Tuesday, August 11, 2009

ಪಾವೂರು ಶಾಲಾ ಸ್ಥಳಾಂತರ: ಮುಗಿಯದ ವಿವಾದ/Pavoor School Disputes


ಮಂಜೇಶ್ವರ: ಇಲ್ಲಿನ ಪಾವೂರು ವಿದ್ಯೋದಯ ಕಿರಿಯ ಪ್ರಾಥಮಿಕ ಶಾಲೆಯ ಸ್ಥಳಾಂತರ ವಿವಾದ ವಿನೂತನ ಪ್ರತಿಭಟನೆಯತ್ತ ಸಾಗಿದೆ.
ಶಾಲೆಯ ಹೊರಗೆ ಚಪ್ಪರ ನಿಮರ್ಿಸಿದ ಸ್ಥಳೀಯರು 120 ವಿದ್ಯಾಥರ್ಿಗಳಿಗೆ ಅಧ್ಯಾಪಕರ ಸಹಾಯದಿಂದ ತಾತ್ಕಾಲಿಕ ಶಿಕ್ಷಣದ ವ್ಯವಸ್ಥೆ ಮಾಡಿದರು.
ಕಳೆದ 50 ವರ್ಷಗಳಿಂದ ಕಾರ್ಯನಿರ್ವಹಿಸುವ ಶಾಲೆಯನ್ನು ಪಾವೂರಿನಿಂದ ಗೇರುಕಟ್ಟೆಯ ಚಚರ್್ ಬಳಿಗೆ ಸ್ಥಳಾಂತರಿಸಲು ಆಡಳಿತ ಮಂಡಳಿ ತೀಮರ್ಾನಿಸಿತ್ತು. ಇದು ಸ್ಥಳೀಯರ ಪ್ರತಿಭಟನೆಗೆ ನಾಂದಿ ಹಾಡಿದೆ. ಪಾವೂರು, ಪೊಯ್ಯೆ, ಮುಡಿಮಾರು, ಮಚ್ಚಂಪಾಡಿ ಎಂಬಲ್ಲಿರುವ ವಿದ್ಯಾಥರ್ಿಗಳಿಗೆ ವರದಾನವಾಗಿದ್ದ ಈ ಶಾಲೆಯನ್ನು 2 ಕಿ.ಮೀ. ದೂರದ ಗೇರುಕಟ್ಟೆಗೆ ಸ್ಥಳಾಂತರಿಸಿದರೆ ಅಲ್ಲಿಗೆ ಹೋಗುವುದು ಕಷ್ಟಸಾಧ್ಯ ಎನ್ನುತ್ತಾರೆ ಸ್ಥಳೀಯರು.
ಸಕರ್ಾರ ಪಾವೂರಿನಲ್ಲಿ ಶಾಲೆಗೆ ಅಂಗೀಕಾರ ನೀಡಿದರೆ ಸ್ಥಳೀಯರ ಸಹಕಾರದಲ್ಲಿ ಕಟ್ಟಡ ನಿಮರ್ಿಸಲಾಗುವುದು ಸೋಮವಾರ ಸಂಜೆ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಶಾಲೆಯನ್ನು ಸ್ಥಳಾಂತರಿಸದಂತೆ ಸಹಾಯಕ ವಿದ್ಯಾಧಿಕಾರಿ, ಜಿಲ್ಲಾ ವಿದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲು ಸಭೆ ನಿರ್ಧರಿಸಿದೆ.
 

 
ಬಸ್ಸು ಸಿಬ್ಬಂದಿಗಳಿಗೆ ಹಲ್ಲೆ : ನಾಲ್ವರಿಗೆ ಗಾಯ
 
ಮಂಜೇಶ್ವರ: ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಖಾಸಗಿ ಬಸ್ಸಿನ ಸಿಬ್ಬಂದಿಗಳಿಗೆ ತಂಡ ಹಲ್ಲೆ ನಡೆಸಿದ ಘಟನೆ ಸೋಮವಾರ ಸಂಜೆ ತಲಪಾಡಿಯಲ್ಲಿ ನಡೆದಿದೆ.
ಚಾಲಕ, ಕಾಸರಗೋಡಿನ ಎರಿಯಾಲ್ ನಿವಾಸಿ ರವಿ ನಾಯ್ಕ್, ನಿವರ್ಾಹಕ ಜಯನ್, ಕ್ಲೀನರ್ ಸತೀಶ್ ಎಂಬವರು ಗಾಯಗೊಂಡಿದ್ದಾರೆ. ಸತೀಶ್ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಉಳಿದ ಇಬ್ಬರನ್ನು ಮಂಜೇಶ್ವರ ಸಕರ್ಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ತಮ್ಮ ಮೇಲೆ ಹಲ್ಲೆ ನಡೆಸಿ, ಜಯನ್ ಅವರ ಕೈಲಿದ್ದ 3,500 ರೂ. ಮತ್ತು 2.5 ಪವನ್ ಚಿನ್ನಾಭರಣಗಳನ್ನು ಅಪಹರಿಸಲಾಗಿದೆ  ಎಂದು ಗಾಯಾಳುಗಳು ದೂರಿದ್ದಾರೆ. ಬಸ್ಸಿನ ಗಾಜುಗಳನ್ನು ಹುಡಿ ಮಾಡಲಾಗಿದೆ.
ಕುಂಜತ್ತೂರಿನಲ್ಲಿ ನಡೆದ ಇನ್ನೊಂದು ಪ್ರಕರಣದಲ್ಲಿ ಬಸ್ಸು ಚಾಲಕ ಉಪ್ಪಳದ ಬಶೀರ್ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ.
 
 
ನಕಲಿ ವೈದ್ಯನ ವಂಚನೆ
 
ಮಂಜೇಶ್ವರ: ಉಪ್ಪಳ ಸಮೀಪದ ಪೈವಳಿಕೆಯಲ್ಲಿ ನಕಲಿ ವೈದ್ಯನೋರ್ವ ಜನಸಾಮಾನ್ಯರನ್ನು ವಂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಚಿಕುನ್ಗುನ್ಯಾ ರೋಗಿಗಳ ಸಮೀಕ್ಷೆ ನಡೆಸುವ ನೆಪದಲ್ಲಿ ಹಲವಾರು ಮನೆಗಳಿಂದ ತಲಾ 100 ರೂ.ಗಳಂತೆ ಪಡೆದು ಜನರಿಗೆ ಪಂಗನಾಮ ಹಾಕಿದ್ದಾನೆ. ರೋಗಿಗಳಿಗೆ ಸಕರ್ಾರ 20,000 ರೂ. ನೀಡುತ್ತಿದೆ ಎಂದು ಆಮಿಷ ತೋರಿ ರೇಷನ್ ಕಾಡು ಮತ್ತು ಗುರುತು ಚೀಟಿ ದೃಢೀಕರಿಸುವ ನಾಟಕವಾಡಿದ್ದಾನೆ. ವಂಚಕ ಎಂಬುದು ತಿಳಿಯುವಷ್ಟರಲ್ಲಿ ನಕಲಿ ವೈದ್ಯ ಕಾಲಿಗೆ ಬುದ್ಧಿ ಹೇಳಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
 
 
 
ಬಾವಿಗೆ ಬಿದ್ದು ಸಾವು
ಮಂಜೇಶ್ವರ: ಇಲ್ಲಿನ ಸುಂಕದಕಟ್ಟೆ ಸಮೀಪದ ಕಳಿಯೂರು ಸಿಂತಾಜೆಯ ಮಧ್ಯವಯಸ್ಕರೊಬ್ಬರು ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಮರದ ಕೆಲಸದ ಕಾಮರ್ಿಕರಾಗಿದ್ದ ಹೆನ್ರಿ ಡಿ'ಸೋಜಾ(55) ಎಂದು ಗುರುತಿಸಲಾಗಿದೆ. ಇವರ ಸಾವಿಗೆ ಕಾರಣ ತಿಳಿದುಬಂದಿಲ್ಲ.


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

1 comment: