Wednesday, July 22, 2009

ಸೂರಂಬೈಲಿನಲ್ಲಿ `ಹಲಸು ಸಂಸ್ಕರಣೆ'/Jackfruit Exhibition

ಸೂರಂಬೈಲು(ಕಾಸರಗೋಡು): ಸಾರ್ವಕಾಲಿಕ ಮೌಲ್ಯವಿಲ್ಲದೆ ಮೂಲೆಗುಂಪಾಗಿದ್ದ ಹಲಸು ಈಗ ಹೆಚ್ಚಿನ ಮನೆಗಳ ಪ್ರಧಾನ ಹಜಾರದಲ್ಲಿ ಸ್ಥಾನ ಪಡೆಯುತ್ತಿದೆ. ಹಲಸಿನ ಮೌಲ್ಯವಧರ್ಿತ ಉತ್ಪನ್ನಗಳಿಗೆ ಮಾರುಕಟ್ಟೆ ಕುದುರುತ್ತಿದೆ. ಇದು ಶುಭ ಸಂಕೇತ. ಇನ್ನು ಮನೆ ಮನೆಗಳಲ್ಲೂ ಹಲಸಿಗೆ ಪ್ರಾಧಾನ್ಯತೆ ದೊರಕುವಂತೆ ಮಾಡಬೇಕಿದೆ ಎಂದು ಅನುಭವಿ ಪಾಕ ತಜ್ಞೆ ಸುಶೀಲಾ ಭಟ್ ಪಾತನಡ್ಕ ಅಭಿಪ್ರಾಯಪಟ್ಟರು.
ಚಿಗುರು ಫಾರ್ಮಸರ್್ ಕ್ಲಬ್ ಮತ್ತು ಎಡನಾಡು ಕಣ್ಣೂರು ಸೇವಾ ಸಹಕಾರೀ ಬ್ಯಾಂಕ್ ಸಹಯೋಗದಲ್ಲಿ ಸೂರಂಬೈಲು ಗಣೇಶ ಭಜನಾ ಮಂದಿರದಲ್ಲಿ ಮಂಗಳವಾರ ಜರುಗಿದ `ಹಲಸು: ಸಂಸ್ಕರಣೆ - ಪ್ರಾತ್ಯಕ್ಷಿಕೆ' ಕಾರ್ಯಕ್ರಮದಲ್ಲಿಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಚಿಗುರು ಫಾರ್ಮಸರ್್ ಕ್ಲಬ್ ಅಧ್ಯಕ್ಷೆ ಲಕ್ಷ್ಮಿ.ವಿ.ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಡನಾಡು ಕಣ್ಣೂರು ಸೇವಾ ಸಹಕಾರೀ ಬ್ಯಾಂಕ್ ಅಧ್ಯಕ್ಷ ಶಿವರಾಮ್ ಭಟ್ ಕಾರಿಂಜೆ, ತಲೆಂಗಳ ಈಶ್ವರ ಭಟ್, ಶ್ರೀಕೃಷ್ಣ ರಾವ್ ಪೆರಿಯಾಲ್, ಪಿ.ಕೃಷ್ಣ ಭಟ್ ಪೆಮರ್ುಖ, ರಾಜು ಸ್ಟೀಫನ್ ಕಿದೂರು, ಕಟಾರ ಲಕ್ಷ್ಮೀನಾರಾಯಣ ಭಟ್, ಕೇಶವ ಭಟ್ ಗುರುವಾಯನಕೆರೆ ಹಾಜರಿದ್ದರು.
ಕಾರ್ಯಕ್ರಮದ ಅಂಗವಾಗಿ ಜಾಹ್ನವಿ ಭಟ್ ಹಳೆಮನೆ ತಯಾರಿಸಿದ ಹಲಸು ಉತ್ಪನ್ನಗಳಾದ ಹಪ್ಪಳ, ಜಾಮ್, ಪೆರಟ್ಟಿ, ಉಂಡೆಕಾಳು, ಹಲ್ವ, ಚಿಪ್ಸ್ ಇತ್ಯಾದಿಗಳನ್ನು ಪ್ರದಶರ್ಿಸಲಾಯಿತು.
ಸುಶೀಲಾ ಭಟ್ ಪಾತನಡ್ಕ ಹಲಸಿನ ಹಣ್ಣಿನ ಜೆಲ್ಲಿ, ಜ್ಯಾಂ, ಸ್ಕ್ವಾಷ್ಗಳ ಪ್ರಾತ್ಯಕ್ಷಿಕೆ ನೀಡಿದರು.
ಎಡನಾಡು ಕಣ್ಣೂರು ಸೇವಾ ಸಹಕಾರೀ ಬ್ಯಾಂಕ್ ಕಾರ್ಯದಶರ್ಿ ಎ.ಕೃಷ್ಣ ಭಟ್ ಸ್ವಾಗತಿಸಿ,  ಚಿಗುರು ಫಾರ್ಮಸರ್್ ಕ್ಲಬ್ ಸದಸ್ಯ ಎಚ್.ಶಿವರಾಮ ಭಟ್ ದೊಡ್ಡಮಾಣಿ ವಂದಿಸಿದರು. ಹವ್ಯಾಸಿ ಪತ್ರಕರ್ತ ಹರೀಶ್ ಹಳೆಮನೆ ಕಾರ್ಯಕ್ರಮ ನಿರೂಪಿಸಿದರು.
 

No comments:

Post a Comment