ಕಾಸರಗೋಡು: ಕುಂಬಳೆ ಉಪ ಜಿಲ್ಲಾ ವಿದ್ಯಾಧಿಕಾರಿ ಸಹಿತ ತೆರವಾಗಿರುವ ಎಲ್ಲಾ ಮುಖ್ಯೋಪಾಧ್ಯಾಯರ ಮತ್ತು ಅಧ್ಯಾಪಕರ ಹುದ್ದೆಗಳನ್ನು ಶೀಘ್ರದಲ್ಲಿಯೇ ಭತರ್ಿಗೊಳಿಸುವಂತೆ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಸಮಿತಿ ಸಭೆ ಆಗ್ರಹಿಸಿದೆ.
ವಿತರಣೆ ಮಾಡಲು ಉಳಿದಿರುವ ಪಠ್ಯಪುಸ್ತಕ ಮತ್ತು ಅಧ್ಯಾಪಕರ ಕೈಪಿಡಿಗಳನ್ನು ಲಭ್ಯಗೊಳಿಸಬೇಕು ಎಂದು ಒತ್ತಾಯಿಸಿದೆ. ಆಗಸ್ಟ್ ತಿಂಗಳಲ್ಲಿ ನಡೆಯಲಿರುವ ಕಾಸರಗೋಡು, ಬೇಕಲ, ಮಂಜೇಶ್ವರ ಉಪ ಜಿಲ್ಲಾ ಸಮ್ಮೇಳನಗಳನ್ನು ಯಶಸ್ವಿಗೊಳಿಸುವಂತೆ ಸಂಘ ಅಧ್ಯಾಪಕರಲ್ಲಿ ಮನವಿ ಮಾಡಿದೆ.
ಕಾಸರಗೋಡು ಸಕರ್ಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇತ್ತೀಚೆಗೆ ನಡೆದ ಸಭೆಯನ್ನು ಜಿಲ್ಲಾ ವಿದ್ಯಾಧಿಕಾರಿ ಎನ್.ಕೆ.ಮೋಹನ್ದಾಸ್ ಉದ್ಘಾಟಿಸಿದರು.
ಕೇಂದ್ರ ಸಮಿತಿ ಅಧ್ಯಕ್ಷ ಟಿ.ಡಿ.ಸದಾಶಿವ ರಾವ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಕೆ.ಸತ್ಯನಾರಾಯಣ, ಉಪಾಧ್ಯಕ್ಷೆ ಎಂ.ಶಶಿಕಲಾ, ಶಶಿಕಲಾ, ಸಂಘಟನಾ ಕಾರ್ಯದಶರ್ಿ ಎಂ.ವಿ.ಮಹಾಲಿಂಗೇಶ್ವರ ಭಟ್, ಕೋಶಾಧಿಕಾರಿ ಡಿ.ಮಹಾಲಿಂಗೇಶ್ವರ ರಾಜ್, ಕುಂಬಳೆ ಉಪಜಿಲ್ಲಾ ಕಾರ್ಯದಶರ್ಿ ಕೆ.ಸುಬ್ರಹ್ಮಣ್ಯ ಭಟ್, ಕಾಸರಗೋಡು ಉಪಜಿಲ್ಲಾ ಕಾರ್ಯದಶರ್ಿ ರಾಜೇಶ್ವರ ಸಿ.ಎಚ್. ಹಾಜರಿದ್ದರು.
ಪ್ರಧಾನ ಕಾರ್ಯದಶರ್ಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷೆ ಶ್ರೀಕುಮಾರಿ ಆನೆಕಲ್ಲು ವಂದಿಸಿದರು.
ಅಧ್ಯಾಪಕರ ಸಂಘ ನಿಯೋಗದಿಂದ ಎಸ್.ಸಿ.ಇ.ಆರ್.ಟಿ. ನಿದರ್ೇಶಕರ ಭೇಟಿ
ಪಠ್ಯಪುಸ್ತಕ ರಚನಾ ಸಮಿತಿಗೆ ಅನುಭವಿ ಅಧ್ಯಾಪಕರನ್ನು ಆಯ್ಕೆ ಮಾಡಬೇಕು, ಈ ಪಟ್ಟಿಯನ್ನು ವಿದ್ಯಾಧಿಕಾರಿಗಳ ಸಹಕಾರದಲ್ಲಿ ಸಾಕಷ್ಟು ಮುಂಚಿತವಾಗಿ ಸಿದ್ಧಪಡಿಸಬೇಕು ಎಂದು ತಿರುವನಂತಪುರಕ್ಕೆ ತೆರಳಿದ ಸಂಘದ ನಿಯೋಗ ಒತ್ತಾಯಿಸಿದೆ.
ಪ್ರಧಾನ ಕಾರ್ಯದಶರ್ಿ ವಿಶಾಲಾಕ್ಷ ಪುತ್ರಕಳ, ಎಂ.ನಾರಾಯಣ ಭಟ್ ಬದಿಯಡ್ಕ, ಎಂ.ಚಿದಾನಂದ ಭಟ್ ಶೇಣಿ, ಕೆ.ರಾಜಗೋಪಾಲ ಪಳ್ಳಿಕ್ಕೆರೆ, ಪ್ರೀತಂ ಎ.ಕೆ. ಬೋವಿಕ್ಕಾನ ನಿಯೋಗದಲ್ಲಿದ್ದರು.
ಸಶಸ್ತ್ರಪಡೆ, ಸೇನೆ, ಸ್ಥಳೀಯ ಪೊಲೀಸ್, ಅಬಕಾರಿ, ಎನ್.ಸಿ.ಸಿ., ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್ಕ್ರಾಸ್ ತಂಡಗಳು ಪಥಸಂಚಲನದಲ್ಲಿ ಭಾಗವಹಿಸಲಿದೆ.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment