ಮಂಗಳೂರು: ಇದೇ 5ರಂದು 0230 ಗಂಟೆಗೆ ಮಂಗಳೂರು ಗ್ರಾಮಾಂತರ ಠಾಣಾ ಸರಹದ್ದಿನ ಮಂಗಳೂರು ತಾಲೂಕು ಅಡ್ಯಾರ್ ಗ್ರಾಮದ ಅಡ್ಯಾರ್ಕಟ್ಟೆ ಎಂಬಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಹಾಗೂ ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕರವರ ವಿಶೇಷ ಪತ್ತೆ ದಳದ ಉಪನಿರೀಕ್ಷಕರಾದ ಪ್ರಕಾಶ್.ಕೆ ಮತ್ತು ಸಿಬ್ಬಂದಿಯವರು ಖಚಿತ ವರ್ತಮಾನದ ಮೇರೆಗೆ ವಾಹನ ತಪಾಸಣೆ ನಡೆಸುವಾಗ್ಯೆ ಏಂ-19-ಘ-244 ಬಜಾಜ್ ಪಲ್ಸರ್ ವಾಹನದಲ್ಲಿ ಬಂದ ಇಬ್ಬರು ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೆ ದುಷ್ಕ್ರತ್ಯದ ಉದ್ದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 1 ಪಿಸ್ತೂಲ್ ಹಾಗೂ 5 ಸಜೀವ ಗುಂಡುಗಳನ್ನು ಪತ್ತೆ ಹಚ್ಚಿ ಆರೋಪಿಗಳಾದ ಸುಧಾಕರ ಆಚಾರಿ (32) ವಾಸ; ಕೊಳಬೈಲು ಮನೆ, ಅಡ್ಯಾರ್ ಗ್ರಾಮ, ಮಂಗಳೂರು, ಹರೀಶ್ ರಾವ್ (28) ವಾಸ; ರಾಮನಗರ ಮನೆ, ಬಜಾಲ್ ಪೋಸ್ಟ್ ಮತ್ತು ಗ್ರಾಮ, ಮಂಗಳೂರು ಇವರನ್ನು ದಸ್ತಗಿರಿ ಮಾಡಿದ್ದು ಇದರಲ್ಲಿ ಹರೀಶ್ರಾವ್ ಎಂಬಾತನು ದರೋಡೆ ಪ್ರಕರಣದ ಆರೋಪಿಯಾಗಿರುತ್ತಾನೆ. ಇವರಿಬ್ಬರ ಮೇಲೆ ಹಲವಾರು ಪ್ರಕರಣಗಳು ದಾಖಲಾಗಿರುತ್ತದೆ. ಅಂತೆಯೇ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ಈ ಪತ್ತೆ ಕಾರ್ಯದಲ್ಲಿ ಪ್ರೋಬೆಷನರಿ ಪಿ.ಎಸ್.ಐ. ಸುನೀಲ್ ಮತ್ತು ದ.ಕ ಜಿಲ್ಲಾ ವಿಶೇಷ ಪತ್ತೆ ದಳದ ಸಿಬ್ಬಂದಿಯವರಾದ ಅನಂದ, ರಾಮ ಪೂಜಾರಿ, ಚಂದ್ರಶೇಖರ, ಶೀನಪ್ಪ, ಗಿರೀಶ್ ಸುವರ್ಣ, ಸುನೀಲ್ಕುಮಾರ್, ಶಾಜು ಕೆ ನಾಯರ್, ರಾಜೇಂದ್ರ ಪ್ರಸಾದ್, ಡೇವಿಡ್ ಡಿ ಸೋಜಾ, ಮಹಮ್ಮದ್ ಇಕ್ಬಾಲ್, ಶಿವ ನಾಯ್ಕ್, ಜಾಜರ್್ ಕೆ.ಡಿ ಇವರುಗಳು ಸಹಕರಿಸಿರುತ್ತಾರೆ.
--
www.kasaragodvartha.com the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment