ಕಾಸರಗೋಡು: ತುಳು, ಕೊಡವ ರಾಜ್ಯಗಳ ಬೇಡಿಕೆ ಅಧಿಕಾರ ದಾಹದಿಂದ ಕೂಡಿದ ರಾಜಕೀಯ ಎಂದು ಕೃಷ್ಣ ಶೆಟ್ಟಿ ಮಂಗಳೂರು ಭಾನುವಾರ ಇಲ್ಲಿ ವಿವರಿಸಿದರು.
ಕಾಸರಗೋಡಿನ ಲಲಿತಕಲಾ ಸದನದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಹೃದಯವಾಹಿನಿ ಪತ್ರಿಕೆಯ ಸಹಯೋಗದಲ್ಲಿ ಆಯೋಜಿಸಿದ 6ನೇ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಭಾನುವಾರ ಆಯೋಜಿಸಿದ ಹೊನಾಡು-ಗಡಿನಾಡು ಕನ್ನಡಿಗ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾಸರಗೋಡು ಗಡಿನಾಡ ಕನ್ನಡಿಗರಿಗೆ ಕೇರಳವೇ ಸುರಕ್ಷಿತ ಎಂದವರು ಹೇಳಿದರು.
ಭಾಷೆಗಿಂದ ಬದುಕು ಮುಖ್ಯವಾಗಿದೆ. ಈ ಗೊಂದಲ, ಅನಿಶ್ಚಿತತೆ, ಅಭದ್ರತೆಯಿಂದ ಕನ್ನಡ ಮೂಲೆಗುಂಪಾಗುತ್ತಿದೆ. ಇಚ್ಚಾಶಕ್ತಿ, ಕ್ರಾಂತಿಕಾರಿ ಬದಲಾವಣೆಯಿಂದ ಮಾತ್ರ ಕನ್ನಡ ಉಳಿಸಲು ಸಾಧ್ಯ ಎಂದು ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಸದಾನಂದ ಎಂ.ಕತಾರ್ ವಿಶ್ಲೇಷಿಸಿದರು.
ಶಿವಪ್ಪ ನಾಯಕನ ಕೆಚ್ಚು:
ಕಾಸರಗೋಡಿನ ಕನ್ನಡದ ದುಸ್ಥಿತಿಗೆ ಬದಲಾದ ಭಾಷಿಕ ಸಂದರ್ಭ ಹಾಗೂ ಸ್ಥಾನಮಾನ ಕಾರಣ. ಮಲೆಯಾಳದ ಮಣ್ಣಿಗೆ ಕಾಸರಗೋಡು ಸೇರಿದ ಬಳಿಕ ಕನ್ನಡದ ಪ್ರಾಬಲ್ಯ ಕುಸಿಯುತ್ತಾ ಬಂತು. ಶಿಕ್ಷಣ ಮತ್ತು ಉದ್ಯೋಗ ನಿಮಿತ್ತ ಇಲ್ಲಿನ ಕನ್ನಡಿಗರು ವಲಸೆ ಹೋಗುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಶಿವಪ್ಪ ನಾಯಕನ ಕೆಚ್ಚು ಇದ್ದರೆ ಮಾತ್ರ ಇಲ್ಲಿ ಕನ್ನಡ ಉಳಿಸಲು ಸಾಧ್ಯ ಎಂದು ಡಾ.ಕಮಲಾಕ್ಷ ಹೇಳಿದರು.
ಆಯಿಷಾ ಎಂ.ಪೆರ್ಲ ಮಾತನಾಡಿ, ಕನ್ನಡ ಸಮಸ್ಯೆಯ ಸುಳಿಯಲ್ಲಿದೆ. ಇದರಿಂದ ಕಾಸರಗೋಡಿನ ಕನ್ನಡಿಗರ ಸ್ಥಿತಿ ಶೋಚನೀಯವಾಗಿದೆ ಎಂದರು. ದಾಕ್ಷಿಣ್ಯವೇ ಕನ್ನಡಿಗರ ದೌರ್ಬಲ್ಯವಾಗಿದೆ ಎಂದು ಸಾಣೂರು ಸತೀಶ್ ಸಾಲಿಯಾನ್ ಅಭಿಪ್ರಾಯಪಟ್ಟರು. ಕನ್ನಡಕ್ಕೆ ವ್ಯಕ್ತಿಗತ ಕೊಡುಗೆ ದೊಡ್ಡದು. ಇಲ್ಲಿ ತುಳುವರು ಅವಗಣನೆಗೆ ಒಳಗಾಗಿದ್ದಾರೆ ಎಂದು ರಾಜೇಶ್ ಆಳ್ವ ಬದಿಯಡ್ಕ ಹೇಳಿದರು.
ರಾಜಕಾರಣಿಗಳು ಭಾಷೆ-ನೆಲ-ನೀರಿನ ವಿಷಯದಲ್ಲಿ ಜಗಳವಾಡುತ್ತಿದ್ದಾರೆ. ರಾಜಕೀಯ ಪಕ್ಷಗಳು ಮನುಷ್ಯ ಸಂಬಂಧವನ್ನು ಒಡೆಯುತ್ತಿದೆ ಎಂದು ಶಿವಾನಂದ ಸೋಮಪ್ಪ ಬೆಂಗಳೂರು ತಿಳಿಸಿದರು.
ಎ.ಶ್ರೀನಾಥ್ ಕಾಸರಗೋಡು ಸ್ವಾಗತಿಸಿ, ಬಿ.ಬಾಲಕೃಷ್ಣ ಅಗ್ಗಿತ್ತಾಯ ವಂದಿಸಿದರು. ಶ್ರೀನಿವಾಸ ಆಳ್ವ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ನಡೆದ ಹನಿ-ಹಾಸ್ಯ ಗೋಷ್ಠಿಯಲ್ಲಿ ರಾಜಗೋಪಾಲ್ ಕೋಲಾರ, ಸುಪ್ರಭಾ ಬೆಂಗಳೂರು ಮತ್ತು ಭಾಸ್ಕರ ಹೆಬ್ಬಾರ್ ಭಾಗವಹಿಸಿದರು.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment