ಕಾಸರಗೋಡಿನ ಕುಂಬಳೆ ಸಮೀಪದ ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯಲ್ಲಿ ಚಿಗುರು ಫಾರ್ಮಸರ್್ ಕ್ಲಬ್ ಮತ್ತು ಎಡನಾಡು-ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ `ಹನಿಗೂಡಿಸೋಣ' ಸ್ಲೈಡ್ ಶೋ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಪತ್ರಕರ್ತ ಶ್ರೀಪಡ್ರೆ ಮಾತನಾಡಿದರು.
ಕಾಸರಗೋಡು: ಕರಾವಳಿಯಲ್ಲಿ ನೀರಿಂಗಿಸುವುದರಿಂದ ಧನಾತ್ಮಕ ಫಲಿತಾಂಶ ಸಾಧ್ಯವಿಲ್ಲ ಎಂಬ ತಪ್ಪು ಗ್ರಹಿಕೆಯನ್ನು ಬದಿಗೊತ್ತಿ ಸಕಾರಾತ್ಮಕ ಯಶಸ್ಸು ಗಳಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ಪತ್ರಕರ್ತ ಶ್ರೀಪಡ್ರೆ ಅಭಿಪ್ರಾಯಪಟ್ಟರು.
ಭಾನುವಾರ ಕುಂಬಳೆ ಸಮೀಪದ ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯಲ್ಲಿ ಚಿಗುರು ಫಾರ್ಮಸರ್್ ಕ್ಲಬ್ ಮತ್ತು ಎಡನಾಡು-ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ಆಶ್ರಯದಲ್ಲಿ ಏರ್ಪಡಿಸಿದ `ಹನಿಗೂಡಿಸೋಣ' ಸ್ಲೈಡ್ ಶೋ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅರಣ್ಯ ನಾಶದಿಂದಾಗಿ ನಮ್ಮ ಮಲೆನಾಡು ಕರಾವಳಿಯಲ್ಲೂ ನೀರಿನ ಕ್ಷಾಮ ಅನುಭವಕ್ಕೆ ಬರುತ್ತಿದೆ. ಕಟ್ಟ, ಮದಕ, ಸುರಂಗ ಇತ್ಯಾದಿ ನಮ್ಮ ನಾಡಿನ ಪಾರಂಪರಿಕ ಜಲ ಸಂರಕ್ಷಣಾ ವ್ಯವಸ್ಥೆಗಳನ್ನು ಕಾಪಾಡುವುದರ ಮೂಲಕ ನೀರಿನ ಸಮಸ್ಯೆಗೆ ಪರಿಹಾರ ಸಾಧ್ಯ ಎಂದೂ ಅವರು ವಿವರಿಸಿದರು.
ನಬಾಡರ್್ ಸಂಸ್ಥೆಯ ಸಹಾಯಕ ಮೇನೇಜರ್ ಎನ್.ಗೋಪಾಲನ್ ಫಾರ್ಮಸರ್್ ಕ್ಲಬ್ಗಳ ಚಟುವಟಿಕೆಯ ರೂಪುರೇಷೆಗಳನ್ನು ವಿವರಿಸಿದರು. ಜನ ಹಿತಕ್ಕಾಗಿ ನಬಾಡರ್್ ಹಮ್ಮಿಕೊಳ್ಳುತ್ತಿರುವ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಸೀತಾಂಗೋಳಿ ಕಿನ್ಫ್ರಾ ಪಾಕರ್ಿನಲ್ಲಿ ಕಾಯರ್ಾಚರಿಸುತ್ತಿರುವ ಪಾಮ್ಸ್ ಇಕೋ ಸಂಸ್ಥೆಯ ಮಾಧವ ಬಯೋ ಪ್ಲೇಟ್ ತಯಾರಿಯಲ್ಲಿ ಸಂಸ್ಥೆಯ ಪ್ರಯತ್ನಗಳ ಕುರಿತು ಮಾಹಿತಿ ನೀಡಿದರು.
ಇಚ್ಲಂಪಾಡಿ ಹಿರಿಯ ಬುನಾದಿ ಶಾಲಾ ಮುಖ್ಯೋಪಾಧ್ಯಾಯ ಪಿ.ನರಹರಿ ಹಾಜರಿದ್ದರು. ಕಟಾರ ಲಕ್ಷ್ಮೀನಾರಾಯಣ ಭಟ್, ಮಹಾಬಲ ಭಂಡಾರಿ, ಚಂದ್ರಕಾಂತ, ಶ್ಯಾಮ ಭಟ್ ಸಂವಾದದಲ್ಲಿ ಭಾಗವಹಿಸಿದರು.
ಚಿಗುರು ಫಾರ್ಮಸರ್್ ಕ್ಲಬ್ ಅಧ್ಯಕ್ಷೆ ಲಕ್ಷ್ಮಿ. ವಿ. ಭಟ್ ಪ್ರಾಸ್ತಾವಿಕ ಮಾತಾಡಿದರು. ಎಡನಾಡು-ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಚ್.ಶಿವರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು.
ಕ್ಲಬ್ಬಿನ ಕಾರ್ಯದಶರ್ಿ ರವಿಶಂಕರ ದೊಡ್ಡಮಾಣಿ ಸ್ವಾಗತಿಸಿ, ಬ್ಯಾಂಕ್ ಕಾರ್ಯದಶರ್ಿ ಎ.ಕೃಷ್ಣ ಭಟ್ ವಂದಿಸಿದರು. ಶಾಲಾ ಅಧ್ಯಾಪಕ ಬಾಲಕೃಷ್ಣ ಆಚಾರ್ಯ ನಿರೂಪಿಸಿದರು.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment