ಮಂಜೇಶ್ವರ: ಇಲ್ಲಿನ ಎಸ್.ಎ.ಟಿ. ಪ್ರೌಢಶಾಲೆಯ ಪರಿಸರ ಸಂಘ ಮತ್ತು ಮಂಜೇಶ್ವರದ ಗೌಡ ಸಾರಸ್ವತ ಬ್ರಾಹ್ಮಣ ಸಂಘದ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ವನಮಹೋತ್ಸವ ಜರುಗಿತು.
ಪಂಚಾಯ್ತಿ ಉಪಾಧ್ಯಕ್ಷ ಎಂ.ಜೆ.ಕಿಣಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮೇನೇಜರ್ ಯೋಗೀಶ್ ಡಿ.ಪ್ರಭು ವಿದ್ಯಾಥರ್ಿಗಳಿಗೆ ಸಸಿಗಳನ್ನು ವಿತರಿಸಿ ವನಮಹೋತ್ಸವವನ್ನು ಉದ್ಘಾಟಿಸಿದರು. ಸಸ್ಯ ಶಾಸ್ತ್ರಜ್ಞ ದಿನೇಶ್ ನಾಯಕ್ ಮಂಜೇಶ್ವರ ಸಸ್ಯ ಸಂಕುಲದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.
ಪಂಚಾಯ್ತಿ ಸದಸ್ಯೆ ಸುಮತಿ ಬಾ ಟೀಚರ್, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಯತೀಶ್ ಕುಮಾರ್, ಮುಖ್ಯೋಪಾಧ್ಯಾಯ ಉದಯ ಶಂಕರ ಭಟ್, ಕರೆಸ್ಪಾಂಡೆಂಟ್ ನಿತಿನ್ ಚಂದ್ರ ಪೈ ಹಾಜರಿದ್ದರು.
ಸಂಘದ ಸಂಚಾಲಕ ಕಿರಣ್ ಕುಮಾರ್ ಪ್ರಾಸ್ತಾವಿಕ ಮಾತು ಆಡಿದರು. ಆಡಳಿತ ಮಂಡಳಿಯ ಸಲಹಾ ಸಮಿತಿ ಸದಸ್ಯೆ ಲಿಲ್ಲಿ ಬಾ ಸ್ವಾಗತಿಸಿ, ಶಿಕ್ಷಕ ಸಂಘದ ಕಾರ್ಯದಶರ್ಿ ಮುರಳೀಕೃಷ್ಣ ವಂದಿಸಿದರು.
ತಾಲೂಕು ಅಭಿವೃದ್ಧಿ ಸಮಿತಿ ಸಭೆ ಆಗ್ರಹ
ಕೃಷಿಕರ ಸಾಲ ಮನ್ನಾ
ಕಾಸರಗೋಡು: ಜಿಲ್ಲೆಗೆ ಪ್ರತ್ಯೇಕ ಪ್ಯಾಕೇಜ್ ತಯಾರಿಸಿ ಸಂಕಷ್ಟ ಎದುರಿಸುತ್ತಿರುವ ಅಡಿಕೆ ಮತ್ತು ತೆಂಗು ಕೃಷಿಕರ ಸಾಲವನ್ನು ಮನ್ನಾ ಮಾಡುವಂತೆ ತಾಲೂಕು ಅಭಿವೃದ್ಧಿ ಸಮಿತಿ ಸಭೆ ಸಕರ್ಾರವನ್ನು ಆಗ್ರಹಿಸಿದೆ.
ಕನರ್ಾಟಕದಿಂದ ಮರಳು ತರಲು ಸಕರ್ಾರ ಅನುಮತಿ ನೀಡಬೇಕು ಎಂದೂ ಸಭೆ ಆಗ್ರಹಿಸಿದೆ. ಸಮಗ್ರ ವಿದ್ಯುದ್ದೀಕರಣ ಯೋಜನೆ ಜಾರಿಗೊಳಿಸಲು ವಿದ್ಯುತ್ ಸಂಪರ್ಕ ಸಿಗದ ಪ್ರದೇಶಗಳನ್ನು ಗುರುತಿಸಿ ಯೋಜನೆ ಕಾರ್ಯಗತಗೊಳಿಸಲು ಅಧಿಕಾರಿಗಳಿಗೆ ಸಭೆ ಸೂಚನೆ ನೀಡಿತು. ಜಿಲ್ಲೆಯಲ್ಲಿ ರೇಷನ್ ಕಾಡರ್ುಗಳನ್ನು ಶೀಘ್ರದಲ್ಲಿಯೇ ವಿತರಿಸಲಾಗುವುದು ಎಂದು ಸಿವಿಲ್ ಸಪ್ಲೈಸ್ ಅಧಿಕಾರಿಗಳು ಸಭೆಯಲ್ಲಿ ಸ್ಪಷ್ಟೀಕರಣ ನೀಡಿದರು.
46,000 ಕಾಡರ್ುಗಳು ಈಗಾಗಲೇ ವಿತರಿಸಲಾಗಿದೆ. 1,07,000 ಕಾಡರ್ುಗಳ ಅಗತ್ಯವಿದೆ.
ಶಾಸಕ ಸಿ.ಟಿ.ಅಹಮ್ಮದಾಲಿ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯತು ಅಧ್ಯಕ್ಷ ಅಪ್ಪ, ಜಿಲ್ಲಾ ಪಂಚಾಯತು ಸದಸ್ಯರಾದ ಫರೀದಾ ಸಕೀರ್, ಮಹಮ್ಮದ್ ಮುಬಾರಕ್, ಪ್ರಭಾಕರ ಚೌಟ ಹಾಜರಿದ್ದರು.
ಉಚಿತ ಹೃದ್ರೋಗ ಮತ್ತು ಮಧುಮೇಹ ತಪಾಸಣಾ ಶಿಬಿರ
ಕಾಸರಗೋಡು: ಉಪ್ಪಳ ಸಮೀಪದ ಕೈಕಂಬದ ಸೊಸೈಟಿ ಹಾಸ್ಪಿಟಲ್ನಲ್ಲಿ ಮಂಗಳೂರಿನ ಓಮೆಗಾ ಆಸ್ಪತ್ರೆಯ ಸಹಕಾರದಲ್ಲಿ ಇದೇ 16ರಂದು ಉಚಿತ ಹೃದ್ರೋಗ ಮತ್ತು ಮಧುಮೇಹ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.
ಅಂದು ಬೆಳಗ್ಗೆ 8.30ರಿಂದ ಮಧ್ಯಾಹ್ನ 2ರ ವರೆಗೆ ಶಿಬಿರ ನಡೆಯಲಿದೆ. ಡಾ.ಕೆ.ಮುಕುಂದ್, ಡಾ.ಎ.ಜಿ.ಜಯಕೃಷ್ಣನ್, ಡಾ.ಎ.ಕೆ.ಖಾಸಿಂ, ಡಾ.ಎಚ್.ಪ್ರಭಾಕರ್, ಡಾ.ಕೀತರ್ಿ ನಾಯಕ್, ಎಸ್.ಎಲ್.ಭಾರದ್ವಾಜ್ ಭಾಗವಹಿಸುವರು.
--
http://www.kasaragodvartha.com/
the first local online news paper in Malayalam.
brings latest news in Malayalam & English links our home land to the world.
:::: the signature of Kasaragod ::::
No comments:
Post a Comment