು 37.42 ಲಕ್ಷ ರೂ. ನಾಶ ನಷ್ಟ ಸಂಭವಿಸಿದೆ. 528.4 ಹೆಕ್ಟೇರ್ ಕೃಷಿ ಸ್ಥಳ ಹಾನಿಗೊಂಡಿದ್ದು, 1.19 ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ.
ಜಿಲ್ಲೆಯಲ್ಲಿ ಕಳೆದ 24 ತಾಸುಗಳಲ್ಲಿ 622 ಮಿ.ಮೀ. ಮಳೆಯಾಗಿದೆ. ಇದು ವರೆಗೆ 1,393 .3 ಮಿ.ಮೀ ಮಳೆ ಲಭಿಸಿದೆ.
ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಕುಂಬಳೆ ಸಮೀಪದ ಕೊಯಿಪ್ಪಾಡಿ-ಕೊಪ್ಪಳ ಕಡಪ್ಪುರಗಳಲ್ಲಿ ಕಡಲ್ಕೊರೆತ ತೀವ್ರವಾಗಿದ್ದು, 25ಕ್ಕೂ ಅಧಿಕ ತೆಂಗಿನ ಮರಗಳು ಧರಾಶಾಯಿಯಾಗಿದೆ. ಮನೆ ಹಾನಿಗೊಂಡ 3 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. 8 ಮನೆಗಳು ಅಪಾಯದ ಭೀತಿಯಲ್ಲಿದೆ. ಎಲ್ಲಾ ನದಿಗಳಲ್ಲಿಯೂ ನೀರು ತುಂಬಿ ಹರಿಯುತ್ತಿದೆ.
ಶತಕ ವಂಚಿತ ನೋವು:
ಮಳೆಗೆ ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲಿನ ಮುಂಭಾಗ ಶತಮಾನದ ಹೊಸ್ತಿಲಲ್ಲಿದ್ದ ಬೇವಿನ ಮರ ಧರೆಗೆ ಉರುಳಿದೆ. ಸ್ಥಳೀಯ ವೈದ್ಯ ಜಿ.ಕೆ.ಭಟ್ ಉಬ್ಬಾನ ಅವರು ಈ ಮರದ ತೊಗಟೆ-ಎಲೆಯನ್ನು ಬಳಸಿ ಹಲವು ವರ್ಷಗಳಿಂದ ರೋಗಿಗಳಿಗೆ ಔಷಧಿ ನೀಡಿದ್ದರು. 98 ವರ್ಷಗಳ ಹಿಂದೆ ಶಾಲೆ ಆರಂಭವಾದಾಗ ಈ ಮರವನ್ನೂ ನೆಟ್ಟು ಬೆಳೆಸಲಾಗಿತ್ತು.
ಕೆಂಪು ಮಳೆ:
ತೃಕ್ಕರಿಪುರ ಸಮೀಪದ ಎಡಚ್ಚಕೈ ಶಾಲಾ ವಠಾರದಲ್ಲಿ ಬುಧವಾರ ಸಂಜೆ ವೇಳೆಗೆ ಕೆಂಪು ಬಣ್ಣದ ಮಳೆ ಬಿದ್ದಿದೆ. ರಸ್ತೆ, ಹಳ್ಳ, ಹೊಂಡಗಳಲ್ಲಿ ಸಂಗ್ರಹವಾದ ಕೆಂಪು ನೀರು ಸ್ಥಳೀಯರಲ್ಲಿ ಕುತೂಹಲ ಮೂಡಿಸಿತು.
ಶಸ್ತ್ರಕ್ರಿಯೆ ಇಲ್ಲ:
ಕಾಸರಗೋಡು ಜನರಲ್ ಆಸ್ಪತ್ರೆಯ ಮಹಡಿಗಳಲ್ಲಿ ನೀರು ಸಂಗ್ರಹಗೊಂಡು ರೋಗಿಗಳ ಕೊಠಡಿಗಳಿಗೆ ಹರಿಯುತ್ತಿದೆ. ಎಡೆಬಿಡದ ಮಳೆಗೆ ರೋಗಿಗಳ ಬಟ್ಟೆಬರೆಗಳನ್ನು ಒಣಗಿಸಲಾಗದೆ ಆಸ್ಪತ್ರೆಯ ಸಿಬ್ಬಂದಿಗಳು ಪರದಾಡುತ್ತಿದ್ದಾರೆ. ಬಟ್ಟೆಯನ್ನು ಒಣಗಿಸುವ ಆಧುನಿಕ ಸೌಕರ್ಯ ಆಸ್ಪತ್ರೆಯಲ್ಲಿಲ್ಲ. ಇದರಿಂದ ಶಸ್ತ್ರಕ್ರಿಯೆಯನ್ನು ಮುಂದೂಡಲಾಗಿದೆ.
ಮುನ್ನೆಚ್ಚರಿಕೆ:
ಮುಂದಿನ 48 ತಾಸುಗಳೊಳಗೆ ಜಿಲ್ಲೆಯ ಕಡಲ ತೀರದಲ್ಲಿ ಭಾರೀ ಗಾಳಿ ಬೀಸುವ ಸಂಭವವಿದ್ದು, ಸಮುದ್ರದಲ್ಲಿ ಭಾರೀ ಅಲೆಗಳು ಏಳುವ ಸಾಧ್ಯತೆ ಇದ್ದು ಮೀನುಗಾರರು ಅತೀವ ಜಾಗ್ರತೆ ವಹಿಸುವಂತೆ ಮೀನುಗಾರಿಕಾ ಉಪ ನಿದರ್ೇಶಕರು ಮುನ್ನೆಚ್ಚರಿಕೆ ನೀಡಿದ್ದಾರೆ.
ಕಾಸರಗೋಡಿನಲ್ಲಿ ಎಚ್1 ಎನ್1 ಪತ್ತೆ
ಕಾಸರಗೋಡು: ಕೊಲ್ಲಿ ರಾಷ್ಟ್ರದಿಂದ ಬಂದ ಇಲ್ಲಿನ ತೆಕ್ಕಿಲ್ನ ಕುಟುಂಬವೊಂದರ 7 ವರ್ಷದ ಬಾಲಕನಿಗೆ ಹಂದಿ ಜ್ವರ(ಎಚ್1 ಎನ್1) ಬಾಧಿಸಿ ನಗರದ ಜನರಲ್ ಆಸ್ಪತ್ರೆಯಲ್ಲಿ ಗುರುವಾರ ದಾಖಲಿಸಲಾಗಿದೆ.
ಇತ್ತೀಚೆಗೆ ಕೊಲ್ಲಿರಾಷ್ಟ್ರದಿಂದ ಕಲ್ಲಿಕೋಟೆ ವಿಮಾನ ನಿಲ್ದಾಣ ಮೂಲಕ ಬಂದಿಳಿದ ಕುಟುಂಬವನ್ನು ತಪಾಸಣೆ ಮಾಡಿದಾಗ ಬಾಲಕನಿಗೆ ಹಂದಿ ಜ್ವರ ಇರುವುದು ಖಾತರಿಯಾಗಿತ್ತು. ಇದರಿಂದ ಬಾಲಕನನ್ನು ಕಲ್ಲಿಕೋಟೆಯ ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಅಲ್ಲಿನ ವೈದ್ಯ ಅಧಿಕಾರಿಗಳಿಗೆ ತಿಳಿಸದೆ ಕುಟುಂಬ ಕಾಸರಗೋಡಿಗೆ ಬಂದಿದೆ. ಆದರೆ ಇವರ ಮಾಹಿತಿ ಸಂಗ್ರಹಿಸಿದ ಗುಪ್ತಚರ ವಿಭಾಗ ಕುಟುಂಬ ವಾಸವಿರುವ ಮನೆಯ ವಿಳಾಸ ಪತ್ತೆ ಹಚ್ಚಿ ನಗರ ಪೊಲೀಸರಿಗೆ ಮಾಹಿತಿ ನೀಡಿದೆ. ಇದರ ಪರಿಣಾಮ ಪೊಲೀಸ್ ಮತ್ತು ಕಾಸರಗೋಡು ಜನರಲ್ ಆಸ್ಪತ್ರೆಯ ವೈದ್ಯರು ಮನೆಗೆ ತೆರಳಿ ಬಾಲಕನ್ನು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಬಾಲಕನನ್ನು ತುತರ್ು ನಿಗಾ ಘಟಕದಲ್ಲಿ ಇರಿಸಲಾಗಿದೆ.
ಕ್ವಾಲಿಸ್ ಕಾರು ಬೈಕಿಗೆ ಡಿಕ್ಕಿ: ಚಾಲಕನ ವಿರುದ್ಧ ದೂರು
ಕಾಸರಗೋಡು: ಕ್ವಾಲಿಸ್ ಕಾರು ಬೈಕಿಗೆ ಡಿಕ್ಕಿ ಹೊಡೆದು ನಾಲ್ವರು ಗಾಯಗೊಂಡ ಘಟನೆಗೆ ಸಂಬಂಧಿಸಿ ಚಾಲಕನ ವಿರುದ್ಧ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಾರು ಚಾಲಕ ಮುಳ್ಳೇರಿಯಾ ಸಮೀಪದ ಕುಂಟಾರು ನಿವಾಸಿ ರವೀಶ ತಂತ್ರಿ ಅವರ ವಿರುದ್ಧ ಗಾಯಾಳು ಬೈಕ್ ಸವಾರ ಮಧೂರು ಚೇನೆಕ್ಕೋಡು ನಿವಾಸಿ ಚಂದ್ರಶೇಖರ ದೂರು ನೀಡಿದ್ದಾರೆ.
ಪಾಣತ್ತೂರು ಕ್ಷೇತ್ರ ಕಳವು
ಆರೋಪಿಯ ಬಂಧನ
ಕಾಸರಗೋಡು: ಇಲ್ಲಿನ ಹೊಸದುರ್ಗ ಸಮೀಪದ ಪಾಣತ್ತೂರು ಶ್ರೀ ಅಯ್ಯಪ್ಪ ಕ್ಷೇತ್ರದಿಂದ ಪಂಚಲೋಹ ವಿಗ್ರಹ, ಬೆಳ್ಳಿಯ ಕಿರೀಟಗಳನ್ನು ಕದ್ದ ಆರೋಪಿಯನ್ನು ಪೊಲೀಸರು ಕೊಚ್ಚಿಯಲ್ಲಿ ಬಂಧಿಸಿದ್ದಾರೆ.
ತಳಿಪರಂಬ ಚೆರುಪುಳ ನಿವಾಸಿ ಜೋಬಿ ಎಂಬಾತನೇ ಬಂಧಿತ ವ್ಯಕ್ತಿ. ಕಾರು ಕಳವು ಪ್ರಕರಣದಲ್ಲಿಯೂ ಈತ ಶಾಮೀಲಾಗಿದ್ದಾನೆ.
9 ಕಿಲೋ ಭಾರವಿರುವ ಪಂಚಲೋಹ ವಿಗ್ರಹ ಮತ್ತು 5 ಕಿಲೋ ಬೆಳ್ಳಿಯ ಕಿರೀಟವನ್ನು ಮಾರುತ್ತಿದ್ದ ವೇಳೆ ಪೊಲೀಸರು ಬಂಧಿಸಿದರು. ಗ್ರಾಹಕರ ಸೋಗಿನಲ್ಲಿ ಬಂದ ಪೊಲೀಸರು ಆರೋಪಿಯನ್ನು ಕೈಯಾರೆ ಸೆರೆ ಹಿಡಿದರು. ಕಳೆದ 6ರಂದು ಕಳವು ನಡೆದಿತ್ತು.
ಕುಸಿದು ಬಿದ್ದು ಸಾವು
ಕಾಸರಗೋಡು: ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಇಲ್ಲಿನ ಪೆರಿಯ ಬಸ್ಸು ನಿಲ್ದಾಣದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಆಲಕ್ಕೋಡು ದೇವಕಿ ಎಂಬವರ ಪುತ್ರ ಮಹೇಂದ್ರನ್(45) ಸಾವನ್ನಪ್ಪಿದವರು.
ಚೆಕ್ ಪೋಸ್ಟ್ ವಿಸ್ತರಣೆಗೆ ಕ್ಷೇತ್ರ ಸ್ಥಳ ಮುಟ್ಟುಗೋಲು :
ಹೈಕೋಟರ್ು ತಡೆಯಾಜ್ಞೆ
ಮಂಜೇಶ್ವರ: ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರಿ ದೇವಸ್ಥಾನದ ಸ್ಥಳವನ್ನು ಚೆಕ್ ಪೋಸ್ಟ್ ವಿಸ್ತರಣೆಗೆ ಮುಟ್ಟುಗೋಲು ಹಾಕಿದ ಸಕರ್ಾರದ ಕ್ರಮದ ವಿರುದ್ಧ ಹೈಕೋಟರ್ು ತಡೆಯಾಜ್ಞೆ ನೀಡಿದೆ.
ಕ್ಷೇತ್ರ ಸ್ಥಳವನ್ನು ವಶಪಡಿಸಬಾರದು ಎಂದು ಆಗ್ರಹಿಸಿ ಕ್ಷೇತ್ರದ ಭಕ್ತಾದಿಗಳು ಶಾಸಕರಿಗೆ ಮನವಿ ಸಲ್ಲಿಸಿದ್ದರು. ಆದರೆ ಸಕರ್ಾರದಿಂದ ಯಾವುದೇ ಫಲ ಲಭಿಸದ ಕಾರಣ ಕ್ಷೇತ್ರದ ಭಕ್ತಾದಿಗಳು ನ್ಯಾಯಾಲಯದ ಮೊರೆ ಹೋಗಿದ್ದರು.
ನಾಪತ್ತೆಯಾದ ಯುವತಿ ಠಾಣೆಯಲ್ಲಿ ಹಾಜರು
ಮಂಜೇಶ್ವರ : ನಾಪತ್ತೆಯಾಗಿದ್ದ ಯುವತಿಯನ್ನು ಮಂಜೇಶ್ವರ ಪೊಲೀಸರು ಕಾಸರಗೋಡು ಪ್ರಥಮ ದಜರ್ೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ.
ಪೈವಳಿಕೆ ಜೋಡುಕಲ್ಲು ನವೋದಯ ನಗರದ ನಿವಾಸಿ ಕೃಷ್ಣನ್ ಎಂಬವರು ತಮ್ಮ ಪುತ್ರಿ ಚಂದ್ರಿಕಾ ಕಳೆದ ಜೂನ್ 26ರಂದು ನಾಪತ್ತೆಯಾಗಿದ್ದಾಳೆ ಎಂದು ದೂಉ ನೀಡಿದ್ದರು. ಯುವತಿ ಬುಧವಾರ ಬೆಳಗ್ಗೆ ಮಂಜೇಶ್ವರ ಠಾಣೆಯಲ್ಲಿ ಹಾಜರಾಗಿದ್ದಳು. ಯುವತಿಯ ಇಚ್ಛೆಯಂತೆ ನ್ಯಾಯಾಲಯ ಆಕೆಯನ್ನು ಹೆತ್ತವರ ಜತೆ ತೆರಳುವಂತೆ ಅನುಮತಿ ನೀಡಿದೆ.
ರಸ್ತೆ ತಡೆ: 30 ಮಂದಿ ವಿರುದ್ಧ ಪ್ರಕರಣ ದಾಖಲು
ಮಂಜೇಶ್ವರ: ರಸ್ತೆ ತಡೆ ನಿಮರ್ಿಸಿ ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡಿದ ಮುಸ್ಲಿಂ ಯೂತ್ ಲೀಗ್ ಕಾರ್ಯಕರ್ತರ ವಿರುದ್ಧ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಬುಧವಾರ 8 ಮಂದಿಯನ್ನು ಬಂಧಿಸಲಾಗಿದ್ದು, 30 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕೆಟ್ಟು ಹೋದ ರಾಷ್ಟ್ರೀಯ ಹೆದ್ದಾರಿಯ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ಉಪ್ಪಳ ಗೇಟ್ ಬಳಿ ಲೀಗ್ ಕಾರ್ಯಕರ್ತರು ಬುಧವಾರ ರಸ್ತೆ ತಡೆ ನಡೆಸಿದ್ದರು.
ನಾಳೆ ಕೆ.ಎಸ್.ಟಿ.ಎ. ಧರಣಿ/KSTA Dharna
ಅರ್ಧಯಾಪಕರ ಹುದ್ದೆ ಸಂರಕ್ಷಣೆ ಖಾತರಿಪಡಿಸಬೇಕು, ಮೇನೇಜರುಗಳ ಅಧಿಕಾರ ಕೊನೆಗೊಳಿಸಬೇಕು, ಪಂಚಾಯ್ತಿ ಶಾಲೆಗಳ ಅಧ್ಯಾಪಕರನ್ನೂ ಸಕರ್ಾರಿ ಶಾಲಾ ಅಧ್ಯಾಪಕರಾಗಿ ಪರಿಗಣಿಸಬೇಕು, ಆದಾಯ ರಹಿತ ಶಾಲೆಗಳ ನೇಮಕಾತಿಗೆ ಅಂಗೀಕಾರ ನೀಡಬೇಕು ಮೊದಲಾದ 19 ಬೇಡಿಕೆಗಳನ್ನು ಮುಂದಿರಿಸಿ ಧರಣಿ ನಡೆಸಲಾಗುವುದು ಎಂದವರು ವಿವರಿಸಿದರು.
ಧರಣಿಯನ್ನು ಸಂಘಟನೆಯ ಉಪಾಧ್ಯಕ್ಷ ಕೆ.ಜಿ.ಬಾಬು ಉದ್ಘಾಟಿಸುವರು. ಜಿಲ್ಲಾಧ್ಯಕ್ಷ ಎಂ. ಬಾಲಕೃಷ್ಣನ್ ಅಧ್ಯಕ್ಷತೆ ವಹಿಸುವರು.
ಪತ್ರಿಕಾಗೋಷ್ಠಿಯಲ್ಲಿ ನಾರಾಯಣನ್ ಮಾಸ್ಟರ್ ಟಿ.ವಿ, ಎಂ. ಬಾಲಕೃಷ್ಣನ್, ಕೆ.ರಾಘವನ್, ಕೆ.ವಿ.ಗೋವಿಂದನ್, ಪಿ.ವಿ.ಶ್ರೀದೇವಿ ಹಾಜರಿದ್ದರು.
ಉಚಿತ ಸಮವಸ್ತ್ರ ವಿತರಣೆ
ಕಾಸರಗೋಡು: ತ್ಯಾಗ ಹಾಗೂ ಸೇವಾ ಮನೋಭಾವಗಳನ್ನು ರೂಪಿಸುವ ಮೂಲಕ ಉತ್ತಮ ಸಮಾಜ ನಿಮರ್ಾಣ ಸಾಧ್ಯ ಎಂದು ಡಾ.ಅನಂತ ಕಾಮತ್ ಅಭಿಪ್ರಾಯಪಟ್ಟರು.
ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಎ.ಬಿ.ವಿ.ಪಿ. ರಾಮದಾಸ ನಗರ ಘಟಕದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯ ಸಮಿತಿ ಸದಸ್ಯ ಕೃಷ್ಣ ದಾಸ್ ವೈ ಅಧ್ಯಕ್ಷತೆ ವಹಿಸಿದ್ದರು. ಕೂಡ್ಲು ಶಾಲಾ ಮೇನೇಜರ್ ಸದಾಶಿವ ಶ್ಯಾನುಭೋಗ್, ಮುಖ್ಯೋಪಾಧ್ಯಾಯ ವೆಂಕಟರಮಣ ಭಟ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ನಾರಾಯಣಯ್ಯ, ಅಧ್ಯಾಪಕರಾದ ನರಸಿಂಹ ಮಯ್ಯ, ಅರವಿಂದ ಎಂ.ಕೆ. ಹಾಜರಿದ್ದರು.
ಘಟಕ ಅಧ್ಯಕ್ಷ ಶ್ರೀನಾಥ್ ಸ್ವಾಗತಿಸಿ, ಅಧ್ಯಾಪಕ ವೇಣುಗೋಪಾಲ ಕೆ. ಕಾರ್ಯಕ್ರಮ ನಿರೂಪಿಸಿದರು.
ಚೆನ್ನಾಗಿ ಓದಿ, ಭಾರತವನ್ನು ಹಿಂದಿಕ್ಕಿ: ಒಬಾಮಾ ಉಪದೇಶ/Study well-Defeat India-OBAMA
ತಾವು 21ನೇ ಶತಮಾನದಲ್ಲಿ ಚೀನಾ ಮತ್ತು ಭಾರತ ಜತೆ ಸ್ಪರ್ಧಿಸಲು ಅಮೆರಿಕಕ್ಕೆ ನೆರವಾಗುವಂತಹ ಶಿಕ್ಷಣ ವ್ಯವಸ್ಥೆಗೆ ಅಡಿಪಾಯ ಹಾಕುತ್ತಿರುವುದಾಗಿ ಒಬಾಮಾ ತಿಳಿಸಿದರು. ಚೀನಾ ಮತ್ತು ಭಾರತದ ಜತೆ ಶಿಕ್ಷಣದಲ್ಲಿ ಸ್ಪರ್ಧಿಸುವುದಕ್ಕೆ ಅವಕಾಶ ಕಲ್ಪಿಸುವ ಅಡಿಪಾಯ ನಿರ್ಮಾಣಕ್ಕೆ ಈಗಾಗಲೇ ನಾವು ಕೆಲವು ಕ್ರಮಗಳನ್ನು ಕೈಗೊಂಡಿರುವುದಾಗಿ 'ಅಮೆರಿಕ ಪದವಿ ಉಪಕ್ರಮ' ಪ್ರಕಟಿಸಿದ ವಾರನ್ ಮಿಚಿಗನ್‌ನಲ್ಲಿ ಜನರ ಗುಂಪಿನ ಹರ್ಷೋದ್ಗಾರದ ನಡುವೆ ತಿಳಿಸಿದರು.
ಶ್ವೇತಭವನಕ್ಕೆ ಪ್ರವೇಶಿಸಿದ ಕೂಡಲೇ ಮತ್ತು ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕೂಡ ಅಮೆರಿಕ ಪೋಷಕರಿಗೆ ಈ ಕುರಿತು ಒತ್ತಾಯಿಸಿದ್ದರು. ಆಡಳಿತಕ್ಕೆ ಕಾಲಿಡುವ ಸಂದರ್ಭದಲ್ಲಿ ಅಮೆರಿಕಕ್ಕೆ ಗುರಿಯೊಂದನ್ನು ಇರಿಸಿದ್ದಾಗಿ ಅವರು ತಿಳಿಸಿದರು. 2020ರೊಳಗೆ ಈ ರಾಷ್ಟ್ರದಲ್ಲಿ ಮತ್ತೊಮ್ಮೆ ವಿಶ್ವದಲ್ಲೇ ಕಾಲೇಜು ಪದವೀಧರರ ಅತ್ಯಧಿಕ ಪ್ರಮಾಣವಿರುತ್ತದೆ.
ನಾವು ಅದನ್ನು ಪುನಃ ಪಡೆಯುತ್ತೇವೆ ಎಂದು ಒಬಾಮಾ ಸಭಿಕರ ಕರತಾಡನದ ನಡುವೆ ಹೇಳಿದರು.ವಿಶ್ವದಲ್ಲೇ ಅತ್ಯಧಿಕ ಕಾಲೇಜು ಪದವೀಧರ ಪ್ರಮಾಣದ ಗುರಿಯನ್ನು ಮುಟ್ಟುವ ಉದ್ದೇಶ ಹೊಂದಿರುವ ಅಮೆರಿಕ ಪದವೀಧರ ಉಪಕ್ರಮವನ್ನು ಪ್ರಕಟಿಸಿದ ಅವರು, ಮುಂದಿನ 10 ವರ್ಷಗಳಲ್ಲಿ ನಾವು ಅದನ್ನು ಸಾಧಿಸುತ್ತೇವೆಂದು ಹೇಳಿದರು.
ಇರಾಕ್ ಆತ್ಮಾಹುತಿ ಬಾಂಬರ್ ದಾಳಿಗೆ 6 ಬಲಿ/Irak-6 Death
ಕನಿಷ್ಠ ಇಬ್ಬರು ಟ್ರಾಫಿಕ್ ಪೊಲೀಸರು ದಾಳಿಯಲ್ಲಿ ಸತ್ತಿದ್ದು, ಗಾಯಗೊಂಡವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.ರಮಾಡಿ ಅನ್ಬಾರ್ ಪಶ್ಚಿಮ ಪ್ರಾಂತ್ಯದ ಮುಖ್ಯ ನಗರವಾಗಿದ್ದು, ಸುನ್ನಿ ಭಯೋತ್ಪಾದಕತೆಯ ಮುಂಚಿನ ಕೇಂದ್ರವಾಗಿದೆ. ಆದರೆ ಕಳೆದ ಎರಡು ತಿಂಗಳಿಂದ ಬುಡಕಟ್ಟು ನಾಯಕರು ಉಗ್ರರ ನಂಟನ್ನು ತ್ಯಜಿಸಿ ಅಮೆರಿಕ ನೇತೃತ್ವದ ಪಡೆಗಳಿಗೆ ಬೆಂಬಲಿಸಿದ್ದರಿಂದ ಹಿಂಸಾಚಾರವು ತೀವ್ರವಾಗಿ ತಗ್ಗಿದೆ.
ಚೆಕ್ ಪಾಯಿಂಟ್ ಬಳಿ ವಾಹನಗಳನ್ನು ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದಾಗ ಸಾಲಿನ ಕೊನೆಯಲ್ಲಿದ್ದ ವಾಹನವೊಂದು ಹಠಾತ್ತನೇ ಸ್ಫೋಟಿಸಿತೆಂದು ಪೊಲೀಸ್ ಲೆಫ್ಟಿನೆಂಟ್ ಹತೀಂ ಅಬೀದ್ ತಿಳಿಸಿದ್ದಾರೆ. ಗಾಯಗೊಂಡರವರಲ್ಲಿ ಕೆಲವರು ಗಂಭೀರ ಸ್ಥಿತಿಯಲ್ಲಿದ್ದು ಸತ್ತವರ ಸಂಖ್ಯೆ ಇನ್ನೂ ಹೆಚ್ಚಬಹುದೆಂದು ರಾಮಾಡಿ ಆಸ್ಪತ್ರೆಯ ವೈದ್ಯ ತಿಳಿಸಿದ್ದಾರೆ. ಅಮೆರಿಕ ಪಡೆಗಳು ಇರಾಕ್ ಪಟ್ಟಣಗಳು ಮತ್ತು ನಗರಗಳಿಂದ ಸಂಪೂರ್ಣವಾಗಿ ಹಿಂತೆಗೆದುಕೊಂಡ ಎರಡು ವಾರಗಳಲ್ಲೇ ಆತ್ಮಾಹುತಿ ಬಾಂಬ್ ದಾಳಿ ಸಂಭವಿಸಿದೆ.
ಉಗ್ರರಿಗೆ ಬೆಂಬಲಿಸುವಂತೆ ಜವಾಹರಿ ಒತ್ತಾಯ/ Al qaeda
ಜಿಹಾದಿ ವೆಬ್ ವೇದಿಕೆಗಳಲ್ಲಿ ವಿಡಿಯೊ ಚಿತ್ರವನ್ನು ಪೋಸ್ಟ್ ಮಾಡಲಾಗಿದೆಯೆಂದು ಸೈಟ್ ಗುಪ್ತಚರ ಮಾಹಿತಿ ತಿಳಿಸಿದೆ. ಪಾಕಿಸ್ತಾನವು ಎರಡು ಶಕ್ತಿಗಳ ನಡುವೆ ಭೀಕರ ಆಂತರಿಕ ಸಂಘರ್ಷದಲ್ಲಿ ಆಳವಾಗಿ ಮುಳುಗಿದೆ.
ಒಂದು ಇಸ್ಲಾಮಿಕ್ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ ಮತ್ತು ಇನ್ನೊಂದು ಪಾಶ್ಚಿಮಾತ್ಯ ಹಿತಾಸಕ್ತಿಯನ್ನು ಬೆದರಿಸುವ ಹೋರಾಟಗಾರರನ್ನು ನಿಸ್ಸತ್ವಗೊಳಿಸುವ ಅಮೆರಿಕ ನೇತೃತ್ವದ ಧರ್ಮಯುದ್ಧವೆನ್ನುವುದು ನಿಚ್ಚಳವಾಗಿದೆಯೆಂದು ಜವಾಹಿರಿ ತಿಳಿಸಿದ್ದಾನೆ. ನಾವು ಮುಜಾಹಿದ್ದೀನ್‌ಗೆ ಬೆಂಬಲ ನೀಡದೇ ಜಡವಾಗಿದ್ದರೆ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ನಾಶಕ್ಕೆ ಕೊಡುಗೆ ನೀಡುತ್ತೇವಲ್ಲದೇ, ಅಲ್ಲಾನ ನೋವಿನ ಶಿಕ್ಷೆಗೆ ಅರ್ಹರಾಗುತ್ತೇವೆ ಎಂದು ಜವಾಹಿರಿ ಹೇಳಿದ್ದಾನೆ.
ನ್ಯೂಜಿಲೆಂಡ್‌ನಲ್ಲಿ ಪ್ರಬಲ ಭೂಕಂಪ/Erthquake-New zealand
ಆದಾಗ್ಯೂ, ಪೆಸಿಫಿಕ್ ಸಾಗರದಲ್ಲಿ ಸುನಾಮಿ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ. ಭೂಕಂಪದಿಂದಾಗಿ ನ್ಯೂಜಿಲೆಂಡ್ ದಕ್ಷಿಣ ದ್ವೀಪದಲ್ಲೂ ಕಂಪನ ಉಂಟಾಗಿದೆ.ಯಾವುದೇ ಸಾವುನೋವಿನ ಬಗ್ಗೆ ವರದಿಯಾಗಿಲ್ಲ ಮತ್ತು ಭೂಕಂಪದಿಂದ ಸುನಾಮಿ ಎದ್ದಿರುವ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಇಷ್ಟೊಂದು ತೀವ್ರತೆಯ ಭೂಕಂಪದಿಂದ ವಿನಾಶಕಾರಿ ಸುನಾಮಿ ಅಲೆಗಳು ಏಳುವ ಸಾಮರ್ಥ್ಯ ಹೊಂದಿದ್ದು, ಭೂಕಂಪಕೇಂದ್ರ ಬಿಂದುವಿನ ಬಳಿಯ ಕರಾವಳಿ ತೀರಗಳನ್ನು ಅಪ್ಪಳಿಸಬಹುದೆಂದು ಮುನ್ನೆಚ್ಚರಿಕೆ ಕೇಂದ್ರವು ಹೇಳಿಕೆಯಲ್ಲಿ ತಿಳಿಸಿದೆ.
ಸ್ಥಳೀಯ ಕಾಲಮಾನ ರಾತ್ರಿ 9.22ಕ್ಕೆ ಭೂಕಂಪವನ್ನು ಗುರುತಿಸಲಾಗಿದೆಯೆಂದು ವರದಿಗಳು ತಿಳಿಸಿವೆ. ನ್ಯೂಜಿಲೆಂಡ್ ಉತ್ತರ ದ್ವೀಪದಲ್ಲಿ ಕಳೆದ ತಿಂಗಳು 13 ಗಂಟೆಗಳಲ್ಲಿ 8 ಭೂಕಂಪಗಳ ಸರಣಿ ಅಪ್ಪಳಿಸಿದೆ. ನ್ಯೂಜಿಲೆಂಡ್ ಸುತ್ತಮುತ್ತ ಪ್ರತಿವರ್ಷ 10,000ದಿಂದ 15,000 ಭೂಕಂಪಗಳು ಅಪ್ಪಳಿಸುತ್ತಿವೆ. ನ್ಯೂಜಿಲೆಂಡ್‌ನಲ್ಲಿ ಅತ್ಯಂತ ಭೀಕರ ಭೂಕಂಪವು 1855ರಲ್ಲಿ ಸಂಭವಿಸಿದ ವೈರಾರಾಪ ಭೂಕಂಪವಾಗಿದೆ.
ಇರಾನ್ ವಿಮಾನ ಅಪಘಾತ: 168 ಜನರ ಸಾವು/Iran Plane Accident
ಟೆಹರಾನ್‌ನಿಂದ ಆರ್ಮೇನಿಯ ರಾಜಧಾನಿ ಯೆರೆವಾನ್ ಕಡೆಗೆ ತೆರಳುತ್ತಿದ್ದ ಕಾಸ್ಪಿಯನ್ ಏರ್‌ಲೈನ್ಸ್ ಜೆಟ್ ವಿಮಾನವು ಕಾಜ್ವಿನ್ ನಗರದ ಹೊರಗೆ ಜನ್ನತಾಬಾದ್ ಗ್ರಾಮದ ಬಳಿ ಪತನಗೊಂಡಿತೆಂದು ರಾಷ್ಟ್ರ ಸ್ವಾಮ್ಯದ ಟೆಲಿವಿಷನ್ ತಿಳಿಸಿದೆ. ವಿಮಾನವು ಅಪಘಾತದಿಂದ ಸಂಪೂರ್ಣ ನಾಶವಾಗಿದ್ದು, ಚೂರುಚೂರಾಗಿದೆಯೆಂದು ಮತ್ತು ಅವಶೇಷವು ಬೆಂಕಿಯ ಜ್ವಾಲೆಗೆ ತಿರುಗಿದ್ದಾಗಿ ಕಾಜ್ವಿನ್ ತುರ್ತು ಸೇವೆ ನಿರ್ದೇಶಕ ಹೊಸೈನ್ ಬಹಜಡ್‌ಪೋರ್ ತಿಳಿಸಿದ್ದಾರೆ.
ಕಾಸ್ಪಿಯನ್ ಏರ್‌ಲೈನ್ಸ್ ರಷ್ಯಾ-ಇರಾನ್ ಜಂಟಿ ಯೋಜನೆಯಾಗಿದ್ದು 1993ರಲ್ಲಿ ನಿರ್ಮಿಸಲಾಗಿದೆ. ಇರಾನ್‌ನಲ್ಲಿ ಆಗಾಗ್ಗೆ ವಿಮಾನ ಅಪಘಾತಗಳು ಉಂಟಾಗುತ್ತಿದ್ದು, ಅಮೆರಿಕದ ದಿಗ್ಬಂಧನದಿಂದಾಗಿ ಹಳೆಯ ವಿಮಾನಗಳಿಗೆ ಬಿಡಿಭಾಗ ಸಿಗುವುದು ಕಷ್ಟಾವಾದ್ದರಿಂದ ವಿಮಾನ ಅಪಘಾತಗಳು ಉಂಟಾಗುತ್ತಿದೆಯೆಂದು ಅಮೆರಿಕದ ಮೇಲೆ ಆರೋಪ ಹೊರಿಸಿದೆ.
ಉಡುಪಿ ಪರ್ಯಾಯಕ್ಕೆ 'ಕಟ್ಟಿಗೆ ಮುಹೂರ್ತ'/Udupi Paryaya
ಉಡುಪಿ: ಮುಂದಿನ ಪರ್ಯಾಯ ಪೀಠದ ಸ್ವಾಮೀಜಿಗಳಾದ ಶಿರೂರು ಮಠದ ಲಕ್ಷ್ಮೀವರತೀರ್ಥರು ತೃತೀಯ ಕೃಷ್ಣಪೂಜಾ ಪರ್ಯಾಯದ ಪೂರ್ವಭಾವಿ ಕಾರ್ಯಕ್ರಮ 'ಕಟ್ಟಿಗೆ ಮುಹೂರ್ತ'ಕ್ಕೆ ಮಂಗಳವಾರ ಮಧ್ವತೀರ್ಥದ ಬಳಿ ಚಾಲನೆ ನೀಡಿದರು.
ಸಾಂಪ್ರದಾಯಿಕ ರೀತಿಯಲ್ಲಿ ಸಿಂಗರಿಸಿದ ಶಿರೂರು ಮಠದಿಂದ ಡೋಲು, ತಮಟೆ, ನಗಾರಿ, ಆನೆಯ ಮೆರವಣಿಗೆಯೊಂದಿಗೆ ಸುಮುಹೂರ್ತ ಪ್ರಾರಂಭಿಸಿದ ಸ್ವಾಮೀಜಿ ಚಂದ್ರಮೌಳೇಶ್ವರ, ಅನಂತೇಶ್ವರ, ಕೃಷ್ಣಮಠ ಮತ್ತು ಮುಖ್ಯಪ್ರಾಣದೇವರ ಗುಡಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಕನಕನ ಕಿಂಡಿಯಿಂದ ಕೃಷ್ಣನನ್ನು ನೋಡಿದರು, ಅಷ್ಟಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಅಲ್ಲಿಂದ ಕಟ್ಟಿಗೆ ಹೊತ್ತ ತಂಡದೊಂದಿಗೆ ರಥಬೀದಿಯನ್ನು ಸುತ್ತುಹಾಕಿ ಬಳಿಕ ಮಧ್ವಮಠದ ಬಳಿ ಬಂದು ಕಟ್ಟಿಗೆಯನ್ನು ಕಂಬಕ್ಕೆ ಆನಿಸಿ ಪುರೋಹಿತರಿಂದ ಅದನ್ನು ಪೂಜಿಸಿ ಕಟ್ಟಿಗೆ ಮುಹೂರ್ತಕ್ಕೆ ಅಧಿಕೃತ ಚಾಲನೆ ನೀಡಿದರು.
ಅಲ್ಲದೇ ಮಧ್ನಾಹ್ನ 12ರಿಂದ ರಾತ್ರಿ 12ರವರೆಗೆ ನಿರಂತರವಾಗಿ ಭಕ್ತರಿಗೆ ಅನ್ನಸಂತರ್ಪಣೆ ಮಾಡುವ ಮಹತ್ತರವಾದ ಉದ್ದೇಶ ಹೊಂದಿರುವುದಾಗಿ ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಭಾಗಮಂಡಲದಲ್ಲಿ ವರುಣನ ರೌದ್ರಾವತಾರ; ಒಬ್ಬ ಬಲಿ/Rain-Bhagamandala-1Death
ರಾಜ್ಯದ ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಬುಧವಾರವೂ ಕುಂಭದ್ರೋಣ ಮಳೆಯ ರೌದ್ರಾವತಾರ ಮುಂದುವರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಡಿಕೇರಿಯಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಹಲವಾರು ಮನೆಗಳು ಕುಸಿತಗೊಂಡಿದೆ.
ವರುಣನ ರೌದ್ರಾವತಾರದಿಂದಾಗಿ ರಸ್ತೆ ಸಂಚಾರ ಕಡಿದು ಹೋಗಿದೆ. ಕೆಲ ಜಿಲ್ಲೆಗಳ ಗ್ರಾಮಗಳು ಜಲಾವೃತವಾಗಿ ದ್ವೀಪಗಳಾಗಿ ಹೋಗಿವೆ. ಯುಗಚಿ ಜಲಾಶಯ ಭರ್ತಿಯಾಗಿದ್ದು, ಹಾರಂಗಿ ಜಲಾಶಯವೂ ಭರ್ತಿ ಆಗುತ್ತ ಸಾಗಿದೆ. ಭಾಗಮಂಡಲದಲ್ಲಿ ಅತೀ ಹೆಚ್ಚು ಅಂದರೆ ಸುಮಾರು 30 ಸೆಂಮೀ ಮಳೆ ಆಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಡಿಕೇರಿಯ ಭಾಗಮಂಡಲ ದ್ವೀಪವಾಗಿದ್ದು, ರಸ್ತೆ ಸಂಚಾರ ಸಂಪೂರ್ಣ ಕಡಿದು ಹೋಗಿದೆ. ತಲಕಾವೇರಿ-ಭಾಗಮಂಡಲ ವ್ಯಾಪ್ತಿಯಲ್ಲಿಯೂ ಮಳೆಯ ರೌದ್ರಾವತಾರ ಜೋರಾಗಿದ್ದು, ತ್ರಿವೇಣಿ ಸಂಗಮ ಮತ್ತೆ ಜಲಾವೃತವಾಗಿದೆ. ಭಾಗಮಂಡಲ-ಮಡಿಕೇರಿ ರಸ್ತೆಯ ಚಿಕ್ಕ ಕೊಳ್ಳದಂತಾಗಿದ್ದು, ರಸ್ತೆಯಲ್ಲಿ ನಾಲ್ಕೈದು ಅಡಿ ನೀರು ನಿಂತಿದೆ. ಮಡಿಕೇರಿ-ಮೆಟ್ಟಳ್ಲಿ ಮತ್ತು ಮಡಿಕೇರಿ-ಮೂರ್ನಾಡು ನಡುವಿನ ರಸ್ತೆಯಲ್ಲಿ ಭೂಕುಸಿತ ಉಂಟಾಗಿದೆ. ಮಡಿಕೇರಿಯ ಮರಗೋಡು ಗ್ರಾಮದ ಕಾಫಿತೋಟದಲ್ಲಿ ಮರ ಉರುಳಿದ್ದರಿಂದ ಕಾರ್ಮಿಕ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯನ್ನು ಮಹೇಶ್ ಎಂದು ಗುರುತಿಸಲಾಗಿದೆ.
ಕೊಡಗಿನ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಗಾಳಿಯೂ ಕೂಡಾ ಹುಚ್ಚೆದ್ದು ಬೀಸತೊಡಗಿದೆ. ಅಪಾಯ ಪ್ರದೇಶದಲ್ಲಿರುವ ಜನರನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಂಡಿರುವ ವರದಿಯಾಗಿದೆ. ಕೆಲವಡೆ ಭೂಕುಸಿತ ಉಂಟಾಗಿದೆ. ಮಲೆನಾಡಿನ ಸೆರಗು ಜಿಲ್ಲೆ ಹಾವೇರಿ ಜಿಲ್ಲೆಯಲ್ಲಿ ಕೂಡಾ ಮಳೆ ತೀವ್ರತೆ ಹೆಚ್ಚಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಭಾಗಮಂಡಲ-30, ಕೊಟ್ಟಿಗೆಹಾರ, ಕಮ್ಮರಡಿ-25, ಹಂಚದಕಟ್ಟೆ-23, ಕೊಲ್ಲೂರು-22, ಪೊನ್ನಂಪೇಟೆ-21, ಸಿದ್ದಾಪುರ-20, ಭಟ್ಕಳ-18, ಖಾನಾಪುರ, ಹೊಸನಗರ, ತೀರ್ಥಹಳ್ಳಿ-17, ಲಿಂಗನಮಕ್ಕಿ, ಜಯಪುರ-16, ಜಗಲ್ ಪೇಟೆ-15, ಸಿದ್ದಾಪುರ-14, ಧರ್ಮಸ್ಥಳ, ಯಲ್ಲಾಪುರ, ಮೂಡಿಗೆರೆ, ಮಡಿಕೇರಿ, ಎನ್ ಆರ್ ಪುರ-13 ಸೆಂ ಮೀನಷ್ಟು ಭಾರಿ ಮಳೆ ಬಿದ್ದಿದೆ.
ಪೇಜಾವರಶ್ರೀ ಸೇರಿ 11ಮಠಾಧೀಶರಿಗೆ ಭದ್ರತೆ/Security for Pejavara
ಸ್ವಾಮೀಜಿಗಳಿಗೆ ವಿವಿಧ ರೀತಿಯ ಬೆದರಿಕೆಗಳಿದ್ದು, ಬೆದರಿಕೆಯ ಸ್ವರೂಪ ಮತ್ತು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಸ್ವಾಮೀಜಿಗಳಿಗೆ ಭದ್ರತೆ ನೀಡಲಾಗಿದೆ. ಇದಕ್ಕಾಗಿ ಸರ್ಕಾರ ವಾರ್ಷಿಕ 54.67ಲಕ್ಷ ರೂ.ವ್ಯಯಿಸುತ್ತಿದೆ.
ಜೆಡಿಎಸ್‌ನ ಎಸ್.ಬಸವರಾಜನ್ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಗೃಹಸಚಿವ ವಿ.ಎಸ್.ಆಚಾರ್ಯ ಮಂಗಳವಾರ ಸದನದಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ಈ ವಿವರ ನೀಡಿದ್ದಾರೆ.
ಈ ಸ್ವಾಮೀಜಿಗಳಿಗೆ ತಗಲುವ ಖರ್ಚನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಇದೇ ವೇಳೆ ರಾಜ್ಯದಲ್ಲಿ ಕೆಲವು ಖಾಸಗಿ ವ್ಯಕ್ತಿಗಳಿಗೂ ಭದ್ರತೆ ನೀಡಲಾಗುತ್ತಿದ್ದು, ಅದರ ವೆಚ್ಚವನ್ನು ಖಾಸಗಿ ವ್ಯಕ್ತಿಗಳೇ ಭರಿಸುತ್ತಿದ್ದಾರೆ.
ರಾಜ್ಯ ಸರ್ಕಾರ ಬೆಂಗಳೂರಿನ ನಿಡುಮಾಮಿಡಿ ಮಠದ ಶ್ರೀವೀರಭದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ, ಶ್ರೀಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಎಸ್.ಎಸ್.ಮುರುಘರಾಜೇಂದ್ರ ಸ್ವಾಮೀಜಿ, ಶೃಂಗೇರಿ ಮಠದ ಭಾರತೀತೀರ್ಥ ಸ್ವಾಮೀಜಿ, ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಮುರುಘಾಮಠದ ಡಾ.ಶಿವಮೂರ್ತಿ ಮುರುಘ ಶರಣರು, ಸಿದ್ದಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ, ಪೇಜಾವರ ಮಠದ ವಿಶ್ವೇಶ್ವರತೀರ್ಥ ಸ್ವಾಮೀಜಿ, ಪುತ್ತಿಗೆ ಮಠದ ಸುಜ್ಞೇಂದ್ರ ತೀರ್ಥ ಸ್ವಾಮೀಜಿಗಳಿಗೆ ಭದ್ರತೆ ಒದಗಿಸಿದೆ.
Wednesday, July 15, 2009
ರಿಕ್ಷಾ-ಕಾರು ಡಿಕ್ಕಿ: ಸಾವನ್ನಪ್ಪಿದ ಹಸುಗೂಸು/Payyannur Accident-Baby Death
ಘಟನೆಯಲ್ಲಿ ಮಗು(ಮುಹಮ್ಮದ್ ದಾವೂದ್)ವಿನ ತಂದೆ ಸಿ.ಟಿ.ಅಬ್ದುಲ್ಲ, ತಾಯಿ ಸಜಿನಾ ಮತ್ತು ಆಟೋಚಾಲಕ ಶ್ರೀಧರ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂವರನ್ನೂ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಿಕ್ಕಿ ಹೊಡೆದ ರಭಸಕ್ಕೆ ರಿಕ್ಷಾದಲ್ಲಿ ಸಂಚರಿಸುತ್ತಿದ್ದ ಇವರ ಮಗು ರಸ್ತೆಗೆ ಬಿದ್ದು ಅಲ್ಲೇ ಸಾವನ್ನಪ್ಪಿದೆ.
ಮಳೆ-ಗಾಳಿ: ಕೈಕೊಟ್ಟ ವಿದ್ಯುತ್/Rain-power cut
ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರಿಂದ ಮತ್ತೆ ಮಳೆ ಬಿರುಸುಗೊಂಡಿದ್ದು ಸಂಜೆಯಿಂದ ಬಿರುಗಾಳಿ ಆರಂಭವಾಗಿದೆ. ನಗರದಲ್ಲಿ ಬೆಳಗ್ಗಿನಿಂದಲೇ ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿತ್ತು. ಬಿರುಗಾಳಿಗೆ ನಗರ ಮತ್ತು ಹೊರವಲಯದಲ್ಲಿ ವಿದ್ಯುತ್ ಸಂಪರ್ಕ ಕೈಕೊಟ್ಟಿದೆ. ರಾತ್ರಿ ವರೆಗೂ ವಿದ್ಯುತ್ ಸಂಪರ್ಕ ಸರಿಯಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ದೂರವಾಣಿ ಸಂಪರ್ಕವೂ ಕೆಟ್ಟು ಹೋಗಿದೆ.
ನಿಧನ
ಸತ್ಯವತಿ
ಮಂಜೇಶ್ವರ: ಹೊಸಂಗಡಿಯ ವ್ಯಾಪಾರಿ ಸುಂದರ ಎಂಬವರ ಪತ್ನಿ ಸತ್ಯವತಿ(56) ನಿಧನರಾದರು. ನಾಲ್ವರು ಮಕ್ಕಳಿದ್ದಾರೆ.
ಕುಞ್ಞಲಿಮಹಜ್ಜುಮ್ಮ
ಮಂಜೇಶ್ವರ: ಇಲ್ಲಿನ ಬಂದ್ಯೋಡು ಸಮೀಪದ ಚೆರುಗೋಳಿ ನಿವಾಸಿ ದಿ.ಅಬ್ದುಲ್ ರಹಮಾನ್ ಅವರ ಪತ್ನಿ ಕುಞ್ಞಲಿಮಹಜ್ಜುಮ್ಮ ಎಂಬವರು ನಿಧನರಾದರು. ಅವರಿಗೆ 104 ವಯಸ್ಸಾಗಿತ್ತು. 6 ಮಂದಿ ಮಕ್ಕಳಿದ್ದಾರೆ.
ಬಸ್ಸು ಉರುಳಿ 20 ಮಂದಿಗೆ ಗಾಯ/Bus Accident-20 injured
ಕಾಸರಗೋಡು: ನೀಲೇಶ್ವರದಿಂದ ತೈಕಡಪ್ಪುರಕ್ಕೆ ಹೋಗುತ್ತಿದ್ದ ಬಸ್ಸು ಉರುಳಿ ಬಿದ್ದು 20 ಮಂದಿ ಗಾಯಗೊಂಡ ಘಟನೆ ಬುಧವಾರ ಸಂಜೆ ನೀಲೇಶ್ವರ ಬಳಿ ಕಣಿಚ್ಚಿರ ಎಂಬಲ್ಲಿ ನಡೆದಿದೆ.
ಜೀಪಿಗೆ ಸರಿದು ಹೋಗುತ್ತಿದ್ದಂತೆ ಬಸ್ಸು ಉರುಳಿದೆ. ಗಾಯಾಳುಗಳನ್ನು ನೀಲೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಲಕಿಗೆ ಕಿರುಕುಳ: ಯುವಕನ ಸೆರೆ
ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಿದ 8 ವರ್ಷದ ಬಾಲಕಿಗೆ ಕಿರುಕುಳ ನೀಡಿದ ಯುವಕನನ್ನು ನಗರ ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ.
ಮೊಗ್ರಾಲ್ ಪುತ್ತೂರು ನಿವಾಸಿ ಆಟೋ ಚಾಲಕ ಆರೋಪಿಯಾಗಿದ್ದು, ಈತನನ್ನು ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಮತ್ತು ಬಾಲಕಿಯ ಸಂಬಂಧಿಕರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದರು.
ಆಸ್ಪತ್ರೆಗೆ ರೋಗಿಯನ್ನು ಭೇಟಿ ಮಾಡುವ ಸೋಗಿನಲ್ಲಿ ಬಂದು ಮಂಗಳವಾರ ಬಾಲಕಿಗೆ ಕಿರುಕುಳ ನೀಡಿದ್ದು, ಇಂದು ಅದೇ ರೀತಿ ಬಂದ ಈತನ ಕೀಟಲೆಯನ್ನು ಸಹಿಸದ ಬಾಲಕಿ ಸಂಬಂಧಿಕರಿಗೆ ತಿಳಿಸಿದ್ದಳು.
ರಾಷ್ಟ್ರೀಯ ಹೆದ್ದಾರಿ ಕೆಟ್ಟುಹೋದ ರಾಷ್ಟ್ರೀಯ ಹೆದ್ದಾರಿ
ಮುಸ್ಲಿಂ ಯೂತ್ ಲೀಗ್ ರಸ್ತೆ ತಡೆ
ಮಂಜೇಶ್ವರ: ಉಪ್ಪಳದಿಂದ ಹೊಸಂಗಡಿ ವರೆಗೆ ರಾಷ್ಟ್ರೀಯ ಹೆದ್ದಾರಿ ಕೆಟ್ಟುಹೋಗಿದ್ದು, ಸಂಬಂಧಪಟ್ಟವರ ನಿರ್ಲಕ್ಷ್ಯವನ್ನು ಖಂಡಿಸಿ ಮುಸ್ಲಿಂ ಯೂತ್ ಲೀಗ್ ಮಂಜೇಶ್ವರ ಮಂಡಲ ಸಮಿತಿಯ ನೇತೃತ್ವದಲ್ಲಿ ಬುಧವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅರ್ಧ ತಾಸುಗಳ ವರೆಗೆ ರಸ್ತೆ ತಡೆ ನಡೆಸಿದರು.
ಉಪ್ಪಳ ಗೇಟ್ ಬಳಿ ಮುಸ್ಲಿಂ ಲೀಗ್ ಜಿಲ್ಲಾ ಅಧ್ಯಕ್ಷ ಚೆರ್ಕಳ ಅಬ್ದುಲ್ಲ ಉದ್ಘಾಟಿಸಿದರು. ಮಂಡಲ ಉಪಾಧ್ಯಕ್ಷ ಉಮ್ಮರ್ ಅಪೋಲೊ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಲೀಗ್ ಉಪಾಧ್ಯಕ್ಷ ಕಲ್ಲಡ ಮಾಹಿನ್, ಕಾರ್ಯದಶರ್ಿ ಕೆ.ಕೆ.ಅಬ್ದುಲ್ಲ ಕುಞ್ಞಿ ಚೆರ್ಕಳ, ಉಪಾಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು, ಜಿಲ್ಲಾ ಕಾರ್ಯದಶರ್ಿ ಯೂಸೆಫ್ ಉಳುವಾರು, ಹನೀಫ್, ಎಂ.ಕೆ.ಆಲಿ ಮಾಸ್ಟರ್, ಬಿ.ಎಚ್.ಅಬ್ದುಲ್ಲ ಕುಞ್ಞಿ, ಬಿ.ಎಂ. ಮಾಹಿನ್, ಹಮೀದ್ ಕಲ್ಪನ, ಅಶ್ರಫ್ ಸಿಟಿಸನ್, ಎಂ.ಎಂ.ಇಬ್ರಾಹಿಂ, ಕೆ.ವಿ.ಯೂಸೆಫ್ ಹಾಜರಿದ್ದರು.
ಚಂದನದಲ್ಲಿ ಕಾಸರಗೋಡು ಚಿನ್ನಾ/Interview Kasaragod Chinna
ಇದೇ ಕಾರ್ಯಕ್ರಮ ಮರುದಿನ ಬೆಳಗ್ಗೆ 10 ಗಂಟೆಗೆ ಮರುಪ್ರಸಾರವಾಗಲಿದೆ. ಮೈಸೂರಿನ ಖ್ಯಾತ ಬರಹಗಾರ ಹಾಗೂ ಅಂಕಣಕಾರ ರವೀಂದ್ರ ಜೋಶಿ ಸಂದರ್ಶನ ನಡೆಸಿದ್ದಾರೆ.
ಕಾಸರಗೋಡು: ಬಿ.ಜೆ.ಪಿ. ಚೆಂಗಳ ಪಂಚಾಯ್ತಿ ಮಟ್ಟದ ಚುನಾವಣಾ ಅವಲೋಕನಾ ಸಭೆ ಎಡನೀರಿನಲ್ಲಿ ಇತ್ತೀಚೆಗೆ ಜರುಗಿತು.
ಎಡನೀರು ವಿಷ್ಣುಮಂಗಲ ದೇವಸ್ಥಾನದಿಂದ ಚೆಂಬ್ರಪಾಡಿ ದೈವಸ್ಥಾನದ ವರೆಗೆ ರಸ್ತೆಯಲ್ಲಿಯೇ ಕೊಳಚೆ ನೀರು ಹರಿಯುತ್ತಿದ್ದು, ಶೀಘ್ರದಲ್ಲಿಯೇ ಚರಂಡಿಯನ್ನು ದುರಸ್ತಿಪಡಿಸಬೇಕು ಎಂದು ಸಭೆ ಆಗ್ರಹಿಸಿದೆ.
ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಕೆ.ಜಗದೀಶ್ ಸಭೆಯನ್ನು ಉದ್ಘಾಟಿಸಿದರು. ಎಂ.ಕೆ.ಪ್ರಭಾಕರ ಅಧ್ಯಕ್ಷತೆ ವಹಿಸಿದ್ದರು. ಮಂಡಲಾಧ್ಯಕ್ಷ ಎಸ್.ಕುಮಾರ್ ಹಾಜರಿದ್ದರು.
ರವಿಚಂದ್ರ ಕೆಮ್ಮಂಗಯ ಸ್ವಾಗತಿಸಿ, ಮಧುಸೂದನ ಕೆಮ್ಮಂಗಯ ವಂದಿಸಿದರು.
ಸಮಾಲೋಚನಾ ಸಭೆ
ಕಾಸರಗೋಡು: ಇಲ್ಲಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಮತ್ತು ಮಂಗಳೂರಿನ ಹೃದಯವಾಹಿನಿ ಪತ್ರಿಕೆ ಜಂಟಿ ಆಶ್ರಯದಲ್ಲಿ ಆ.1 ಮತ್ತು 2ರಂದು ಕಾಸರಗೋಡಿನ ಲಲಿತಕಲಾ ಸದನದಲ್ಲಿ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನ ನಡೆಯಲಿದ್ದು, ಇದರ ಯಶಸ್ವಿಗೆ ಇದೇ 18ರಂದು ಸಂಜೆ 3.30ಕ್ಕೆ ಸ್ವಾಗತ ಸಮಿತಿ ಸಮಾಲೋಚನಾ ಸಭೆ ನಡೆಯಲಿದೆ.
'ತುಳುವರು ಸಂಘರ್ಷ ಪ್ರಿಯರಲ್ಲ'/Tulu Certificate Cource
ಕಾಸರಗೋಡು: ತುಳುವರು ಸಂಘರ್ಷ ಪ್ರಿಯರಲ್ಲ. ಆದರೆ ತುಳುವರ ಜಗಳ-ಬೈಗುಳ ಕುತೂಹಲಕರವಾಗಿದೆ ಎಂದು ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಬುಧವಾರ ಇಲ್ಲಿ ವಿಶ್ಲೇಷಿಸಿದರು.
ಕಾಸರಗೋಡು ಸಕರ್ಾರಿ ಕಾಲೇಜಿನಲ್ಲಿ ಕೇರಳ ತುಳು ಅಕಾಡೆಮಿ ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಜಂಟಿ ಆಶ್ರಯದಲ್ಲಿ ಏರ್ಪಡಿಸಿದ ತುಳು ಸಟರ್ಿಫಿಕೆಟ್ ಕೋಸರ್ು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನರ್ಾಟಕದಲ್ಲಿ ತುಳುವಿನ ಬಗ್ಗೆ ಗಮನಾರ್ಹ ಕೆಲಸ ಇದು ವರೆಗೆ ನಡೆದಿಲ್ಲ ಎಂದು ಆರೋಪಿಸಿದ ಅವರು, ಕೇರಳ ತುಳು ಅಕಾಡೆಮಿಯ ಪಾಲಿಗೆ ಇದು(ತುಳು ಭಾಷಾ ಕಲಿಕೆ) ಚರಿತ್ರಾರ್ಹ ಸಾಧನೆ ಎಂದು ಶ್ಲಾಘಿಸಿದರು.
ನಿತ್ಯ ಹರಿದ್ವರ್ಣ ಭಾಷೆ:
ಕರಾವಳಿಯ ಮಣ್ಣು ತುಳು ಧಾಮರ್ಿಕ-ಭಾಷಾ ಸೌಹಾರ್ದತೆಯ ಸೇತುವಾಗಿದೆ. ಯುನೆಸ್ಕೋ ವರದಿಯ ಪ್ರಕಾರ ತುಳು ಕ್ಷೀಣಿಸುತ್ತಿರುವ ಭಾಷೆಯಲ್ಲ. ಅದು
ನಿತ್ಯ ಹರಿದ್ವರ್ಣ ಭಾಷೆಯಾಗಿದೆ ಎಂದೂ ವಿವರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಆನಂದ್ ಸಿಂಗ್ ಮಾತನಾಡಿ, 5 ಪ್ರಾಚೀನ ಭಾಷೆಗಳಲ್ಲಿ ತುಳು ಒಂದು ಎಂದು ಒತ್ತಿ ಹೇಳಿದರು. ಕಾಸರಗೋಡಿನಿಂದ ಉಡುಪಿ ಜಿಲ್ಲೆಯ ವರೆಗೆ 30 ಲಕ್ಷದಷ್ಟು ಮಂದಿ ತುಳು ಭಾಷೆಯನ್ನಾಡುತ್ತಿದ್ದಾರೆ. ಸಟರ್ಿಫಿಕೆಟ್ ಕೋಸರ್ಿನಿಂದ ಭವಿಷ್ಯದಲ್ಲಿ ಸಂಶೋಧನೆಗೆ ವಿಪುಲ ಅವಕಾಶಗಳಿವೆ ಎಂದವರು ನುಡಿದರು.
ಅಕಾಡೆಮಿಯ ಅಧ್ಯಕ್ಷ ಪಿ.ವೆಂಕಟರಾಜ ಪುಣಿಂಚತ್ತಾಯ ಅಧ್ಯಕ್ಷತೆ ವಹಿಸಿದರು. ಕಾಲೇಜಿನ ಪ್ರಾಂಶುಪಾಲ ಮಾಧವನ್ ನಂಬ್ಯಾರ್, ತುಳು ಅಕಾಡೆಮಿ ಸದಸ್ಯರಾದ ರಾಮಕೃಷ್ಣ ಕಡಂಬಾರ್, ಗೀತಾ ಸಾಮನಿ ಹಾಜರಿದ್ದರು. ಉಮೇಶ್ ಸಾಲಿಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕನ್ನಡ ವಿಭಾಗದ ಮುಖ್ಯಸ್ಥ ಸಿ.ಎಚ್.ರಾಮ ಭಟ್ ಸ್ವಾಗತಿಸಿ, ಅಕಾಡೆಮಿಯ ಕಾರ್ಯದಶರ್ಿ ಎಂ.ಜಿ.ನಾರಾಯಣ ರಾವ್ ವಂದಿಸಿದರು. ಕನ್ನಡ ವಿಭಾಗದ ಉಪನ್ಯಾಸಕ ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿದರು.
Tuesday, July 14, 2009
ರಿಯಾನ:10 ದಿನದೊಳಗೆ ಪತ್ತೆ ಮಾಡಲು ಹೈಕೋಟರ್ು ಆದೇಶ/RIyana:High Court
ಕಾಸರಗೋಡು: ಇಲ್ಲಿನ ಚೆಂಗಳ ತೈವಳಪ್ಪು ನಿವಾಸಿ ರಿಯಾನ ಎಂಬ ಬಾಲಕಿಯನ್ನು 10 ದಿನದೊಳಗೆ ಪತ್ತೆ ಮಾಡುವಂತೆ ಕೇರಳ ಹೈಕೋಟರ್ು ಆದೇಶ ನೀಡಿದೆ.
ಪತ್ತೆ ಮಾಡಿದ ಆಕೆಯನ್ನು ಕಾಸರಗೋಡು ಜ್ಯೂಡೀಶಿಯಲ್ ಪ್ರಥಮ ದಜರ್ೆ ಮೆಜಿಸ್ಟ್ರೇಟರ ನ್ಯಾಯಾಲಯದಲ್ಲಿ ಹಾಜರುಪಡಿಸಬೇಕು ಎಂದು ಹೈಕೋಟರ್ು ವಿಭಾಗೀಯ ಪೀಠ ಕಟ್ಟಪ್ಪಣೆ ಮಾಡಿದೆ.
ಸಕರ್ಾರದ ವಕೀಲ ಪ್ರಕರಣದ ಬಗ್ಗೆ ಡಿವೈಎಸ್ಪಿ ನೇತೃತ್ವದಲ್ಲಿ ಪ್ರತ್ಯೇಕ ತನಿಖಾ ತಂಡ ಕಾರ್ಯಾಚರಣೆ ನಡೆಸುತ್ತಿದೆ ಎಂದು ಸಮಜಾಯಿಷಿ ನೀಡಿದರೂ ನ್ಯಾಯಾಲಯ ತನ್ನ ಅತೃಪ್ತಿ ಪ್ರಕಟಿಸಿ ಈ ಆದೇಶ ನೀಡಿದೆ. ಅಲ್ಲದೆ ಇದೇ 24ರಂದು ರಿಯಾನಳನ್ನು ಹೈಕೋಟರ್ಿನಲ್ಲಿ ಹಾಜರುಪಡಿಸಬೇಕು ಎಂದೂ ಆದೇಶಿಸಿದೆ.
ಜನಪರ ನ್ಯಾಯ ವೇದಿಕೆ ಮತ್ತು ರಿಯಾನಳ ತಾಯಿ ಫೌಸಿಯಾ ಹೈಕೋಟರ್ಿನ ಮೆಟ್ಟಿಲೇರಿ ಹೇಬಿಯಸ್ ಕಾರ್ಪಸ್ ಅಜರ್ಿ ಸಲ್ಲಿಸಿದ್ದರು.
ಕಾಸರಗೋಡಿನ ವಿದ್ಯಾನಗರ ಸಮೀಪದ ನಾಯಮ್ಮಾರ್ಮೂಲೆಯ ಖಾಸಗಿ ಶಾಲೆಯ ವಿದ್ಯಾಥರ್ಿನಿಯಾಗಿದ್ದ ರಿಯಾನ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದಳು.
ಕಾಞಂಗಾಡಿನಲ್ಲಿ ಹುಸಿ ಬಾಂಬ್ ಬೆದರಿಕೆ
ಸಂಸ್ಥೆಯ ಪ್ರಾಂಶುಪಾಲರಿಗೆ ಅನಾಮಿಕ ವ್ಯಕ್ತಿ ಎರಡು ಬಾರಿ ಕರೆ ಮಾಡಿ ಬಾಂಬ್ ಬೆದರಿಕೆ ಒಡ್ಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಡಿವೈಎಸ್ಪಿ ಹಬೀಬ್ ರಹಮಾನ್, ಸಿ.ಐ. ಕೆ.ಅಶ್ರಫ್ ವಿದ್ಯಾಥರ್ಿಗಳು ಮತ್ತು ಅಧ್ಯಾಪಕರನ್ನು ಹೊರಗೆ ಕಳುಹಿಸಿ ತಪಾಸಣೆ ನಡೆಸಿದರು. ನಗರದಿಂದ ಶ್ವಾನದಳ ಪರಿಶೀಲನೆ ನಡೆಸಿದಾಗ ಹುಸಿ ಬೆದರಿಕೆ ಎಂಬುದು ಖಾತರಿಯಾಯಿತು.
ಮುಟ್ಟತ್ತಲ ನಿವಾಸಿ ಆಲಿ ಅವರ ಪುತ್ರ ಮುಹಮ್ಮದ್ ಕುಞ್ಞಿ(15) ಪತ್ತೆಯಾದ ಬಾಲಕ. ಈತ ತನ್ನ ಸಹೋದರನ ಜತೆಯಲ್ಲಿ ಆಟವಾಡುತ್ತಿದ್ದಾಗ ಅಲೆಗಳ ಹೊಡೆತಕ್ಕೆ ಸಿಕ್ಕಿ ನಾಪತ್ತೆಯಾಗಿದ್ದನು.
ಮೀನುಗಾರಿಕಾ ಇಲಾಖೆಯ ಬೋಟ್, ಅಗ್ನಿಶಾಮಕ ದಳ, ಪೊಲೀಸರು ಮತ್ತು ಸ್ಥಳೀಯರು ಹುಡುಕಾಟ ನಡೆಸಿದ್ದರು.
ಬಾವಿಗೆ ಬಿದ್ದು ಯುವಕ ಸಾವು
ಮುನ್ನೂರಿನ ಮಂಜಪ್ಪ ಮೂಲ್ಯರ ಪುತ್ರ ಸತೀಶ್ ಕುಲಾಲ್(30) ಸಾವನ್ನಪ್ಪಿದ ವ್ಯಕ್ತಿ. ನೀರು ಸೇದುವ ವೇಳೆ ಕಾಲು ಜಾರಿ ಬಾವಿಗೆ ಬಿದ್ದಿರಬೇಕು ಎಂದು ಶಂಕಿಸಲಾಗಿದೆ. ಕೂಲಿ ಕಾಮರ್ಿಕರಾಗಿದ್ದರು. ವಿಷಯ ತಿಳಿದು ನಗರದಿಂದ ಬಂದ ಅಗ್ನಿಶಾಮಕ ದಳ ಶವವನ್ನು ಮೇಲಕ್ಕೆತ್ತಿದೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಗಿದೆ.
ಅಪರಿಚಿತ ವ್ಯಕ್ತಿಗೆ ರೈಲು ಡಿಕ್ಕಿ
ಮಂಗಳವಾರ ಬೆಳಗ್ಗೆ ಕುಂಬಳೆ ಸಮೀಪದ ಶಿರಿಯ ದೇವಸ್ಥಾನದ ಬಳಿಯ ರೈಲ್ವೇ ಹಳಿಯಲ್ಲಿ ರಕ್ತಸಿಕ್ತ ದೇಹವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪ್ಯಾಂಟ್ ಮತ್ತು ಅಂಗಿ ಧರಿಸಿದ್ದು, 45 ವರ್ಷ ಅಂದಾಜಿಸಲಾಗಿದೆ.
ಕಾಡುಹಂದಿ ಆಕ್ರಮಿಸಿ ಇಬ್ಬರು ಆಸ್ಪತ್ರೆಗೆ
ಬೋವಿಕ್ಕಾನ ಸಮೀಪದ ಕಾಟಿಪಳ್ಳ ನಿವಾಸಿಗಳಾದ ಕೆ.ಅಜೀರ್ ಮತ್ತು ಕೆ.ರಫೀಕ್ ಗಾಯಗೊಂಡವರು. ಬೈಕ್ನ ಹಿಂಭಾಗದಿಂದ ಹಂದಿ ಆಕ್ರಮಿಸಿದೆ ಎಂದು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾದ ಗಾಯಾಳುಗಳು ತಿಳಿಸಿದ್ದಾರೆ.
ಆಲಂಪಾಡಿ ಎಮರ್ಾಳ ನಿವಾಸಿ ಮೊಯ್ದೀನ್, ನರ್ಸರಿ ವಿದ್ಯಾಥರ್ಿಯಾಗಿರುವ ಇವರ ಪುತ್ರ ಮನ್ಸೂರ್, ಚರ್ಲಡ್ಕದ ನಾರಾಯಣ, ಚೇನೆಕ್ಕೋಡಿನ ಚಂದ್ರಶೇಖರ ಗಾಯಗೊಂಡವರು.
ನಾರಾಯಣ ಅವರು ಗಂಭೀರವಾಗಿ ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಉಳಿದವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ ಘಟಕಗಳು ಇಲ್ಲದ ಹಾಗೂ ನಿಷ್ಕ್ರಿಯವಾಗಿರುವ ಶಾಲೆಗಳ ಅಧ್ಯಾಪಕರು ಭಾಗವಹಿಸಬೇಕು ಎಂದು ಜಿಲ್ಲಾ ಸ್ಕೌಟ್ ಆಯುಕ್ತರಾದ ಜಿಲ್ಲಾ ವಿದ್ಯಾಧಿಕಾರಿ ಎನ್.ಕೆ.ಮೋಹನ್ದಾಸ್ ತಿಳಿಸಿದ್ದಾರೆ.
'ಜನಸಂಖ್ಯೆ ನಿಯಂತ್ರಣದಲ್ಲಿ ಮಹಿಳೆಯರ ಪಾತ್ರ ಮಹತ್ತರ'/NSS Prog in Govt College
ಕಾಸರಗೋಡು: ಜನಸಂಖ್ಯೆ ನಿಯಂತ್ರಣದಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದೆ ಎಂದು ಕಾಸರಗೋಡು ಸಕರ್ಾರಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಸುಭಾಶ್ ಇತ್ತೀಚೆಗೆ ಹೇಳಿದರು.
ವಿಶ್ವಜನಸಂಖ್ಯೆ ದಿನಾಚರಣೆಯ ಅಂಗವಾಗಿ ಕಾಸರಗೋಡು ಸಕರ್ಾರಿ ಕಾಲೇಜಿನ ಎನ್.ಎಸ್.ಎಸ್. ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಮಾಧವನ್ ನಂಬ್ಯಾರ್ ಉದ್ಘಾಟಿಸಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಶಂಕರನಾರಾಯಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸ ಶ್ರೀನಾಥ್ ಎ., ಯೋಜನಾಧಿಕಾರಿ ಮಹಮ್ಮದಾಲಿ ಪೆರ್ಲ ಹಾಜರಿದ್ದರು.
ಕಾರ್ಯದಶರ್ಿ ಮಹೇಶ್ ಸ್ವಾಗತಿಸಿ, ಜಿನೇಶ್ ವಂದಿಸಿದರು.
ಬೇಳ ಸಂತ ಬಾರ್ತಲೋಮೆಯ ಶಾಲೆಯಲ್ಲಿ 7ನೇ ತರಗತಿಯ ಮಕ್ಕಳಿಗೆ ಕಸಿಕಟ್ಟುವ ವಿಧಾನ ಬಗ್ಗೆ ಇತ್ತೀಚೆಗೆ ಏರ್ಪಡಿಸಿದ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದರು.
ಪ್ರಾತ್ಯಕ್ಷಿಕೆಯಲ್ಲಿ ಗುಲಾಬಿ, ಮಾವು, ಹಾಗೂ ದಾಸವಾಳಗಳಿಗೆ ಕಸಿ ಕಟ್ಟುವ ವಿಧಾನಗಳಾದ ಗ್ರಾಫ್ಟಿಂಗ್, ಬಡ್ಡಿಂಗ್, ಲೇಯರಿಂಗ್ ಬಗ್ಗೆ ಮಾಹಿತಿ ನೀಡಿದರು.
ನೇಚರ್ ಕ್ಲಬ್ಬಿನ ಸದಸ್ಯರಾದ ರತನ್ ಕುಮಾರ್ ಹಾಗೂ ಕೃತಿಕಾ ಸಹಕರಿಸಿದರು.
ಶಾಲಾ ಸಾವನ್ ಡೇಮಿಯನ್ ಡಿ'ಸೋಜಾ ವಂದಿಸಿದರು.
ಮಧೂರು ಉಳಿಯತ್ತಡ್ಕ ಸಮೀಪದ ಚೇನೆಕ್ಕೋಡು ನಿವಾಸಿ ಸಿ.ಎಚ್.ಬಾಲಕೃಷ್ಣ ಅವರ ಪುತ್ರ ಉದಯಕುಮಾರ್ ಎಂಬಾತ ಸಂಕಷ್ಟಕ್ಕೆ ಒಳಗಾದವನು. ಈತನ ಊದಿಕೊಂಡಿದ್ದ ಎಡಗಾಲನ್ನು ತಪಾಸಣೆ ಮಾಡಿದ ವೈದ್ಯರು ಕ್ಯಾನ್ಸರ್ ಬಾಧಿಸಿದ್ದನ್ನು ಖಾತರಿಪಡಿಸಿದ್ದು, ಇದರ ಚಿಕಿತ್ಸೆಗೆ ಸು.4 ಲಕ್ಷ ರೂ. ಅಗತ್ಯವಿದೆ.
ಈತ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ವಿದ್ಯಾಥರ್ಿಯಾಗಿದ್ದ ಈತ ಕಳೆದ ಶೈಕ್ಷಣಿಕ ವರ್ಷ ರೋಗದಿಂದ ಎಸ್.ಎಸ್.ಎಲ್.ಸಿ.ಯ ಎಲ್ಲಾ ಪರೀಕ್ಷೆಯನ್ನೂ ಬರೆದಿಲ್ಲ. ಹೀಗಾಗಿ ಶೈಕ್ಷಣಿಕ ಭವಿಷ್ಯ ತೂಗುಯ್ಯಾಲೆಯಲ್ಲಿದೆ.
ಉದಯ ಕುಮಾರ್ನ ತಾಯ್ತಂದೆಯರು ಬಡವರಾಗಿದ್ದು, ಕೂಲಿ ಕಾಮರ್ಿಕರಾಗಿದ್ದಾರೆ. ಚಿಕಿತ್ಸೆಗೆ ಹಣವಿಲ್ಲದೆ ಕಂಗಾಲಾಗಿದ್ದಾರೆ. ಮಧೂರು ಸೇವಾ ಸಹಕಾರಿ ಬ್ಯಾಂಕಿನಲ್ಲಿ ಬಾಲಕನ ತಂದೆ ಬಾಲಕೃಷ್ಣರ ಹೆಸರಲ್ಲಿ 1659 ಸಂಖ್ಯೆಯ ಉಳಿತಾಯ ಖಾತೆ ತೆರೆಯಲಾಗಿದೆ. ಸಂಘ-ಸಂಸ್ಥೆ ಮತ್ತು ದಾನಿಗಳು ಆಥರ್ಿಕ ಸಹಾಯ ನೀಡುವಂತೆ ಬಾಲಕನ ಹೆತ್ತವರು ಮನವಿ ಮಾಡಿದ್ದಾರೆ.
ಸೋಮವಾರ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಜರುಗಿದ ಸಭೆಯನ್ನು ಸಂಘಟನೆಯ ಕಾಸರಗೋಡು ಗ್ರಾಮಾಂತರ ಬ್ಲಾಕ್ ಸಮಿತಿ ಅಧ್ಯಕ್ಷ ಜನಾರ್ದನನ್ ನಂಬ್ಯಾರ್ ಉದ್ಘಾಟಿಸಿದರು. ಹೊಸ ಸದಸ್ಯತ್ವವನ್ನು ಬಿ.ಪ್ರಭಾಕರ ಅಗ್ಗಿತ್ತಾಯ ಉದ್ಘಾಟಿಸಿದರು.
ಎ.ರಾಮ ಪಾಟಾಳಿ ಅಧ್ಯಕ್ಷತೆ ವಹಿಸಿದ್ದರು. ಎಂ.ಕುಞ್ಞಿಕಣ್ಣನ್ ನಂಬ್ಯಾರ್, ಎ.ರಾಧಾಕೃಷ್ಣನ್ ನಾಯರ್, ಇ.ಪ್ರಭಾಕರ ಪೊದುವಾಳ್, ಬಿ.ಪುರುಷೋತ್ತಮ, ಕೆ.ರಘು, ಕೆ.ಸಿ.ಅಚ್ಯುತನ್, ಕೆ.ಸೀತಾರಾಮ ಹಾಜರಿದ್ದರು. ಪಿ.ಪಿ.ಕುಞ್ಞಿಕಣ್ಣನ್ ವರದಿ ಮಂಡಿಸಿದರು.
ಬಿ.ಬಾಲಕೃಷ್ಣ ಅಗ್ಗಿತ್ತಾಯ ಸ್ವಾಗತಿಸಿ, ನಿರ್ಮಲ್ ಕುಮಾರ್ ವಂದಿಸಿದರು.
Monday, July 13, 2009
ಹಾಡುಹಗಲೇ ಮನೆಗೆ ನುಗ್ಗಿ 60 ಪವನ್ ಚಿನ್ನಾಭರಣ ಕಳವು/Stolen - Gold
ಕಾಸರಗೋಡು: ಹಾಡುಹಗಲೇ ಮನೆಗೆ ನುಗ್ಗಿ 60 ಪವನ್ ಚಿನ್ನಾಭರಣ ಕಳವು ಮಾಡಿದ ಘಟನೆ ಇಲ್ಲಿನ ಬೋವಿಕ್ಕಾನದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಇಲ್ಲಿನ ನಿವಾಸಿ, ಬೋವಿಕ್ಕಾನ ಶಾಲೆಯ ಶಿಕ್ಷಕಿ ಸರೋಜ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೋಡಿಕೊಂಡು ಕಳವು ನಡೆಸಲಾಗಿದೆ. ಮಧ್ಯಾಹ್ನ ಸರೋಜ ಅವರು ಶಾಲೆಯಿಂದ ಮನೆಗೆ ಬಂದಾಗ ಅಡುಗೆ ಕೋಣೆಯ ಬಾಗಿಲು ತೆರೆದಿತ್ತು. ಮಲಗುವ ಕೋಣೆಯ ಕಪಾಟಿನಲ್ಲಿದ್ದ ಆಭರಣಗಳನ್ನು ಕಳವು ಮಾಡಲಾಗಿದೆ. ಎರಡು ಸರ, ಒಂದು ನೆಕ್ಲೆಸ್, 10 ಬಳೆಗಳು, ಆರು ಜತೆ ಬೆಂಡೋಲೆಗಳು, ಮೂರು ಕೈಸರಗಳು ಕಳ್ಳರ ಪಾಲಾಗಿದೆ. ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.
ಆರೋಪಿಗಳ ಸುಳಿವು ಲಭ್ಯ
ಕಾಸರಗೋಡು: ಇಲ್ಲಿನ ಪೆರಿಯ ನಾತರ್್ ಮಲಬಾರ್ ಗ್ರಾಮೀಣ ಬ್ಯಾಂಕಿನಲ್ಲಿ ಕಳವು ನಡೆಸಿದ ಆರೋಪಿಗಳ ಬಗ್ಗೆ ತನಿಖಾ ತಂಡಕ್ಕೆ ಸುಳಿವು ಲಭಿಸಿದೆ.
ಉಪ್ಪಳದ ತಂಡ ಕಳವು ನಡೆಸಲು ಸ್ಕೆಚ್ ಹಾಕಿದೆ. ಆದರೆ ವಿಯೂರ್ ಕೇಂದ್ರೀಯ ಜೈಲ್ನಿಂದ ಶಿಕ್ಷೆ ಮುಗಿದು ಹೊರ ಬಂದ ಮೂವರು ತಮಿಳರು ಕಳವು ನಡೆಸಿದ್ದಾರೆ ಎಂದು ಶಂಕಿಸಲಾಗಿದೆ.
ಪಿಕ್ಪಾಕೆಟ್ ಪ್ರಕರಣದಲ್ಲಿ ವಿಯೂರ್ ಜೈಲಿನಲ್ಲಿರುವ ಇಲ್ಲಿನ ಪೊಯಿನಾಚಿಯ ಆರೋಪಿಯೋರ್ವನನ್ನು ವಿಚಾರಣೆಗೆ ಒಡ್ಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ತಾನು ಕಾಸರಗೋಡಿನಲ್ಲಿ ನಡೆಸಿದ ಎರಡು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದೇನೆ ಎಂದೂ ಆರೋಪಿ ಒಪ್ಪಿಕೊಂಡಿದ್ದಾನೆ. ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂಬ ವಿಶ್ವಾಸವನ್ನು ಪೊಲೀಸರು ಪ್ರಕಟಿಸಿದ್ದಾರೆ.
ನಗರದಲ್ಲಿ ಸತ್ಯಾಗ್ರಹ
ಕಾಸರಗೋಡು: ನಾಪತ್ತೆಯಾದ ರಿಯಾನ ಎಂಬ ಬಾಲಕಿಯನ್ನು ಪತ್ತೆ ಮಾಡುವಂತೆ ಆಗ್ರಹಿಸಿ ಜಿಲ್ಲಾ ಜನಪರ ನ್ಯಾಯ ವೇದಿಕೆ ಕಾಸರಗೋಡು ಹೊಸ ಬಸ್ಸು ನಿಲ್ದಾಣದ ವಠಾರದಲ್ಲಿ ಸೋಮವಾರ ಸತ್ಯಾಗ್ರಹ ನಡೆಸಿತು.
ಹೈಕೋಟರ್ು ವಕೀಲ ಕೆ.ವಿ.ರಾಮಚಂದ್ರನ್ ಉದ್ಘಾಟಿಸಿದರು. ಅಧ್ಯಕ್ಷ ಮಮ್ಮು ಚಾಲ ಅಧ್ಯಕ್ಷತೆ ವಹಿಸಿದರು. ನಾರಾಯಣನ್ ಪೆರಿಯ, ಪತ್ರಕರ್ತ ಕೆ.ಎಂ.ಅಹಮ್ಮದ್, ಟಿ.ಕೆ.ರಾಜನ್, ಎನ್.ಎ.ನೆಲ್ಲಿಕುಂಜೆ, ಕರಿವೆಳ್ಳೂರು ವಿಜಯನ್ ಹಾಜರಿದ್ದರು.
ತನಿಖೆ:
ರಿಯಾನಳ ಪತ್ತೆಗಾಗಿ ಪೊಲೀಸರು ಕನರ್ಾಟಕ ಮತ್ತು ಚೆನ್ನೈಯಲ್ಲಿ ತನಿಖೆ ನಡೆಸುತ್ತಿದ್ದಾರೆ.
ಕನರ್ಾಟಕದ ಮಂಗಳೂರು, ಪುತ್ತೂರು, ಸುಳ್ಯ ಎಂಬಲ್ಲಿ ತನಿಖೆ ನಡೆಸಲಾಗಿದೆ. ವಸತಿ ಗೃಹ ಮತ್ತು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿಯೂ ಮಾಹಿತಿ ಸಂಗ್ರಹಿಸಲಾಗಿದೆ. ಇನ್ನೊಂದು ಪಾಲಕ್ಕಾಡು ಮತ್ತು ಕೊಯಂಬತ್ತೂರಿನಲ್ಲಿ ತನಿಖೆ ನಡೆಸಿದೆ. ಚೆನ್ನೈಯಲ್ಲಿ ತಂಡ ತನಿಖೆ ನಡೆಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆರೆಗೆ ಬಿದ್ದು ಸಾವು
ಕಾಸರಗೋಡು: ಸ್ನಾನ ಮಾಡಲು ಕೆರೆಗೆ ಇಳಿದ ವ್ಯಕ್ತಿ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ಕುಂಬಳೆ ಸಮೀಪದ ಪುತ್ತಿಗೆಯಲ್ಲಿ ಇಂದು ನಡೆದಿದೆ.
ಪುತ್ತಿಗೆ ಧೂಮಣ್ಣ ರೈ ಅವರ ಪುತ್ರ ವಿಠಲ ರೈ(48) ಸಾವನ್ನಪ್ಪಿದ ವ್ಯಕ್ತಿ. ಪತ್ನಿ ಜಯಂತಿ ಮತ್ತು ನಾಲ್ವರು ಮಕ್ಕಳಿದ್ದಾರೆ.
ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಾವು
ಕಾಸರಗೋಡು: ಆಟೋರಿಕ್ಷಾ ಮಗುಚಿ ದಾದಿ ಸಾವನ್ನಪ್ಪಿದ ಘಟನೆ ಕಾಞಂಗಾಡು ಸಮೀಪದ ಪೊತಾವೂರ್ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ. ಪೋತಾವೂರು ನಿವಾಸಿ ಅಂಜಲಿ(19) ಸಾವನ್ನಪ್ಪಿದ ವ್ಯಕ್ತಿ. ಈಕೆ ಪಯ್ಯನ್ನೂರಿನ ಆಸ್ಪತ್ರೆಯೊಂದರಲ್ಲಿ ದಾದಿಯಾಗಿದ್ದಳು.
ಮಹಿಳೆಯ ಹೊಟ್ಟೆಯಲ್ಲಿ 12 ಕಿಲೋ ಗಡ್ಡೆ
ಕಾಸರಗೋಡು: ಮಹಿಳೆಯೊಬ್ಬರ ಹೊಟ್ಟೆಯಿಂದ 12 ಕಿಲೋ ಗಡ್ಡೆಯನ್ನು ಶಸ್ತ್ರಕ್ರಿಯೆ ಮೂಲಕ ಹೊರತೆಗೆದ ಘಟನೆ ಸೋಮವಾರ ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ.
ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮೇಲ್ಪರಂಬ ನಿವಾಸಿ ಮೊಯ್ದೀನ್ ಕುಞ್ಞಿ ಅವರ ಪತ್ನಿ ಆಯಿಷಾ ಕೆ. ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು.
ಮಲೆನಾಡು ಹೆದ್ದಾರಿ: ಕಾಸರಗೋಡಿಗೆ ಆದ್ಯತೆ/Malnad Highway
ಮಂಜೇಶ್ವರದ ಉಪ್ಪಳದಲ್ಲಿ ಪತ್ವಾಡಿ ಸೇತುವೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
2021ರಲ್ಲಿ ಗುರಿ ಇರಿಸಿ ಕೇಂದ್ರ ಸಕರ್ಾರ ರೂಪೀಕರಿಸಿದ ರಸ್ತೆ ಕಾಯ್ದೆಗೆ ಅನುಸಾರವಾಗಿ ರಾಜ್ಯದಲ್ಲಿಯೂ ರಸ್ತೆ ಕಾಯ್ದೆ ರೂಪಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ 47 ಮತ್ತು 17ನ್ನು 45 ಮೀ. ಆಗಿ ನವೀಕರಿಸಲಾಗುವುದು.
ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಪ್ರತ್ಯೇಕ ಆದ್ಯತೆ ನೀಡಿ ಮಲಬಾರ್ ಪ್ಯಾಕೇಜ್ನ ಅಂಗವಾಗಿ ಜಿಲ್ಲೆಯ ರಸ್ತೆ ಮತ್ತು ಸೇತುವೆಗಳ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದವರು ತಿಳಿಸಿದರು.
ರಾಜ್ಯದಲ್ಲಿ ಕೆಟ್ಟುಹೋದ ರಸ್ತೆಗಳ ದುರಸ್ತಿ ಕಾರ್ಯ ಮಳೆಗಾಲ ಕಳೆದ ಬಳಿಕ ಆರಂಭಿಸಲಾಗುವುದು. ಮಂಜೇಶ್ವರ-ಉಪ್ಪಳ ರಸ್ತೆ ನವೀಕರಣ ಯೋಜನೆ ಕೇಂದ್ರೀಯ ರಸ್ತೆ ಪ್ರಾಜೆಕ್ಟ್ನಲ್ಲಿ ಸೇರಿಸಿ ಜಾರಿಗೊಳಿಸಲಾಗುವುದು ಎಂದೂ ಅವರು ಹೇಳಿದರು.
ಉಪ್ಪಳ ಪೇಟೆಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಸಿ.ಎಚ್.ಕುಞ್ಞಂಬು ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಚೆರ್ಕಳ ಅಬ್ದುಲ್ಲ, ಬಿ.ಎಚ್.ಅಬ್ದುಲ್ಲ ಕುಞ್ಞಿ, ಮಂಗಲ್ಪಾಡಿ ಪಂಚಾಯ್ತಿ ಅಧ್ಯಕ್ಷ ಎಂ. ಆನಂದ, ಮೀಂಜ ಪಂಚಾಯ್ತಿ ಅಧ್ಯಕ್ಷ ಕೆ.ಅಬ್ದುಲ್ಲ, ಯು.ಎ.ಖಾದರ್, ಡಿ.ಪ್ರಭಾಕರ ಚೌಟ, ಅನ್ನಮ್ಮ, ಬಿ.ಎಂ.ಮಾಯಿನ್ ಹಾಜರಿದ್ದರು.
ಬಳಿಕ ಚೆಮ್ನಾಡು-ಚೆಂಗಳ ಪಂಚಾಯ್ತಿಗಳನ್ನು ಸಂಪಕರ್ಿಸುವ ಪೆರುಂಬಳಕಡವು ಸೇತುವೆಯನ್ನು ಸಚಿವರು ಉದ್ಘಾಟಿಸಿದರು.
ಪೆರುಂಬಳದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಕೆ.ವಿ.ಕುಞ್ಞಿರಾಮನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಸಿ.ಟಿ.ಅಹಮ್ಮದಾಲಿ, ಸಿ.ಎಚ್.ಕುಞ್ಞಂಬು, ಮಾಜಿ ಶಾಸಕ ಚೆರ್ಕಳ ಅಬ್ದುಲ್ಲ, ಚೆಮ್ನಾಡು ಪಂಚಾಯ್ತಿ ಅಧ್ಯಕ್ಷ ಪಾದೂರು ಕುಞ್ಞಂಬು, ಚೆಂಗಳ ಪಂಚಾಯ್ತಿ ಅಧ್ಯಕ್ಷೆ ಆಯಿಷಾ ಚೆರ್ಕಳ ಅಬ್ದುಲ್ಲ ಹಾಜರಿದ್ದರು.
ಪಿಂಚಣಿದಾರರ ಬೇಡಿಕೆ ಈಡೇರಿಸುವಂತೆ ಇದೇ 29ರಂದು ಬೆಳಗ್ಗೆ 10ಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಸಂಚಾಲಕ ಬಿ.ಬಾಲಕೃಷ್ಣ ಅಗ್ಗಿತ್ತಾಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
10,001 ರೂ. ನಗದು ಮತ್ತು ಪ್ರಶಸ್ತಿ ಫಲಕ ನೀಡಲಾಗುವುದು. ಇದೇ ತಿಂಗಳ ಕೊನೆಯ ವಾರ ನಗರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪತ್ರಕರ್ತ ಕೆ.ಎಂ.ಅಹಮ್ಮದ್, ಟ್ರಸ್ಟಿನ ಎನ್.ಎ.ಮುಹಮ್ಮದಾಲಿ, ನಾರಾಯಣನ್ ಪೆರಿಯ, ಕೆ.ಎಂ.ಅಬ್ಬಾಸ್, ಬಕ್ಕರ್ ಚೆರ್ಕಳ, ಅಶ್ರಫ್ ಐಪ ಹಾಜರಿದ್ದರು.
ನೊಂದ ಕುಟುಂಬಕ್ಕೆ 5 ಲಕ್ಷ ನಷ್ಟ ಪರಿಹಾರ ಬಯಸಿ ನ್ಯಾಯಾಲಯದ ಮೊರೆ ಹೋಗುವುದಾಗಿ ಸಮಿತಿ ತಿಳಿಸಿದೆ.
ತುಳು 8ನೇ ಪರಿಚ್ಛೇದಕ್ಕೆ ಸೇರಿದರೆ ಕೋಸರ್ಿನಿಂದ ಪ್ರಯೋಜನ ಲಭಿಸಲಿದೆ. ಜಿಲ್ಲೆಯ ಕಾಲೇಜು ವಿದ್ಯಾಥರ್ಿಗಳ ಸಹಿತ ಆಸಕ್ತರು ಕೋಸರ್ಿಗೆ ಅಜರ್ಿ ಸಲ್ಲಿಸಬಹುದು. ಕಾಸರಗೋಡು ಸಕರ್ಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಕೋಸರ್ು ನಡೆಯಲಿದೆ ಎಂದವರು ವಿವರಿಸಿದರು.
ಅಕಾಡೆಮಿಯ ಅಧ್ಯಕ್ಷ ಡಾ.ಪಿ.ವೆಂಕಟರಾಜ ಪುಣಿಂಚತ್ತಾಯ ಅಧ್ಯಕ್ಷತೆ ವಹಿಸುವರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಪಿ.ವೆಂಕಟರಾಜ ಪುಣಿಂಚತ್ತಾಯ, ಕಾರ್ಯದಶರ್ಿ ಎಂ.ಜಿ.ನಾರಾಯಣ ರಾವ್ ಮತ್ತು ಸದಸ್ಯ ಉಮೇಶ್ ಸಾಲಿಯಾನ್ ಹಾಜರಿದ್ದರು.
ಅಂದು ಬೆಳಗ್ಗೆ 9.30ಕ್ಕೆ ಆಲಿಕುಞ್ಞಿ ಮುಸ್ಲಿಯಾರ್ ಉದ್ಘಾಟಿಸುವರು. ಎಂ.ಪಿ.ಇಬ್ರಾಹಿಂ ಫೈಸಿ ಶಿಬಿರ ನಡೆಸುವರು.
Sunday, July 12, 2009
ಆಟವಾಡಲು ಸಮುದ್ರಕ್ಕಿಳಿದ ಬಾಲಕ ನಾಪತ್ತೆ/Missed Boy Near Ajanur
ಕಾಸರಗೋಡು: ಇಲ್ಲಿನ ಅಜಾನೂರು ಮುಟ್ಟಂತಲ ಕೋತ್ತಿಕ್ಕಾಲ್ ಕಡಪ್ಪುರದಲ್ಲಿ ಈಜಾಡಲು ಸಮುದ್ರಕ್ಕಿಳಿದ 10ನೇ ತರಗತಿಯ ಬಾಲಕ ನಾಪತ್ತೆಯಾದ ಘಟನೆ ಭಾನುವಾರ ಸಂಜೆ ನಡೆದಿದೆ.
ಕಾಞಂಗಾಡಿನ ಇಕ್ಬಾಲ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾಥರ್ಿ ಹಾಗೂ ಮುಟ್ಟಂತಲ ಕೋತ್ತಿಕ್ಕಾಲ್ ನಿವಾಸಿ ಆಲಿ ಕುಟ್ಟಿಪ್ಪುರ ಅವರ ಪುತ್ರ ಮುಹಮ್ಮದ್ ಕುಞ್ಞಿ(15) ಎಂಬ ಬಾಲಕನೇ ಕಾಣೆಯಾದವನು.
ತನ್ನ ಸಹೋದರ ಸಕೀರ್ನ ಜತೆಯಲ್ಲಿ ನೀರಿಗಿಳಿದ ಈತ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಕ್ಕಿ ಮುಳುಗಿ ನಾಪತ್ತೆಯಾಗಿದ್ದಾನೆ.
ಕಾಸರಗೋಡಿನಿಂದ ಬಂದ ಅಗ್ನಿಶಾಮಕ ದಳ ರಾತ್ರಿ ವರೆಗೂ ಸಮುದ್ರದಲ್ಲಿ ಹುಟುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಮೀನುಗಾರಿಕಾ ಇಲಾಖೆಯ ಅಧಿಕಾರಿಗಳೂ ಸ್ಥಳದಲ್ಲಿದ್ದಾರೆ.
ಎಡನಾಡು-ಕಣ್ಣೂರು ಸೇವಾ ಸಹಕಾರಿ ಬ್ಯಾಂಕು/Kalathur Bank
ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ ಇತ್ತೀಚೆಗೆ ಉದ್ಘಾಟಿಸಿದರು.
ಬ್ಯಾಂಕಿನ ಅಧ್ಯಕ್ಷ ಎಚ್.ಶಿವರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಭದ್ರತಾ
ಕೊಠಡಿಯನ್ನು ಕಾಸರಗೋಡು ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ವಿ.ಕೋಮನ್
ನಂಬ್ಯಾರ್ ಉದ್ಘಾಟಿಸಿದರು. ಠೇವಣಿ ಪತ್ರವನ್ನು ಸಹಕಾರಿ ಇಲಾಖೆಯ ನೋಂದಣಿ ಅಧಿಕಾರಿ
ಕೆ.ಎನ್. ಜಗದೀಶನ್ ನಂಬ್ಯಾರ್ ವಿತರಿಸಿದರು. ಸಾಲಪತ್ರವನ್ನು ಪುತ್ತಿಗೆ ಪಂಚಾಯ್ತಿ
ಅಧ್ಯಕ್ಷ ತೋಮಸ್ ಡಿ'ಸೋಜಾ ವಿತರಿಸಿದರು.
ಬೇಳ ಶೋಕ ಮಾತಾ ದೇವಾಲಯದ ಪ್ರಧಾನ ಧರ್ಮಗುರು ಬಾಸಿಲ್ ವಾಸ್, ಸರ್ಕಲ್ ಸಹಕಾರಿ
ಯೂನಿಯನ್ ಕಾಸರಗೋಡು ಜಿಲ್ಲಾಧ್ಯಕ್ಷ ಪಿ.ವಿ.ಜಯರಾಜನ್, ಸಹಕಾರಿ ಇಲಾಖೆಯ
ವಿ.ಸುಧಾಕರನ್, ಕುಂಬಳೆ ಪಂಚಾಯ್ತಿ ಸದಸ್ಯ ಕೆ.ಸುರೇಶ್ ಕುಮಾರ್ ಶೆಟ್ಟಿ, ಪುತ್ತಿಗೆ
ಪಂಚಾಯ್ತಿ ಸದಸ್ಯ ಜಿ.ವಿಶ್ವನಾಥ್, ಸಹಕಾರ ಭಾರತಿ ಜಿಲ್ಲಾ ಕಾರ್ಯದಶರ್ಿ ಐತ್ತಪ್ಪ
ಪಿ.ಮವ್ವಾರ್, ಬ್ಯಾಂಕಿನ ಸ್ಥಾಪಕ ಎಚ್. ರಘುರಾಮ ಆಳ್ವ. ಕುಂಬಳೆ ಸಹಕಾರಿ ಬ್ಯಾಂಕಿನ
ಅಧ್ಯಕ್ಷ ಬಿ.ವಿಶ್ವನಾಥ ಆಳ್ವ, ಮುಗು ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಸ್.ನಾರಾಯಣ,
ಅಂಗಡಿಮೊಗರು ಸಹಕಾರಿ ಬ್ಯಾಂಕಿನ ಅಧ್ಯಕ್ಷ ಬಿ.ಪಿ.ಮಂಜುನಾಥ ಭಂಡಾರಿ, ನೀಚರ್ಾಲು
ಕೃಷಿಕರ ಸಹಕಾರಿ ಮಾರಾಟ ಸಂಘದ ಅಧ್ಯಕ್ಷ ಜಿ.ವಿಶ್ವೇಶ್ವರ ಭಟ್ ಪುತ್ತಿಗೆ, ಎಣ್ಮಕಜೆ
ಅರ್ಬನ್ ಸೇವಾ ಸಂಘದ ಎಂ. ಗಣೇಶ್ ರಾವ್, ವ್ಯಾಪಾರಿ ವ್ಯವಸಾಯ ಏಕೋಪನಾ ಸಮಿತಿಯ
ಕಳತ್ತೂರು ಘಟಕದ ಅಧ್ಯಕ್ಷ ಶ್ರೀನಿವಾಸ ಆಳ್ವ, ಕೇರಳ ಸಹಕಾರಿ ಎಂಪ್ಲಾಯೀಸ್ ಯೂನಿಯನ್ನ
ಜಿಲ್ಲಾಧ್ಯಕ್ಷ ಎಂ.ಅಶೋಕ್ ರೈ ಹಾಜರಿದ್ದರು.
ಬ್ಯಾಂಕಿನ ಕಾರ್ಯದರ್ಶಿ ಎ.ಕೃಷ್ಣಭಟ್ ವರದಿ ಮಂಡಿಸಿದರು. ನಿದರ್ೇಶಕರಾದ ಜಯಂತ ಪಾಟಾಳಿ
ಸ್ವಾಗತಿಸಿ, ಹರಿಣಿ ಜಿ.ಕೆ.ನಾಯಕ್ ವಂದಿಸಿದರು.
ಪತ್ವಾಡಿ ಸೇತುವೆ ಉದ್ಘಾಟನೆ
ಕಾಸರಗೋಡು: ಮಂಜೇಶ್ವರ ಉಪ್ಪಳ ಸಮೀಪದ ಪತ್ವಾಡಿ ಸೇತುವೆಯನ್ನು ರಾಜ್ಯ ಲೋಕೋಪಯೋಗಿ
ಸಚಿವ ಮೋನ್ಸ್ ಜೋಸೆಫ್ ಭಾನುವಾರ ಉದ್ಘಾಟಿಸಿದರು.
ಉಪ್ಪಳ ಪೇಟೆಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಸಿ.ಎಚ್.ಕುಞ್ಞಂಬು ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಚೆರ್ಕಳ ಅಬ್ದುಲ್ಲ, ಬಿ.ಎಚ್.ಅಬ್ದುಲ್ಲ ಕುಞ್ಞಿ, ಮಂಗಲ್ಪಾಡಿ ಪಂಚಾಯ್ತಿ
ಅಧ್ಯಕ್ಷ ಎಂ. ಆನಂದ, ಮೀಂಜ ಪಂಚಾಯ್ತಿ ಅಧ್ಯಕ್ಷ ಕೆ.ಅಬ್ದುಲ್ಲ, ಯು.ಎ.ಖಾದರ್,
ಡಿ.ಪ್ರಭಾಕರ ಚೌಟ, ಅನ್ನಮ್ಮ, ಬಿ.ಎಂ.ಮಾಯಿನ್ ಹಾಜರಿದ್ದರು.
ಬಳಿಕ ಚೆಮ್ನಾಡು-ಚೆಂಗಳ ಪಂಚಾಯ್ತಿಗಳನ್ನು ಸಂಪಕರ್ಿಸುವ ಪೆರುಂಬಳಕಡವು ಸೇತುವೆಯನ್ನು
ಸಚಿವರು ಉದ್ಘಾಟಿಸಿದರು.
ಪೆರುಂಬಳದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಕೆ.ವಿ.ಕುಞ್ಞಿರಾಮನ್ ಅಧ್ಯಕ್ಷತೆ
ವಹಿಸಿದ್ದರು. ಶಾಸಕರಾದ ಸಿ.ಟಿ.ಅಹಮ್ಮದಾಲಿ, ಸಿ.ಎಚ್.ಕುಞ್ಞಂಬು, ಮಾಜಿ ಶಾಸಕ ಚೆರ್ಕಳ
ಅಬ್ದುಲ್ಲ, ಚೆಮ್ನಾಡು ಪಂಚಾಯ್ತಿ ಅಧ್ಯಕ್ಷ ಪಾದೂರು ಕುಞ್ಞಂಬು, ಚೆಂಗಳ ಪಂಚಾಯ್ತಿ
ಅಧ್ಯಕ್ಷೆ ಆಯಿಷಾ ಚೆರ್ಕಳ ಅಬ್ದುಲ್ಲ ಹಾಜರಿದ್ದರು.
ಸಮುದ್ರ ತೀರದ ಗ್ರಾಮಗಳಲ್ಲಿ ಜನಗಣತಿ
ಕಾಸರಗೋಡು: ಜಿಲ್ಲೆಯ ಸಮುದ್ರ ತೀರದ ಗ್ರಾಮಗಳಲ್ಲಿ ಜನಗಣತಿ ನಡೆಸುವ ಕ್ರಮ ಆರಂಭಗೊಂಡಿದೆ.
ಇದಕ್ಕೆ ಸಂಬಂಧಿಸಿ ಜಿಲ್ಲೆಯ 15 ಗ್ರಾಮಗಳ ಜನಗಣತಿ ಪ್ರಕ್ರಿಯೆ ಆಗಸ್ಟ್ ತಿಂಗಳಲ್ಲಿ
ನಡೆಯಲಿದೆ. ಕುಂಜತ್ತೂರು, ಕಡಂಬಾರ್, ಉಪ್ಪಳ, ಇಚ್ಲಂಗೋಡು, ಬೇಳ, ಬಂಬ್ರಾಣ,
ಕೊಯಿಪ್ಪಾಡಿ, ಕಳನಾಡು, ಪಳ್ಳಿಕ್ಕೆರೆ, ಚಿತ್ತಾರಿ, ಅಜಾನೂರು, ಪಡನ್ನ, ಉದಿನೂರು,
ಸೌತ್ ತೃಕ್ಕರಿಪುರ ಗ್ರಾಮಗಳಲ್ಲಿ ಜನಗಣತಿ ನಡೆಯಲಿದೆ. ಜನಗಣತಿ ನಡೆಸಲು 359
ಮಂದಿಯನ್ನು ನೇಮಕ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ.
ಕೇಂದ್ರ ಜನಗಣತಿ ನಿರ್ದೇಶನಾಲಯ, ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ಗಳ ಸಹಕಾರದಲ್ಲಿ
ಜನಗಣತಿ ನಡೆಯಲಿದೆ. ಪ್ರತಿ ಮನೆಗಳಲ್ಲಿಯೂ 15 ಪ್ರಶ್ನಾವಳಿಗಳ ಉತ್ತರಗಳನ್ನು
ಲ್ಯಾಪ್ಟಾಪ್ ಕಂಪ್ಯೂಟರ್ಗಳಲ್ಲಿ ದಾಖಲಿಸಲಾಗುವುದು.
ಇದಕ್ಕೆ ಸಂಬಂಧಿಸಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಕಂದಾಯ,
ಪಂಚಾಯ್ತಿ, ಮೀನುಗಾರಿಕಾ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಆನಂದ್ ಸಿಂಗ್
ಅಧ್ಯಕ್ಷತೆ ವಹಿಸಿದ್ದರು.
ಜನಗಣತಿ ಉಪ ನಿರ್ದೇಶಕ ಫ್ರಾನ್ಸಿಸ್ ಕೆ.ಮ್ಯಾನ್ವೆಲ್, ಇಂಡಿಯನ್ ಟೆಲಿಫೋನ್
ಇಂಡಸ್ಟ್ರೀಸ್ ಜನರಲ್ ಮೇನೇಜರ್ ಬಶೀರ್ ಮುಹಮ್ಮದ್, ಎ.ಡಿ.ಎಂ. ಸಿ.ವಾಸುದೇವ
ಹಾಜರಿದ್ದರು.
ಜಿಲ್ಲಾ ಪಂಚಾಯ್ತಿ : 56 ಪ್ರಾಜೆಕ್ಟ್ಗಳಿಗೆ ಅಂಗೀಕಾರ
ಕಾಸರಗೋಡು: ಜಿಲ್ಲಾ ಪಂಚಾಯ್ತಿ ಅಭಿವೃದ್ಧಿ ವಿಚಾರಸಂಕಿರಣದಲ್ಲಿ ಮಂಡಿಸಿದ 56
ಪ್ರಾಜೆಕ್ಟ್ಗಳಿಗೆ ಅಂಗೀಕಾರ ಲಭಿಸಿದೆ.
ಹೊಸ ಪ್ರಾಜೆಕ್ಟ್ಗಳಿಗೆ 11.60 ಕೋಟಿ ರೂ. ಮೀಸಲಿಡಲಾಗಿದೆ. ಉತ್ಪಾದನೆ ವಲಯದಲ್ಲಿ
ಕೃಷಿ ಸಂಬಂಧಿ ಯೋಜನೆಗಳಿಗೆ 2.67 ಕೋಟಿ ರೂ., ಶಿಕ್ಷಣ, ಅಂಗವಿಕಲರ ಕಲ್ಯಾಣ, ಕುಡಿಯುವ
ನೀರು, ಅಂಗನವಾಡಿ ಮೊದಲಾದ ಸೇವಾ ವಲಯಕ್ಕೆ 4.05 ಕೋಟಿ ರೂ., ರಸ್ತೆ ಕಾಮಗಾರಿಗಳಿಗೆ
88 ಲಕ್ಷ ರೂ., ಪರಿಶಿಷ್ಟ ಜಾತಿ ಕಲ್ಯಾಣ ಯೋಜನೆಗಳಿಗೆ 2.22 ಕೋಟಿ ರೂ., ಪರಿಶಿಷ್ಟ
ವರ್ಗ ಕಲ್ಯಾಣ ಯೋಜನೆಗಳಿಗೆ 1.75 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಹಣ
ಮೀಸಲಿಡಲಾಗಿದೆ.
200 ಹೆಕ್ಟೇರ್ ಪ್ರದೇಶದಲ್ಲಿ ಅನ್ನಪೂರ್ಣ ಭತ್ತ ಕೃಷಿ ಅಭಿವೃದ್ದಿ ಯೋಜನೆಗೆ 15 ಲಕ್ಷ
ರೂ, ಕುಟುಂಬಶ್ರೀ ತರಕಾರಿ ಕೃಷಿಗೆ 12 ಲಕ್ಷ ರೂ. ಕೃಷಿ ಉಪಕರಣಗಳನ್ನು ವಿತರಿಸಲು 75
ಲಕ್ಷ ರೂ., ಸಮಗ್ರ ತೆಂಗು ಕೃಷಿ ಅಭಿವೃದ್ಧಿ ಯೋಜನೆಗೆ 70 ಲಕ್ಷ ರೂ., ಬೀಜೋತ್ಪಾದನಾ
ಕೇಂದ್ರಗಳ ಅಭಿವೃದ್ಧಿಗೆ 10 ಲಕ್ಷ ರೂ., ಅಡಿಕೆ ಕೃಷಿ ಅಭಿವೃದ್ಧಿಗೆ 15 ಲಕ್ಷ ರೂ.,
ಕುಟುಂಬಶ್ರೀ ಉತ್ಪನ್ನಗಳ ಮಾರಾಟ ಕೇಂದ್ರಗಳಿಗೆ 50 ಲಕ್ಷ ರೂ. ಕಾಯ್ದಿರಿಸಲಾಗಿದೆ.
ಸೇವಾ ವಲಯದಲ್ಲಿ ಐ.ಎ.ವೈ. ಗೃಹ ನಿರ್ಮಾಣ ಯೋಜನೆಗೆ 1.17 ಕೋಟಿ ರೂ., ಬಹು
ಮಾಧ್ಯಮ(ಮಲ್ಟಿ ಮೀಡಿಯ) ತರಗತಿ ಕೊಠಡಿ ನಿರ್ಮಾಣಕ್ಕೆ 80 ಲಕ್ಷ ರೂ., ಎಸ್.ಎಸ್.ಎ.
ಯೋಜನೆಗೆ 58.58 ಲಕ್ಷ ರೂ., ಅಂಗನವಾಡಿ ಕಟ್ಟಡ ಮತ್ತು ಕುಡಿಯುವ ನೀರು ಪೂರೈಕೆಗೆ 30
ಲಕ್ಷ ರೂ., ಆಶ್ರಯ ಯೋಜನೆಗೆ 20 ಲಕ್ಷ ರೂ., ಎಚ್.ಐ.ವಿ. ಬಾಧಿತರ ಪುನರ್ವಸತಿಗೆ 10
ಲಕ್ಷ ರೂ., ಝೀರೋ ವೇಸ್ಟ್ ಯೋಜನೆಗೆ 10 ಲಕ್ಷ ರೂ.ಗಳನ್ನು ತೆಗೆದಿರಿಸಲಾಗಿದೆ.
ಜಿಲ್ಲೆಯಲ್ಲಿ 18 ರಸ್ತೆಗಳ ಯೋಜನೆಗೆ 88 ಲಕ್ಷ ರೂ. ಮೌಲ್ಯದ ಯೋಜನೆಗಳನ್ನು
ರೂಪಿಸಲಾಗಿದೆ. ಕುಂಬಳೆಯ ಪೂಕಟ್ಟೆ-ಬಾಯಿಕಟ್ಟೆ-ಬತ್ತೇರಿ ರಸ್ತೆ(4 ಲಕ್ಷ ರೂ.),
ಕೊಟ್ಟೋಡಿ-ವಾವಡ್ಕ ರಸ್ತೆ(3.5 ಲಕ್ಷ ರೂ.), ದೈಗೋಳಿಯ ಮೀಯಪದವು-ಚಿಗುರುಪಾದೆ
ರಸ್ತೆ(6 ಲಕ್ಷ ರೂ.), ನಯಾಬಜಾರ್-ಅಂಬಾರ್ ರಸ್ತೆ(7 ಲಕ್ಷರೂ.), ಬಾಂಬುಳಿಮೂಲೆ
ಸಾಯ-ಮರಕ್ಕಿಣಿ ರಸ್ತೆ(5 ಲಕ್ಷ ರೂ.) ಸಹಿತ 18 ರಸ್ತೆಗಳನ್ನು ಈ ಯೋಜನೆಯಡಿ
ಅಭಿವೃದ್ಧಿಪಡಿಸಲಾಗುವುದು.
ವಿಚಾರಸಂಕಿರಣವನ್ನು ಜಿಲ್ಲಾಧಿಕಾರಿ ಆನಂದ್ ಸಿಂಗ್ ಉದ್ಘಾಟಿಸಿದರು. ಜಿಲ್ಲಾ
ಪಂಚಾಯ್ತಿ ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಗೀತಾಕೃಷ್ಣನ್, ಸ್ಥಾಯೀ ಸಮಿತಿ ಅಧ್ಯಕ್ಷರಾದ ವಿ.ನಾರಾಯಣ್,
ಪಿ.ಬಿ.ಅಬ್ದುಲ್ ರಸಾಕ್, ವಿ.ಪಿ.ಪಿ.ಮುಸ್ತಫಾ ಹಾಜರಿದ್ದರು.
ನಿಧನ
ಮೊಹಮ್ಮದ್
ಮಂಜೇಶ್ವರ: ಇಲ್ಲಿನ ವರ್ಕಾಡಿ ಸಮೀಪದ ಕೆದಂಬಾಡಿ ನಿವಾಸಿ ಮೊಹಮ್ಮದ್(44)
ಹೃದಯಾಘಾತದಿಂದ ನಿಧನರಾದರು.
ಸಿ.ಪಿ.ಐ. ಕೆದಂಬಾಡಿ ಶಾಖಾ ಜತೆ ಕಾರ್ಯದರ್ಶಿಯಾಗಿದ್ದರು. ಪತ್ನಿ ಶಕೀಲ ಮತ್ತು ಮೂವರು
ಮಕ್ಕಳಿದ್ದಾರೆ.