Monday, July 13, 2009

ಹಾಡುಹಗಲೇ ಮನೆಗೆ ನುಗ್ಗಿ 60 ಪವನ್ ಚಿನ್ನಾಭರಣ ಕಳವು/Stolen - Gold


ಕಾಸರಗೋಡು: ಹಾಡುಹಗಲೇ ಮನೆಗೆ ನುಗ್ಗಿ 60 ಪವನ್ ಚಿನ್ನಾಭರಣ ಕಳವು ಮಾಡಿದ ಘಟನೆ ಇಲ್ಲಿನ ಬೋವಿಕ್ಕಾನದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಇಲ್ಲಿನ ನಿವಾಸಿ, ಬೋವಿಕ್ಕಾನ ಶಾಲೆಯ ಶಿಕ್ಷಕಿ ಸರೋಜ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೋಡಿಕೊಂಡು ಕಳವು ನಡೆಸಲಾಗಿದೆ. ಮಧ್ಯಾಹ್ನ ಸರೋಜ ಅವರು ಶಾಲೆಯಿಂದ ಮನೆಗೆ ಬಂದಾಗ ಅಡುಗೆ ಕೋಣೆಯ ಬಾಗಿಲು ತೆರೆದಿತ್ತು. ಮಲಗುವ ಕೋಣೆಯ ಕಪಾಟಿನಲ್ಲಿದ್ದ ಆಭರಣಗಳನ್ನು ಕಳವು ಮಾಡಲಾಗಿದೆ. ಎರಡು ಸರ, ಒಂದು ನೆಕ್ಲೆಸ್, 10 ಬಳೆಗಳು, ಆರು ಜತೆ ಬೆಂಡೋಲೆಗಳು, ಮೂರು ಕೈಸರಗಳು ಕಳ್ಳರ ಪಾಲಾಗಿದೆ. ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.

 
ಪೆರಿಯ ಗ್ರಾಮೀಣ ಬ್ಯಾಂಕಿನಲ್ಲಿ ಕಳವು
ಆರೋಪಿಗಳ ಸುಳಿವು ಲಭ್ಯ
ಕಾಸರಗೋಡು: ಇಲ್ಲಿನ ಪೆರಿಯ ನಾತರ್್ ಮಲಬಾರ್ ಗ್ರಾಮೀಣ ಬ್ಯಾಂಕಿನಲ್ಲಿ ಕಳವು ನಡೆಸಿದ ಆರೋಪಿಗಳ ಬಗ್ಗೆ ತನಿಖಾ ತಂಡಕ್ಕೆ ಸುಳಿವು ಲಭಿಸಿದೆ.
ಉಪ್ಪಳದ ತಂಡ ಕಳವು ನಡೆಸಲು ಸ್ಕೆಚ್ ಹಾಕಿದೆ. ಆದರೆ ವಿಯೂರ್ ಕೇಂದ್ರೀಯ ಜೈಲ್ನಿಂದ ಶಿಕ್ಷೆ ಮುಗಿದು ಹೊರ ಬಂದ ಮೂವರು ತಮಿಳರು ಕಳವು ನಡೆಸಿದ್ದಾರೆ ಎಂದು ಶಂಕಿಸಲಾಗಿದೆ.
ಪಿಕ್ಪಾಕೆಟ್ ಪ್ರಕರಣದಲ್ಲಿ ವಿಯೂರ್ ಜೈಲಿನಲ್ಲಿರುವ ಇಲ್ಲಿನ ಪೊಯಿನಾಚಿಯ ಆರೋಪಿಯೋರ್ವನನ್ನು ವಿಚಾರಣೆಗೆ ಒಡ್ಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ತಾನು ಕಾಸರಗೋಡಿನಲ್ಲಿ ನಡೆಸಿದ ಎರಡು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದೇನೆ ಎಂದೂ ಆರೋಪಿ ಒಪ್ಪಿಕೊಂಡಿದ್ದಾನೆ. ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂಬ ವಿಶ್ವಾಸವನ್ನು ಪೊಲೀಸರು ಪ್ರಕಟಿಸಿದ್ದಾರೆ.
 
