Thursday, August 6, 2009

ಕೆರೆಗೆ ಬಿದ್ದು ವಿದ್ಯಾಥರ್ಿ ಸಾವು

 
ಕಾಸರಗೋಡು: ಪ್ಲಸ್ ವಿದ್ಯಾಥರ್ಿ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ಉದುಮ ಸಮೀಪದ ಕೊಳತ್ತುಂಗಾಲ್ ಎಂಬಲ್ಲಿ ಗುರುವಾರ ಪತ್ತೆಯಾಗಿದೆ.
ಕೊಳತ್ತುಂಗಾಲ್ ನಿವಾಸಿ ಅಬ್ದುಲ್ ರಹಿಮಾನ್ ಪುತ್ರ ಮುಹಮ್ಮದ್ ಷರೀಫ್(16) ಎಂದು ಗುರುತಿಸಲಾಗಿದೆ. ಈತ ಉದುಮ ಸಕರ್ಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾಥರ್ಿಯಾಗಿದ್ದನು.
ಬುಧವಾರ ಸಂಜೆಯ ಬಳಿಕ ಷರೀಫ್ ನಾಪತ್ತೆಯಾಗಿದ್ದನು. ಆದರೆ ಗುರುವಾರ ನಡೆಸಿದ ಹುಡುಕಾಟದಲ್ಲಿ ಉದುಮದ ಜುಮಾ ಮಸೀದಿಯ ಕೆರೆಯಲ್ಲಿ ಶವ ಪತ್ತೆಯಾಗಿದೆ. ಸಾವಿನ ಬಗ್ಗೆ ಬೇಕಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
 
 
ಕುಸಿದು ಬಿದ್ದು ಸಾವು
 
ಕಾಸರಗೋಡು: ಅಂಚೆ ಕಚೇರಿ ನೌಕರ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ನಗರದಲ್ಲಿ ನಡೆದಿದೆ.
ಮುಳಿಯಾರು ಕೋಟೂರು ನಿವಾಸಿ ಗಂಗಾಧರ(59) ಸಾವನ್ನಪ್ಪಿದವರು. ಕುಸಿದು ಬಿದ್ದ ಅವರನ್ನು ನಗರದ ಜನರಲ್ ಆಸ್ಪತ್ರೆಯಲ್ಲಿ ಸೇರಿಸಲಾಯಿತಾದರೂ ಫಲಕಾರಿಯಾಗಿಲ್ಲ.
ಪತ್ನಿ ಕಾತ್ಯರ್ಾಯಿನಿ ಮತ್ತು ಮೂವರು ಮಕ್ಕಳಿದ್ದಾರೆ.

 


ಹಳದಿ ಜ್ವರ ಬಾಧಿಸಿ ಯುವತಿ ಸಾವು
 
ಕಾಸರಗೋಡು: ಹಳದಿ ಜ್ವರ ಬಾಧಿಸಿ ಯುವತಿ ಸಾವನ್ನಪ್ಪಿದ ಘಟನೆ ಚಟ್ಟಂಚಾಲ್ ಸಮೀಪದ ಬಂಡಿಚ್ಚಾಲ್ನಲ್ಲಿ ಬುಧವಾರ ಸಂಜೆ ನಡೆದಿದೆ.
ಬಂಡಿಚ್ಚಾಲ್ನ ನಿವಾಸಿ ಮುಹಮ್ಮದ್ ಕುಞ್ಞಿ ಪತ್ನಿ ಷಾಹಿನಾ(25) ಎಂದು ಗುರುತಿಸಲಾಗಿದೆ.

 
 
ಡೆಸ್ಕ್ ಬಿದ್ದು ತುಂಡಾದ ವಿದ್ಯಾಥರ್ಿಯ ಬೆರಳು
 
ಕಾಸರಗೋಡು: ತರಗತಿಯೊಳಗೆ ಆಟವಾಡುತ್ತಿದ್ದ ವೇಳೆ ಡೆಸ್ಕ್ ಮಗುಚಿ ಬಿದ್ದು 3ನೇ ತರಗತಿ ವಿದ್ಯಾಥರ್ಿಯ ಬೆರಳು ತುಂಡಾದ ಘಟನೆ ಗುರುವಾರ ಮಧ್ಯಾಹ್ನ ಇಲ್ಲಿನ ಆಲಂಪಾಡಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದಿದೆ.
ಸ್ಥಳೀಯ ಅಬ್ದುಲ್ಲ ಎಂಬವರ ಪುತ್ರ ಬಿ.ಎ.ಮುಹಮ್ಮದ್ ಸಿರಾಜುದ್ದೀನ್ ಎಂಬಾತನೇ ಗಾಯಾಳು. ಈತನನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

 
 
ಕಾರಿನಲ್ಲಿ ಮಗುವನ್ನು ಕುಳ್ಳಿರಿಸಿ ಹೋದ `ಪಿತಾ'ಮಹ
 
ಕಾಸರಗೋಡು: ಅಪ್ಪನೋರ್ವ ನಗರದಲ್ಲಿ ತನ್ನ 2 ವರ್ಷದ ಮಗನನ್ನು ಕಾರಿನೊಳಗೆ ಕುಳ್ಳಿರಿಸಿ ಹೋಗಿ ಎಡವಟ್ಟಾದ ಘಟನೆ ಗುರುವಾರ ಸಂಜೆ ನಡೆದಿದೆ.
ನಗರದ ಹಣಕಾಸು ಸಂಸ್ಥೆಯ ಕಚೇರಿಯಲ್ಲಿ ಹಣ ಪಾವತಿಸಲು ಹೋದ ಅಬ್ದುಲ್ ಸತ್ತಾರ್ ಎಂಬ `ಪಿತಾಮಹ' ಹೋಗಿ ಹೊತ್ತು ಮೀರಿದರೂ ಬರದಿದ್ದಾಗ ಮಗು ಕಾರಿನ ಬಾಗಿಲು ತೆಗೆದು ಹೊರಗೆ ಬಂದು ಕಟ್ಟಡದ ಕೋಣೆ ಕೋಣೆಗಳಿಗೆ ನುಗ್ಗಿ ಅಳುತ್ತಲೇ ಅಲೆದಾಡುತ್ತಿತ್ತು. ಇದನ್ನು ಕಂಡ ವ್ಯಾಪಾರಿಗಳು ಪೊಲೀಸರಿಗೆ ವಿಷಯ ತಿಳಿಸಿದರು. ಇಷ್ಟಾದರೂ ಅಪ್ಪನಿಗೆ ಮಗುವಿನ ಒಂಟಿತನ ಕಾಡಲಿಲ್ಲ.
ಆತ ಇನ್ನೊಂದು ಕಚೇರಿಗೆ ಹೋಗಿ ಕಾರಿನ ಬಳಿಗೆ ಬರುತ್ತಿರುವಷ್ಟರಲ್ಲಿ  ನಗರ ತುಂಬಾ ಜನ ಸೇರಿತ್ತು. ವಿಷಯ ತಿಳಿದ ಪೊಲೀಸರು ಪಿತಾಮಹನಿಗೆ ಸಾರ್ವಜನಿಕರ ಮುಂದೆ ಮಂಗಳಾರತಿ ಮಾಡಿದ ಬಳಿಕ ಮಗುವನ್ನು ಆತನ ವಶಕ್ಕೆ ಒಪ್ಪಿಸಿದರು.

 


ಸವಾರನ ಸಾವು: ಬಸ್ಸಿಗೆ ಹಾನಿ-ಸಂಚಾರ ಸ್ಥಗಿತ
 
ಮಂಜೇಶ್ವರ: ಬಸ್ಸನ್ನು ಹಾನಿಗೊಳಿಸಿದ್ದನ್ನು ಖಂಡಿಸಿ ಗುರುವಾರ ಖಾಸಗಿ ಎಕ್ಸ್ಪ್ರೆಸ್ ಬಸ್ಸುಗಳು ಸಂಚಾರ ಸ್ಥಗಿತಗೊಳಿಸಿದ ಘಟನೆ ನಡೆದಿದೆ.
ಇಲ್ಲಿಗೆ ಸಮೀಪದ ಕುಂಜತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಜೆ ಖಾಸಗಿ ಎಕ್ಸ್ಪ್ರೆಸ್ ಬಸ್ಸು ಬೈಕ್ಗೆ ಡಿಕ್ಕಿ ಹೊಡೆದು ಸವಾರ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿ ಸಿಟ್ಟಿಗೆದ್ದ ಸ್ಥಳೀಯರು ಬಸ್ಸನ್ನು ಹಾನಿಗೊಳಿಸಿದ್ದರು.
ಘಟನೆಯಲ್ಲಿ ಕುಂಜತ್ತೂರು ತೂಮಿನಾಡು ನಿವಾಸಿ ಫರಿಯಾಸ್(21) ಸಾವನ್ನಪ್ಪಿದ್ದು, ಆತನ ಗೆಳೆಯ ಜಾಸಿಂ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.


 



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

No comments:

Post a Comment