Monday, August 10, 2009

ದರೋಡೆ ಹೊಂಚು:ಐವರ ಸೆರೆ

ಮಂಜೇಶ್ವರ: ಉಪ್ಪಳದ ಮಣಿಮುಂಡ ಬೀಚ್ ಬಳಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಐವರು ಕುಖ್ಯಾತ ಚೋರರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ದಗರ್ಾ ಸಮೀಪದ ಮೇಲಂಗಡಿ ನಿವಾಸಿ ಜಲಾಲುದ್ದೀನ್, ಉಳ್ಳಾಲ ಮಾಸ್ತಿಕಟ್ಟೆ ಆಜಾದ್ ನಗರದ ಅಬ್ದುಲ್ಲ ಮಜಾರ್, ಮುಹಮ್ಮದ್ ಫಯಾಜ್, ಮುಹಮ್ಮದ್ ನಿಜಾಂ, ಉಳ್ಳಾಲ ಸಯ್ಯಿದ್ ಮದನಿ ರಸ್ತೆಯ ಮುಹಮ್ಮದ್ ಹನೀಫ್ ಎಂಬವರೇ ಆರೋಪಿಗಳು. ಇವರು ಹಲವು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಂದ ಚಾಕು, ಗುದ್ದಲಿ ಸಹಿತ ಮಾರಕಾಯುಧಗಳನ್ನು ವಶಪಡಿಸಲಾಗಿದೆ.


ಶ್ರೀಗಂಧ ಮರ ಕಳವು: ಇಬ್ಬರ ಸೆರೆ 


ಕಾಸರಗೋಡು: ಸಕರ್ಾರಿ ರಕ್ಷಿತಾರಣ್ಯದಿಂದ ಶ್ರೀಗಂಧ ಮರ ಕಳವು ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಕುಂಡಂಕುಳಿ ನಿವಾಸಿಗಳಾದ ಮೊಹಮ್ಮದ್ ಕುಞ್ಞಿ ಮತ್ತು ಕೃಷ್ಣನ್ ಎಂಬವರೇ ಆರೋಪಿಗಳು. ಇವರು ಶನಿವಾರ ರಾತ್ರಿ ಅರಣ್ಯದಲ್ಲಿ ಮರ ಕಡಿಯುತ್ತಿರುವ ಸುಳಿವು ಅರಣ್ಯಾಧಿಕಾರಿಗೆ ಲಭಿಸಿತ್ತು.
ತಕ್ಷಣ ಕಾರ್ಯಾಚರಣೆ ನಡೆಸಿದ ಪರಿಣಾಮ 8 ಗಂಧದ ಮರಗಳ ಸಹಿತ 2 ಗರಗಸ, ಕತ್ತಿ ಮತ್ತು ಬೈಕೊಂದನ್ನು ವಶಪಡಿಸಲಾಗಿದೆ.


ಕುಸಿದು ಬಿದ್ದು ಸಾವು
 
ಕಾಸರಗೋಡು: ಇಲ್ಲಿನ ಹೊಸ ಬಸ್ಸು ನಿಲ್ದಾಣದ ಬಳಿ ಪೈಂಟಿಂಗ್ ಕಾಮರ್ಿಕನೋರ್ವ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ಅಣಂಗೂರು ನಿವಾಸಿ ಮಹಾಲಿಂಗ ಎಂಬವರ ಪುತ್ರ ಎಂ.ನಾರಾಯಣ(46) ಸಾವನ್ನಪ್ಪಿದ ವ್ಯಕ್ತಿ. ಪೊಲೀಸರು ತಕ್ಣ ಆಸ್ಪತ್ರೆಗೆ ಸೇರಿಸಿದರೂ ಫಲಕಾರಿಯಾಗಿಲ್ಲ.

 
ನಿಧನ
 
ಅಬ್ದುಲ್ ಹಕೀಂ ಮೌಲವಿ
ಕಾಸರಗೋಡು: ಧಾಮರ್ಿಕ ಮುಂದಾಳು ಹಾಗೂ ನಗರದ ಹಸನತ್ ಅಲ್ ಜಾರಿಯ ಜುಮಾ ಮಸೀದಿಯ ಖತೀಬ್ ಎಂ.ಇ.ಅಬ್ದುಲ್ ಹಕೀಂ ಮೌಲವಿ(63) ಇಲ್ಲಿಗೆ ಸಮೀಪದ ಸೂಲರ್ುವಿನ ಸ್ವಗೃಹದಲಿ ್ಲಸೋಮವಾರ ಮುಂಜಾನೆ ನಿಧನರಾದರು.
3 ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಫೌಸಿಯಾ ಮತ್ತು ಮುಮ್ತಾಜ್ ಎಂಬ ಇಬ್ಬರು ಪತ್ನಿಯರ ಸಹಿತ 8 ಮಕ್ಕಳಿದ್ದಾರೆ.
 


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

No comments:

Post a Comment