 
ರಿಯಾನ ನಾಪತ್ತೆ ಪ್ರಕರಣ
ನಗರದಲ್ಲಿ ಸತ್ಯಾಗ್ರಹ
ಕಾಸರಗೋಡು: ನಾಪತ್ತೆಯಾದ ರಿಯಾನ ಎಂಬ ಬಾಲಕಿಯನ್ನು ಪತ್ತೆ ಮಾಡುವಂತೆ ಆಗ್ರಹಿಸಿ ಜಿಲ್ಲಾ ಜನಪರ ನ್ಯಾಯ ವೇದಿಕೆ ಕಾಸರಗೋಡು ಹೊಸ ಬಸ್ಸು ನಿಲ್ದಾಣದ ವಠಾರದಲ್ಲಿ ಸೋಮವಾರ ಸತ್ಯಾಗ್ರಹ ನಡೆಸಿತು.
ಹೈಕೋಟರ್ು ವಕೀಲ ಕೆ.ವಿ.ರಾಮಚಂದ್ರನ್ ಉದ್ಘಾಟಿಸಿದರು. ಅಧ್ಯಕ್ಷ ಮಮ್ಮು ಚಾಲ ಅಧ್ಯಕ್ಷತೆ ವಹಿಸಿದರು. ನಾರಾಯಣನ್ ಪೆರಿಯ, ಪತ್ರಕರ್ತ ಕೆ.ಎಂ.ಅಹಮ್ಮದ್, ಟಿ.ಕೆ.ರಾಜನ್, ಎನ್.ಎ.ನೆಲ್ಲಿಕುಂಜೆ, ಕರಿವೆಳ್ಳೂರು ವಿಜಯನ್ ಹಾಜರಿದ್ದರು.
ತನಿಖೆ:
ರಿಯಾನಳ ಪತ್ತೆಗಾಗಿ ಪೊಲೀಸರು ಕನರ್ಾಟಕ ಮತ್ತು ಚೆನ್ನೈಯಲ್ಲಿ ತನಿಖೆ ನಡೆಸುತ್ತಿದ್ದಾರೆ.
ಕನರ್ಾಟಕದ ಮಂಗಳೂರು, ಪುತ್ತೂರು, ಸುಳ್ಯ ಎಂಬಲ್ಲಿ ತನಿಖೆ ನಡೆಸಲಾಗಿದೆ. ವಸತಿ ಗೃಹ ಮತ್ತು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿಯೂ ಮಾಹಿತಿ ಸಂಗ್ರಹಿಸಲಾಗಿದೆ. ಇನ್ನೊಂದು ಪಾಲಕ್ಕಾಡು ಮತ್ತು ಕೊಯಂಬತ್ತೂರಿನಲ್ಲಿ ತನಿಖೆ ನಡೆಸಿದೆ. ಚೆನ್ನೈಯಲ್ಲಿ ತಂಡ ತನಿಖೆ ನಡೆಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆರೆಗೆ ಬಿದ್ದು ಸಾವು
ಕಾಸರಗೋಡು: ಸ್ನಾನ ಮಾಡಲು ಕೆರೆಗೆ ಇಳಿದ ವ್ಯಕ್ತಿ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ಕುಂಬಳೆ ಸಮೀಪದ ಪುತ್ತಿಗೆಯಲ್ಲಿ ಇಂದು ನಡೆದಿದೆ.
ಪುತ್ತಿಗೆ ಧೂಮಣ್ಣ ರೈ ಅವರ ಪುತ್ರ ವಿಠಲ ರೈ(48) ಸಾವನ್ನಪ್ಪಿದ ವ್ಯಕ್ತಿ. ಪತ್ನಿ ಜಯಂತಿ ಮತ್ತು ನಾಲ್ವರು ಮಕ್ಕಳಿದ್ದಾರೆ.
ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸಾವು
ಕಾಸರಗೋಡು: ಆಟೋರಿಕ್ಷಾ ಮಗುಚಿ ದಾದಿ ಸಾವನ್ನಪ್ಪಿದ ಘಟನೆ ಕಾಞಂಗಾಡು ಸಮೀಪದ ಪೊತಾವೂರ್ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ. ಪೋತಾವೂರು ನಿವಾಸಿ ಅಂಜಲಿ(19) ಸಾವನ್ನಪ್ಪಿದ ವ್ಯಕ್ತಿ. ಈಕೆ ಪಯ್ಯನ್ನೂರಿನ ಆಸ್ಪತ್ರೆಯೊಂದರಲ್ಲಿ ದಾದಿಯಾಗಿದ್ದಳು.


ಮಹಿಳೆಯ ಹೊಟ್ಟೆಯಲ್ಲಿ 12 ಕಿಲೋ ಗಡ್ಡೆ
ಕಾಸರಗೋಡು: ಮಹಿಳೆಯೊಬ್ಬರ ಹೊಟ್ಟೆಯಿಂದ 12 ಕಿಲೋ ಗಡ್ಡೆಯನ್ನು ಶಸ್ತ್ರಕ್ರಿಯೆ ಮೂಲಕ ಹೊರತೆಗೆದ ಘಟನೆ ಸೋಮವಾರ ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ.
ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮೇಲ್ಪರಂಬ ನಿವಾಸಿ ಮೊಯ್ದೀನ್ ಕುಞ್ಞಿ ಅವರ ಪತ್ನಿ ಆಯಿಷಾ ಕೆ. ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು.

 



No comments:

Post a Comment