ದಿನಾಂಕ:7/08/09 ರಂದು 18:30 ಗಂಟೆಗೆ ಉಡುಪಿ ತಾಲೂಕು ನಂಚಾರು ಗ್ರಾಮದ ಹೊಸ ಮನೆ ವಾಸಿ ಮಹಾಬಲ ಕುಂದರ್(52) ತಂದೆ: ಮೋನ ಹಾಂಡ ಠಾಣೆಗೆ ಬಂದು ನೀಡಿದ ಹಾಜರಾಗಿ ತನ್ನ ಮಗಳಾದ 20 ವರ್ಷ ಪ್ರಾಯದ ಯಶೋಧ ಎಂಬವರು ನಂಚಾರು ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದು ದಿನಾಂಕ 06/08/09 ರಂದು ಬೆಳಿಗ್ಗೆ 11:00 ಗಂಟೆಗೆ ಆಕೆಯು ತನಗೆ ಹುಶಾರಿಲ್ಲ ಎಂದು ಮನೆಯಲ್ಲಿ ತಿಳಿಸಿ ಅಂಗನವಾಡಿಗೆ ಹೋಗದೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆದು ಬರುವುದಾಗಿ ತಿಳಿಸಿ ಮನೆುಂದ ಹೋದವಳು, ಅದೇ ದಿನ ಸಂಜೆ ಸಂಬಂಧಿಕರಾದ ಜಯರಾಮ ಎಂಬವರ ಮೊಬೈಲ್ ಫೋನಿಗೆ ಕರೆಮಾಡಿ ನನ್ನನ್ನು ಹುಡಕಬೇಡಿ, ನಾನು ಆಕಸ್ಮಿಕ ಸಿಕ್ಕಿದರೆ ವಿಷ ಕುಡಿದು ಸಾಯುತ್ತೇನೆ ಎಂದು ಸಂದೇಶ ವನ್ನು ನೀಡಿದ್ದು ಯಶೋಧಳನ್ನು ನೆರೆಕರೆಯಲ್ಲಿ ಮತ್ತು ಸಂಬಂಧಿಕರ ಮನೆಯಲ್ಲಿ ಹುಡುಕಾಡಿದಲ್ಲಿ ಯಾವುದೇ ಮಾಹಿತಿ ದೊರೆತಿರುವುದಿಲ್ಲವಾಗಿ ಮಹಾಬಲ ಕುಂದರ್(52)ರವರು ದೂರು ನೀಡಿದ್ದು ಅವರ ದೂರಿನಂತೆ ಕೋಟಾ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 187/09 ಕಲಂ ಹುಡುಗಿ ಕಾಣೆಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.ಕಾಣೆಯಾದ ಹುಡುಗಿಂಯು ಸುಮಾರು 4 ಅಡಿ 5 ಇಂಚು ಎತ್ತರ ಇದ್ದು ಎಣ್ಣೆಕಪ್ಪು ಮೈಬಣ್ಣ, ಸಪೂರ ಶರೀರ ಹೊಂದಿದ್ದು ಕೆಂಪು ಚುಕ್ಕೆ ಹಾಗೂ ಡಿಸೈನ್ ಹೊಂದಿದ ಚೂಡಿದಾರ ಹಳದಿ ಬಣ್ಣದ ವೇಲ್ ಧರಿಸಿರುತ್ತಾಳೆ,ಕನ್ನಡ ಭಾಷೆ ಬಲ್ಲವಳಾಗಿರುತ್ತಾಳೆ. ಕಾಣೆಯಾದ ಹುಡುಗಿ ಪತ್ತೆಯಾದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರು ಬ್ರಹ್ಮಾವರ ವೃತ್ತ (0820 - 2561966), ಅಥವಾ ಪೊಲೀಸ್ ಉಪ ನಿರೀಕ್ಷಕರು ಕೋಟಾ ಠಾಣೆ (0820- 2364155) ಅಥವಾ ಪೊಲೀಸ್ ಕಂಟ್ರೋಲ್ ರೂಂ, ಉಡುಪಿ (0820 - 2526444)ರವರಿಗೆ ತಿಳಿಸಲು ಕೋರಲಾಗಿದೆ.
ಹುಡುಗ ಕಾಣೆ
ದಿನಾಂಕ. 06/08/2009 ರಂದು ಬೆಳಿಗೆ ಮಣಿಪುರ ಗ್ರಾಮದ ನಿವಾಸಿ ಕರೀಂ ಹಾಜಿ ಎಂಬುವರ ಮಗನಾದ ಆಶ್ರಫ್ (22) ಎಂಬವರು ಎಂದಿನಂತೆ ಕಂಪ್ಯೂಟರ್ ಕಲಿಯಲೆಂದು ಮನೆುಂದ ಹೊರಟವನು ಈವರಗೆ ಮನೆಗೆ ಬಂದಿರುವುದಿಲ್ಲ ಹಾಗೂ ಎಲ್ಲಾ ಕಡೆಗಳಲ್ಲಿ ಸಂಬಂದಿಕರ ಮನೆಗಳಲ್ಲಿ ಹುಡುಕಿದರೂ ಸಿಗದೇ ಕಾಣೆಯಾಗಿರುತ್ತಾರೆ ಈ ಬಗ್ಗೆ ಕರೀಂ ಹಾಜಿ ತಂದೆ: ಹಾಜಿ ಬ್ಯಾರಿ ವಾಸ: ಮಣಿಪುರ ಗ್ರಾಮ, ಉಡುಪಿ ತಾಲೂಕು ರವರು ದೂರು ನೀಡಿದ್ದು ಅವರ ದೂರಿನಂತೆ ಕಾಪು ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 156/09 ಕಲಂ ಹುಡುಗ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲರುತ್ತದೆ.ಕಾಣೆಯಾದ ಹುಡುಗನು ಸುಮಾರು 5 ಅಡಿ 7 ಇಂಚು ಎತ್ತರ ಇದ್ದು ಗೋಧಿ ಮೈಬಣ್ಣ, ಸಪೂರ ಶರೀರ ಹೊಂದಿದ್ದು ,ಕನ್ನಡ,ಹಿಂದಿ,ಉದರ್ು ಮತ್ತು ತುಳು ಭಾಷೆ ಬಲ್ಲವಳಾಗಿರುತ್ತಾಳೆ. ಕಾಣೆಯಾದ ಹುಡುಗ ಪತ್ತೆಯಾದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರು ಕಾಪು ವೃತ್ತ (0820 - 25551033), ಅಥವಾ ಪೊಲೀಸ್ ಉಪ ನಿರೀಕ್ಷಕರು ಕಾಪು ಠಾಣೆ (0820- 2552133) ಅಥವಾ ಪೊಲೀಸ್ ಕಂಟ್ರೋಲ್ ರೂಂ, ಉಡುಪಿ (0820 - 2526444)ರವರಿಗೆ ತಿಳಿಸಲು ಕೋರಲಾಗಿದೆ.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment