ದಿನಾಂಕ 05/08/09 ರಂದು ರಾತ್ರಿ ಸುಮಾರು 9.30 ಗಂಟೆಗೆ ಉಡುಪಿ ಶಾರದ ಕಲ್ಯಾಣ ಮಂಟಪದ ಹತ್ತಿರ ಕಿಯಾರಾಮ್ ಎಂಬವರು ಸೈಕಲ್ನಲ್ಲಿ ಹೋಗುತ್ತಿರುವಾಗ ಆಪಾದಿತ ಮೋಟಾರ್ ಸೈಕಲ್ ನಂ ಕೆಎ-20-ಆರ್-5867ನೇದರ ಸವಾರನು ತನ್ನ ವಾಹನವನ್ನು ಅತೀವೇಗ ಅಜಾಗರೂಕತೆುಂದ ಚಲಾುಸಿಕೊಂಡು ಬಂದು ಕಿಯಾರಾಮ್ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಎಡಕಣ್ಣಿಗೆ ಪೆಟ್ಟಾಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇಲ್ಲದೆ ಇದ್ದು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ವಾಹನ ಅಪಘಾತದಿಂದ ಆಪಾದಿತ ವಿಲ್ಸನ್ ಹಾಗೂ ಸಹ ಸವಾರ ರೋಹಿತ್ ಎಂಬವರಿಗೂ ಗಾಯವಾಗಿರುವುದಾಗಿದೆ ಈ ಅಪಘಾತದ ಬಗ್ಗೆ ಮೇಘರಾಮ್, ತಂದೆ: ದಿ: ಬೆಹರಾ ರಾಂ, ವಾಸ: ಫ್ಲಾಟ್ ನಂ. 401, ಕಂಪಟರ್್ ಟವರ್ಸ್, ಕಲ್ಪನಾ ಟಾಕೀಸ್ನ ಬಳಿ, ಉಡುಪಿ. ರವರು ನೀಡಿದ ದೂರಿನ ಮೇರೆಗೆ ಉಡುಪಿ ನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 258/09 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಜುಗಾರಿ ಪ್ರಕರಣ
ದಿನಾಂಕ 5/08/09 ರಂದು ಕೋಟಾ ಠಾಣಾ ಪೊಲೀಸ್ ಉಪನೀರೀಕ್ಷಕರಾದ ಶ್ರೀ ಮಹೇಶ್ ಪ್ರಸಾದ್ ಇವರು ಠಾಣಾ ಸರಹದ್ದಿನಲ್ಲಿ ಸಿಬ್ಬಂದಿಯವರೊಂದಿಗೆ ಇಲಾಖಾ ವಾಹನದಲ್ಲಿ ರೌಂಡ್ಸ್ನಲ್ಲಿರುವ ಸಮಯ ಸುಮಾರು 18:00 ಗಂಟೆಗೆ ಮಾನ್ಯ ಪೊಲೀಸ್ ಉಪಾಧೀಕ್ಷಕರು ಶ್ರೀ ಜಯಂತ್ ಶೆಟ್ಟಿ ಉಡುಪಿ ಉಪ ವಿಭಾಗ ರವರು ಸೆಲ್ ಪೋನಿಗೆ ಕರೆ ಮಾಡಿ ಸಾಲಿಗ್ರಾಮ ಮೀನು ಮಾಕರ್ೇಟ್ ಬಳಿ ಮಟ್ಕಾ ಜುಗಾರಿ ನಡೆಸುತ್ತಿರುವುದಾಗಿ ಮಾಹಿತಿ ನೀಡಿ ದಾಳಿ ನಡೆಸುವರೇ ಮಾರ್ಗದರ್ಶನ ನೀಡಿದ ಮೇರೆಗೆ ಸಿಬ್ಬಂದಿಯವರೊಂದಿಗೆ ಸ್ಥಳ ತಲುಪಿ ನೋಡಲಾಗಿ ಸಾಲಿಗ್ರಾಮದ ಮೀನು ಮಾರುಕಟ್ಟೆ ಎದುರು ಇಬ್ಬರು ವ್ಯಕ್ತಿಗಳು 1 ರೂಪಾುಗೆ 70/- ರೂ ಕೊಡುವುದಾಗಿ ಹೇಳುತ್ತಾ, ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮಟ್ಕಾ ಚೀಟಿ ಬರೆದು ಕೊಡುತ್ತಿರುವುದನ್ನು ನಾವು ಖಚಿತ ಪಡಿಸಿಕೊಂಡು 18:10 ಗಂಟೆಗೆ ದಾಳಿ ನಡೆಸಿ ಆರೋಪಿಗಳಾದ 1.ರತ್ನಕಾರ (38), ತಂದೆ: ಕುಷ್ಟ ಪೂಜಾರಿ, ವಾಸ: ಪಡುಕೆರೆ, ಪಾರಂಪಳ್ಳಿ ಗ್ರಾಮ 2) ಬಸವ(48), ತಂದೆ: ದಿ. ಕಾಳ, ವಾಸ: ಕಾರ್ತಟ್ಟು ಗ್ರಾಮ, ಉಡುಪಿ 3) .ತಿಮ್ಮ ಪೂಜಾರಿ, ಕಾರ್ಕಡ ಇವರುಗಳನ್ನು ದಸ್ತಗಿರಿ ಮಾಡಿ ಜೂಜಾಟಕ್ಕೆ ಬಳಸಿದ ನಗದು ರೂಪಾು 640/- ಹಾಗೂ ಇತರ ಸ್ವತ್ತುಗಳನ್ನು ಸ್ವಾಧೀನ ಪಡಿಸಿಕೊಂಡು ಠಾಣಾ ಅಪರಾಧ ಕ್ರಮಾಂಕ 183/08 ಕಲಂ 78(3) ಕನರ್ಾಟಕ ಪೊಲೀಸ್ ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಜಾನುವಾರು ಕಳವು ಪ್ರಕರಣ
ದಿನಾಂಕ 5/08/09 ರಂದು 21:00 ಗಂಟೆಗೆ ಕೋಟಾ ಠಾಣಾ ಪೊಲೀಸ್ ಉಪನೀರೀಕ್ಷಕರಾದ ಶ್ರೀ ಮಹೇಶ್ ಪ್ರಸಾದ್ ಇವರು ಠಾಣೆಯಲ್ಲಿರುವಾಗ್ಗೆ ಮಧುವನ ರೈಲ್ವೇ ಬ್ರಿಡ್ಜ್ ಬಳಿ ಬಿಳಿ ಬಣದ್ಣ ಟಾಟಾ ಎಲ್.ಜಿ..ವಿ ಟೆಂಪೋದಲ್ಲಿ ಕೋಣಗಳನ್ನು ತುಂಬಿಸುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ತಲುಪಿ ನೋಡಲಾಗಿ ಇಬ್ಬರು ವ್ಯಕ್ತಿಗಳು ಬಿಳಿ ಬಣ್ಣದ ಎಲ್.ವಿ.ಜಿ ಟೆಂಪೋ ನಂಬ್ರ ಕೆ.ಎ 20 ಎ 6944 ನೇಯದಕ್ಕೆ ಕೋಣಗಳನ್ನು ತುಂಬಿಸುತ್ತಿದ್ದು ವ್ಯಕ್ತಿಗಳು ಸಮವಸ್ತ್ರದಲ್ಲಿದ್ದ ಪೊಲೀಸ್ ಉಪನೀರೀಕ್ಷಕರಾದ ಶ್ರೀ ಮಹೇಶ್ ಪ್ರಸಾದ್ ಮತ್ತು ಸಿಬ್ಬಂದಿಯವರನ್ನು ನೋಡಿ ಓಡಿ ಹೋಗಿದ್ದು ಹಾಗೆ ಓಡುವಾಗ ಒಬ್ಬ ವ್ಯಕ್ತಿಯು ಅಬ್ದುಲ್ ಖಾದರ್ ಎಂದು ಕರೆದಿದ್ದು ಟೆಂಪೋವನ್ನು ಸಿಬ್ಬಂದಿಯವರೊಂದಿಗೆ ಪರಿಶೀಲಿಸಲಾಗಿ ವಾಹನದ ಹಿಂದೆ ಟರ್ಪಲಿನಿಂದ ಮುಚ್ಚಿದ್ದು ಪರಿಶೀಲಿಸಲಾಗಿ ಮೂರು ಕೋಣಗಳನ್ನು ಉಸಿರುಗಟ್ಟಿಸುವ ರೀತಿಯಲ್ಲಿ ಕೂಡಿಹಾಕಿಕೊಂಡು ಅದರ ಕಾಲುಗಳನ್ನು ಹುರಿಹಗ್ಗದಿಂದ ಕಟ್ಟಿ ಅಮಾನುಷ ರೀತಿಯಲ್ಲಿ ಇಕ್ಕಟ್ಟಾದ ಸ್ಥಳದಲ್ಲಿ ನಿಲ್ಲಿಸಿದ್ದು ಕೋಣಗಳನ್ನು ಯಾವುದೇ ಪರವಾನಿಗೆ ಪಡೆಯದೇ ಅಮಾನುಷ ರೀತಿಯಲ್ಲಿ ಕೊಂಡು ಹೋಗುತ್ತಿರುವುದಾಗಿದೆ. ಈ ಬಗ್ಗೆ ಶ್ರೀ ಮಹೇಶ್ ಪ್ರಸಾದ್ ರವರ ದೂರಿನ ಮೇರೆಗೆ ಠಾಣಾ ಅಪರಾಧ ಕ್ರಮಾಂಕ 184/09 ಕಲಂ ಮೈಸೂರು ಪ್ರಿವೆನ್ಶನ್ ಆಪ್ ಕೌಸ್ಲಾಟರ್ ಆಂಡ್ ಕೇಟಲ್ ಪ್ರಿಸ ರ್ ಆಕ್ಟ್ 1964 8,9,11, ದಿ.ಪ್ರಿವೆಶನ್ ಆಫ್ ಕ್ರುವೇಲಿಟಿ ಟು ಎನಿಮಲ್ ಆಕ್ಟ್ 1960 11 ಐ.ಪಿ.ಸಿ. 1860 34 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹಲ್ಲೆ ಪ್ರಕರಣ
ದಿನಾಂಕ:05/08/09 ರಂದು 14:00 ಗಂಟೆಗೆ ಕಾರ್ಕಳ ತಾಲೂಕು ಬೈಲೂರು ಗ್ರಾಮದ ದುಗರ್ಾ ನಸರ್ಿಂಗ್ ಹೋಮ್ ಮನೆ ಚಂದನ್ ವೈನ್ ಶಾಫ್ನ ವಾಸಿ ಕೆ. ಭುಜಂಗ ತಂದೆ: ಕೂಕ್ರ ಎಂಬವರು ಚಂದನ್ ವೈನ್ ಶಾಫ್ನ ಬಳಿ ತನ್ನ ಅಣ್ಣನಾದ ಶಂಕರ ಎಂಬವರೊಂದಿಗೆ ಮಾತನಾಡುತ್ತಿರುವಾಗ ಆಪಾದಿತ ರಮೇಶನು ಇವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿ ದೂಡಿ ಹಾಕಿದ ಪರಿಣಾಮ ಎಡ ಕೈ ಗುದ್ದಿದ ಗಾಯವಾಗಿರುವುದಾಗಿದೆ. ಈ ಬಗ್ಗೆ ಕೆ. ಭುಜಂಗ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 107/09 ಕಲಂ. 324,504,506 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಜೀವ ಬೆದರಿಕೆ ಪ್ರಕರಣ
ದಿನಾಂಕ 06.08.09 ರಂದು 10:30 ಗಂಟೆಗೆ ಉಡುಪಿ ತಾಲೂಕು 34 ನೇ ಕುದಿ ಗ್ರಾಮ, ಪಡು ಕೋಟಂಬೈಲು, ಬೈದಬೆಟ್ಟು ಅಂಚೆ ವಾಸಿ ಕೆ.ಉಮ(43), ಗಂಡ: ಕೃಷ್ಣ ವಾಕುಡ, ಎಂಬವರು ಠಾಣೆಗೆ ಬಂದು ನೀಡಿದ ಲಿಖಿತ ದೂರುನೀಡಿದ್ದು ತಾನು ಮನೆಯಲ್ಲಿ ಇರದ ಸಮಯ ಪರಿಚಯದ ಆರೋಪಿ ರವೀಂದ್ರ ಐತಾಳ್(ವಿಳಾಸ ಪತ್ತೆಯಾಗಿರುವುದಿಲ್ಲ) ಎಂಬವರು ಚಿತ್ರಪಾಡಿ ಗ್ರಾಮ ಉರಾಳಕೇರಿಯಲ್ಲಿರುವ ತವರು ಮನೆಗೆ ದಿನಾಂಕ 04/08/09 ರಂದು ಸಂಜೆ 6:00 ಗಂಟೆಗೆ ಅಕ್ರಮವಾಗಿ ಪ್ರವೇಶಿಸಿ ತಾು ಮತ್ತು ಅಕ್ಕನಿಗೆ ಅವ್ಯಾಚ್ಚ ಶಬ್ದಗಳಿಂದ ಬೈದು ಅವರ ಮೈಮೇಲೆ ಕೈಹಾಕಿ ಅವಮಾನ ಮಾಡಿರುತ್ತಾರೆ. ಅಲ್ಲದೇ ಅಕ್ಕನ ಮಗ ಅಶ್ವತ್ಥನು ರವಿಂದ್ರ ಐತಾಳರಲ್ಲಿ ನೀವು ಯಾಕೆ ಹೀಗೆ ಮಾಡುತ್ತೀರಿ ಎಂದು ಕೇಳಿದಾಗ ಆರೋಪಿತನು ತಾನು ಬೆಂಗಳೂರು ಮತ್ತು ಗೋಕರ್ಣದಲ್ಲಿ ಕೊಲೆ ಮಾಡಿ ತಪ್ಪಸಿಕೊಂಡು ಬಂದಿದ್ದೆ, ನನ್ನನ್ನು ಕೇಳಲಿಕ್ಕೆ ನೀನು ಯಾರು ಎಂದು ಹೇಳಿ ಮನೆಯವರೆಲ್ಲರಿಗೆ ಕೊಲೆ ಮಾಡುತ್ತೇನೆ ಎಂಬುವುದಾಗಿ ಜೀವ ಬೆದರಿಕೆ ಹಾಕಿದ ವಿಚಾರವನ್ನು ಕೊಕ್ಕಣರ್ೇಯಲ್ಲಿರುವಾಗ ದಿನಾಂಕ 05/8/09 ರಂದು ಬೆಳಿಗ್ಗೆ 11:00 ಗಂಟೆಗೆ ಉಮಾರವರ ಅಕ್ಕ ರಮಾದೇವಿಯವರು ವಿಷಯ ತಿಳಿಸಿದ್ದು, ಈ ಬಗ್ಗೆ ಮನೆಯವರಲ್ಲಿ ಚಚರ್ಿಸಿ ದಿನಾಂಕ 06/08/09 ರಂದು ಠಾಣೆಗೆ ಬಂದು ಕೆ.ಉಮಾ ರವರು ಕೋಟಾ ಠಾಣೆಯಲ್ಲಿ ದೂರು ನೀಡಿದ್ದು ಠಾಣಾ ಅಪರಾಧ ಕ್ರಮಾಂಕ 185/09 ಕಲಂ. 448,354,504,506 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಆತ್ಮಹತ್ಯೆ ಪ್ರಕರಣ
ದಿನಾಂಕ 05-08-09ರಂದು ಸಂಜೆ 07-00 ಗಂಟೆುಂದ ದಿನಾಂಕ 06-08-09 ರ ಬೆಳಿಗ್ಗೆ 6-30 ಗಂಟೆಯ ನಡುವೆ ಉಡುಪಿ ತಾಲೂಕು ಬ್ಶೆರಂಪಳ್ಳಿ ಗ್ರಾಮದ ಅರ್ಮಲ್ ಗುಡ್ಡೆ ಎಂಬಲ್ಲಿ ಶ್ರೀಧರ ಕುಲಾಲ್ (30) ತಂದೆ ಗೋಪಾಲ ಕುಲಾಲ್ ವಾಸ ಅರಮಲ್ ಗುಡ್ಡೆ ಬ್ಶೆರಂಪಳ್ಳಿ ಗ್ರಾಮ ಉಡುಪಿ ತಾಲುಕು ಇವರ ಬಾವ ಸುದಾಕರ ಕುಲಾಲ್ ಪ್ರಾಯ 31 ವರ್ಷ ತಂದೆ ಶೇಷ ಕುಲಾಲ್ ವಾಸ ಕೆಳ ಮನೆ ಕುಂಜಲ್ ಅಂಚೆ ಉಡುಪಿ ಎಂಬವರು ಜೀವನದಲ್ಲಿ ಜೀಗುಪ್ಸೆ ಗೊಂಡು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಶ್ರೀಧರ ಕುಲಾಲ್ ರವರು ಹಿರಿಯಡ್ಕ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 13/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕೊಲೆ ಪ್ರಕರಣ
ದಿನಾಂಕ 30/07/09 ರಂದು ಬೆಳ್ತಂಗಡಿ ತಾಲೂಕಿನ ಕುದ್ಯಾಡಿ ಗ್ರಾಮದ ಪಿಲ್ಯದ ದಿನೇಶ ಪೂಜಾರಿ ಅಲಿಯಾಸ್ ಉದಯ (25 ವರ್ಷ) ಎಂಬಾತನಿಗೆ ಹಾಸನದ ಆಲೂರಿನ ರಶ್ಮಿ ಎಂಬವಳು ಫೋನ್ ಮಾಡಿ ಆಕೆಯ ಊರಾದ ಆಲೂರಿಗೆ ಬರಲು ಹೇಳಿದ್ದು, ಆ ಬಗ್ಗೆ ದಿನೇಶನು ಹಾಸನದ ಬಸ್ಸಿನಲ್ಲಿ ಹೋಗಿ ಆಲೂರಿನಲ್ಲಿ ಬಸ್ಸು ನಿಲ್ದಾಣದಲ್ಲಿ ಇಳಿದನು. ಆಗ ರಶ್ಮಿ ಮತ್ತು ಅವರೊಟ್ಟಿಗೆ ಮೂರ್ನಾಲ್ಕು ಮಂದಿ ಹುಡುಗರು ಇದ್ದು ಸುಮಾರು 9:30 ಗಂಟೆ ರಾತ್ರಿಯಲ್ಲಿ ದಾರಿಯಲ್ಲಿ ಹೋಗುವಾಗ ದಿನೇಶನಲ್ಲಿ 2,000/- ರೂಪಾಯಿ ಹಣವನ್ನು ಕೇಳಿರುತ್ತಾರೆ, ಅದಕ್ಕೆ ದಿನೇಶನು ನನ್ನಲ್ಲಿ ಹಣ ಇಲ್ಲ ಎಂದು ಹೇಳಿದಾಗ ಅವರು ಹಾಗಾದರೆ ನಿನ್ನಲ್ಲಿ ಹಣವಿಲ್ಲದಿದ್ದರೆ ನೀನು ಬಂದಿರುವುದು ಯಾಕೆ?, ಫೋನ್ ಮಾಡುತ್ತಿದ್ದುದು ಯಾಕೆ? ಎಂದು ಹೇಳಿ ಎಲ್ಲರೂ ಸೇರಿ ಯಾರೂ ಇಲ್ಲದ ಪ್ರದೇಶದಲ್ಲಿ ರಾಡಿನಿಂದ ಹಾಗೂ ಕೈಯಿಂದ ಹೊಡೆದು ಅಲ್ಲಿಯೇ ಬಿಟ್ಟು ಹೋದರು ಎಂದು ಆನಂತರ ಆ ದಿನ ಅಲ್ಲಿಯೇ ಬಿದ್ದುಕೊಂಡಿದ್ದು ಮರುದಿವಸ ನೋಡುವಾಗ ತನ್ನಲ್ಲಿ ಹಣ ಮತ್ತು ಮೊಬೈಲ್ ಕಾಣಿಸಲಿಲ್ಲ. ಶುಕ್ರವಾರದಂದು ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ಗೆ ಬಂದು ಬೇರೆ ಬೇರೆ ಅಂಗಡಿಯವರಿಂದ ಹಣ ಸಂಗ್ರಹಿಸಿ ಅಲ್ಲಿಂದ ಬೆಳಿಗ್ಗೆ 11:00 ಗಂಟೆಗೆ ಕೆ.ಎಸ್.ಆರ್.ಟಿ.ಸಿ ಬಸ್ಸಿನಿಂದ ಹೊರಟು ಧರ್ಮಸ್ಥಳಕ್ಕೆ ಬಂದು ಧರ್ಮಸ್ಥಳ ಛತ್ರದಲ್ಲಿ ಸ್ನಾನ ಮತ್ತು ಊಟ ಮಾಡಿ ಶನಿವಾರದಿಂದ ಸೋಮವಾರ ಮಧ್ಯಾಹ್ನದವರೆಗೆ ಅಂದರೆ ದಿನಾಂಕ: 03/08/09 ರವರೆಗೆ ಧರ್ಮಸ್ಥಳದಲ್ಲಿಯೇ ಉಳಿದು ನಂತರ ಮಧ್ಯಾಹ್ನ ಸುಮಾರು 3:00 ಗಂಟೆಗೆ ಬೆಳ್ತಂಗಡಿ ತಾಲೂಕು ಪಿಲ್ಯ ಪೋಸ್ಟ್ ಕುದ್ಯಾಡಿ ಗ್ರಾಮದ ತನ್ನ ಮನೆಯಾದ ಕಟ್ಯಾಲ್ಗೆ ಬಂದು ಹತ್ತಿರದ ತೋಡಿನ ಬದಿಯಲ್ಲಿ ಬಿದ್ದು ಬೊಬ್ಬೆ ಹಾಕುತ್ತಿದ್ದುದನ್ನು ಕೇಳಿ ನೆರೆಕರೆಯವರಾದ ಉಮೇಶ್ (35 ವರ್ಷ)ರವರು ಹೋಗಿ ನೋಡಿ ಏನಾಯಿತು ಎಂದು ಕೇಳಿದಾಗ ಹುಷಾರಿಲ್ಲ ಎಂದು ಹೇಳಿದ್ದು, ನಂತರ ಅವನನ್ನು ಮನೆಯವರು, ಸಂಬಂಧಿಕರು, ನೆರೆಕರೆಯವರು ಸೇರಿ ಆಟೋರಿಕ್ಷಾದಲ್ಲಿ ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದು ಅಲ್ಲಿನ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾಗ ನಡೆದ ಘಟನೆಯನ್ನು ತನಗೆ ಈ ರೀತಿಯಾಗಿ ವಿವರಿಸಿರುತ್ತಾರೆ ಎಂಬುದಾಗಿ ಪ್ರಕರಣದ ಪಿರ್ಯಾದಿ ಕಾರ್ಕಳ ತಾಲೂಕಿನ ಕೆವರ್ಾಶೆಯ ಕುದ್ರೊಟ್ಟುವಿನ ವಾಸಿ ಉದಯ ಕುಮಾರ್ (27 ವರ್ಷ) ತಂದೆ: ದಿವಂಗತ ಶೀನ ಪೂಜಾರಿರವರು ಘಟನೆಯ ಬಗ್ಗೆ ವಿವರಿಸಿರುತ್ತಾರೆ. ನಂತರ ದಿನೇಶ್ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕಳುಹಿಸುವಂತೆ ಸೂಚಿಸಿದ್ದು ಅಲ್ಲಿಂದ ಸುಮಾರು 5:00 ಗಂಟೆಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದು, ಕಾರ್ಕಳ ಸರಕಾರಿ ಆಸ್ಪತ್ರೆಯ ವೈದ್ಯರು ಪರಿಶೀಲಿಸಿದಾಗ ಈತನು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬುದಾಗಿ ದಿನಾಂಕ 06/8/09ರಂದು ಉದಯ ಪೂಜಾರಿಯವರು ನೀಡಿದ ಪಿರ್ಯಾದಿಯಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 106/09 ಕಲಂ 143, 147, 148, 302, 395 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ
ಉಡುಪಿ ತಾಲೂಕು ಅಲೆವೂರು ಗ್ರಾಮದ ಪ್ರಗತಿನಗರದಲ್ಲಿ ಕಾರಂತ ಕಲಾಗ್ರಾಮ ಎಂಬಲ್ಲಿ ಸಾಂಸ್ಕೃತಿಕ ಭವನ ಕಟ್ಟಡ ನಿಮರ್ಾಣವಾಗುತ್ತಿದ್ದು, ಆ ಕಟ್ಟಡದಲ್ಲಿ ಅಲೆವೂರು ರಾಂಪುರದ ಶೇಖರ (49 ವರ್ಷ)ರವರು ರಾತ್ರಿ ಸಮಯದಲ್ಲಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದು, ದಿನಾಂಕ 05/08/09 ರಂದು ಬೆಳಿಗ್ಗೆ 05:00 ಗಂಟೆಗೆ ಒಂದು ಗೂಡ್ಸ್ ವಾಹನದಲ್ಲಿ 3 ವ್ಯಕ್ತಿಗಳು ಬಂದು ಶೇಖರರವರಲ್ಲಿ ನಮಗೆ ಮರದ ದಾರಂದ ಕೊಡಿ ಎಂದು ಕೇಳಿದ್ದು ಅದಕ್ಕೆ ಅವರು ಅದು ಇಲಾಖೆಗೆ ಸಂಬಂಧಪಟ್ಟ ಕಟ್ಟಡಕ್ಕೆ ಉಪಯೋಗಿಸಲು ಇರುವ ಮರದ ದಾರಂಧ ಅದನ್ನು ಕೊಡಲಾಗುವುದಿಲ್ಲ ಎಂದು ಹೇಳಿದ್ದು, ಅಷ್ಟರಲ್ಲಿ ಇಬ್ಬರು ವ್ಯಕ್ತಿಗಳು ಅವರ ಎರಡೂ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ಅವರನ್ನು ಶೇಖರರವರು ದೂಡಿದ್ದು, ಆಗ ಇನ್ನೊಬ್ಬ ವ್ಯಕ್ತಿ ಹತ್ತಿರದಲ್ಲಿದ್ದ ಗಾಜಿನ ಚೂರನ್ನು ತೆಗೆದುಕೊಂಡು ಅವರ ಬಲ ಭುಜದ ಬಳಿ ಚುಚ್ಚಿ ರಕ್ತ ಗಾಯ ಮಾಡಿದ್ದು, ಅಷ್ಟರಲ್ಲಿ ಅವರು ಬೊಬ್ಬೆ ಹಾಕಿದಾಗ ಅಪರಿಚಿತರು ಬಂದ ವಾಹನದಲ್ಲಿ ಹೊರಟು ಹೋಗಿರುತ್ತಾರೆ. ವಾಹನದ ನಂಬರ್ ಪ್ಲೇಟಿಗೆ ಕಾಗದವನ್ನು ಅಂಟಿಸಿದ್ದು ನಂಬರ್ ಕಾಣಲಿಲ್ಲವಾಗಿ ಶೇಖರರವರು ತನ್ನ ದೂರಿನಲ್ಲಿ ಮಣಿಪಾಲ ಪೊಲೀಸರಿಗೆ ತಿಳಿಸಿರುತ್ತಾರೆ. ಅದರಂತೆ ಮಣಿಪಾಲ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 139/09 ಕಲಂ 341, 324 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
ದಿನಾಂಕ 05/08/09 ರಂದು 19:10 ಗಂಟೆಗೆ ಮೂಡಬೆಟ್ಟು ಗ್ರಾಮದ ರಾ.ಹೆ. 17 ರಲ್ಲಿ ಟ್ಯಾಂಕರ್ ನಂಬ್ರ ಕೆ.ಎ. 19/6707ನ್ನು ಅದರ ಚಾಲಕನು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಎದುರಿನಿಂದ ಬರುತ್ತಿದ್ದ ಕೆ.ಎ. 19 ಸಿ 3979ನೇ ನಂಬ್ರದ ಬಸ್ಗೆ ಢಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಪ್ರಯಾಣಿಕರು, ಚಾಲಕ ಹಾಗೂ ಟ್ಯಾಂಕರ್ನ ಚಾಲಕ ಹಾಗೂ ಕ್ಲೀನರ್ ರವರಿಗೆ ಸಾಧಾರಣ ಹಾಗೂ ತೀವ್ರ ಸ್ವರೂಪದ ಗಾಯಗಳಾಗಿರುತ್ತದೆ. ಮತ್ತು ಎರಡೂ ವಾಹನಗಳು ಜಖಂಗೊಂಡಿರುತ್ತವೆ. ಈ ಅಪಘಾತದ ಬಗ್ಗೆ ಬಂಟ್ವಾಳ ತಾಲೂಕಿನ ಬತ್ತನಾಡಿ ಹೌಸ್, ಮಣಿನಾಲ್ಕೂರು ವಾಸಿ ತಾರಾನಾಥ (30 ವರ್ಷ)ರವರು ದೂರು ನೀಡಿದ್ದು ಅವರ ದೂರಿನಂತೆ ಕಾಪು ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 154/09 ಕಲಂ 279, 337, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 05/08/2009 ರಂದು ಸಂಜೆ 4.30 ಗಂಟೆಗೆ ಜಿ.ಕಾಳಿಂಗ ಶೆಟ್ಟಿ (42 ವರ್ಷ), ತಂದೆ: ಭುಜಂಗ ಶೆಟ್ಟಿ, ವಾಸ:ಹಳ್ನಾಡು ಹೊಸಮನೆ, ಹಳ್ನಾಡು ಗ್ರಾಮ, ಕುಂದಾಪುರರವರು ಕಂಡ್ಳೂರು ಬಸ್ ನಿಲ್ದಾಣದಲ್ಲಿರುವ ಸಮಯ ಅವರ ಪರಿಚಯದ ಆನಂದ ಶೆಟ್ಟಿ ಎಂಬವರು ಕಂಡ್ಲೂರು ಬಸ್ ನಿಲ್ದಾಣದಿಂದ ಅಂಪಾರು ಕಡೆಗೆ ನಡೆದು ಕೊಂಡು ಹೋಗುತ್ತಿದ್ದು ಅಷ್ಟರಲ್ಲಿ ಕೆಎ 20 ಇ 8600 ನಂಬ್ರದ ಸ್ಕೂಟರನ್ನು ಅದರ ಸವಾರ ಕಂಡ್ಳೂರು ಕಡೆಯಿಂದ ಅಂಪಾರು ಕಡೆಗೆ ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸುತ್ತಾ ನಡೆದುಕೊಂಡು ಹೋಗುತ್ತಿದ್ದ ಆನಂದ ಶೆಟ್ಟಿಯವರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಅವರ ತಲೆಗೆ, ಮುಖಕ್ಕೆ ಮತ್ತು ಕಾಲಿಗೆ ಸಾದಾ ಸ್ವರೂಪದ ಗಾಯಗಳಾಗಿರುತ್ತದೆ. ಈ ಬಗ್ಗೆ ಜಿ.ಕಾಳಿಂಗ ಶೆಟ್ಟಿರವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 229/09 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
ದಿನಾಂಕ 05/08/2009 ರಂದು ಸಂಜೆ 4.30 ಗಂಟೆಗೆ ಜಿ.ಕಾಳಿಂಗ ಶೆಟ್ಟಿ (42 ವರ್ಷ), ತಂದೆ: ಭುಜಂಗ ಶೆಟ್ಟಿ, ವಾಸ:ಹಳ್ನಾಡು ಹೊಸಮನೆ, ಹಳ್ನಾಡು ಗ್ರಾಮ, ಕುಂದಾಪುರರವರು ಕಂಡ್ಳೂರು ಬಸ್ ನಿಲ್ದಾಣದಲ್ಲಿರುವ ಸಮಯ ಅವರ ಪರಿಚಯದ ಆನಂದ ಶೆಟ್ಟಿ ಎಂಬವರು ಕಂಡ್ಲೂರು ಬಸ್ ನಿಲ್ದಾಣದಿಂದ ಅಂಪಾರು ಕಡೆಗೆ ನಡೆದು ಕೊಂಡು ಹೋಗುತ್ತಿದ್ದು ಅಷ್ಟರಲ್ಲಿ ಕೆಎ 20 ಇ 8600 ನಂಬ್ರದ ಸ್ಕೂಟರನ್ನು ಅದರ ಸವಾರ ಕಂಡ್ಳೂರು ಕಡೆಯಿಂದ ಅಂಪಾರು ಕಡೆಗೆ ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸುತ್ತಾ ನಡೆದುಕೊಂಡು ಹೋಗುತ್ತಿದ್ದ ಆನಂದ ಶೆಟ್ಟಿಯವರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಅವರ ತಲೆಗೆ, ಮುಖಕ್ಕೆ ಮತ್ತು ಕಾಲಿಗೆ ಸಾದಾ ಸ್ವರೂಪದ ಗಾಯಗಳಾಗಿರುತ್ತದೆ. ಈ ಬಗ್ಗೆ ಜಿ.ಕಾಳಿಂಗ ಶೆಟ್ಟಿರವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 229/09 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment