ಕಾಸರಗೋಡು: ಇಲ್ಲಿಗೆ ಸಮೀಪದ ಚಟ್ಟಂಚಾಲ್ ತೆಕ್ಕಿಲ್ ತಿರುವಿನಲ್ಲಿ ಟಿಪ್ಪರ್ ಲಾರಿ ಮತ್ತು ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಕುಂಡಂಕುಳಿ ನಿವಾಸಿ ಪ್ರದೀಪನ್(35) ಸಾವನ್ನಪ್ಪಿದ ವ್ಯಕ್ತಿಎಂದು ಗುರುತಿಸಲಾಗಿದೆ. ಈತನ ಜತೆಯಲ್ಲಿ ಸಂಚರಿಸುತ್ತಿದ್ದ ಅಶೋಕ್ ಎಂಬಾತ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ
ಕಾಸರಗೋಡು: ಕಾಂಗ್ರೆಸ್ ಕಾರ್ಯಕರ್ತ ಪೆರ್ಲ ಸಮೀಪದ ಕಾಟುಕುಕ್ಕೆ ನಿವಾಸಿ ಶ್ರೀಧರ ಪೂಜಾರಿ ಎಂಬವರ ಮೇಲೆ ಸಿ.ಪಿ.ಎಂ. ಕಾರ್ಯಕರ್ತರ ತಂಡ ಹಲ್ಲೆ ನಡೆಸಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಕಾಲು ಮತ್ತು ಕೈಗಳಿಗೆ ಗಾಯಗೊಂಡ ಇವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸೇರಿಸಲಾಗಿದೆ. ರಾಜಕೀಯ ದ್ವೇಷವೇ ಹಲ್ಲೆಗೆ ಕಾರಣ ಎಂದು ಗಾಯಾಳು ದೂರಿದ್ದಾರೆ.

ಸಿ.ಪಿ.ಎಂ. ಕಾರ್ಯಕರ್ತರ ಮೇಲೆ ಹಲ್ಲೆ
ಕಾಸರಗೋಡು: ಸಿ.ಪಿ.ಎಂ. ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಬೈಕ್ಗೆ ಹಾನಿ ಮಾಡಿದ ಅದೇ ಪಕ್ಷದ 6 ಮಂದಿ ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅತಿಯಂಬೂರಿನ ಎಂ.ಜಯೇಶ್, ಷಾನು ಎಂಬವರ ಮೇಲೆ ಹಲ್ಲೆ ನಡೆಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಬಾವ, ಪ್ರಶಾಂತ್, ಮನೋಜ್, ರೂಪೇಶ್, ವಿವೇಕ್ ಸಹಿತ 6 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ದೇವಸ್ಥಾನದ ಕೆರೆಯಲ್ಲಿ ಸ್ನಾನ ಮಾಡುವ ವಿಷಯದಲ್ಲಿ ಉಂಟಾದ ವಿವಾದವೇ ಭಾನುವಾರ ಪರಸ್ಪರ ಹಲ್ಲೆಗೆ ಹೇತುವಾಗಿತ್ತು.

ಎಂಡೋಸಲ್ಫಾನ್ ದುಷ್ಪರಿಣಾಮ:ಸುಪ್ರೀಂ ಕೋಟರ್ಿನ ಮೊರೆ
ಕಾಸರಗೋಡು: ಎಂಡೋಸಲ್ಫಾನ್ ದುಷ್ಪರಿಣಾಮದ ಮೂಲಕ ಸಾವಿಗೀಡಾದ ರೋಗಿಗಳ ಕುಟುಂಬಕ್ಕೆ ನಷ್ಟಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸುಪ್ರೀಂ ಕೋಟರ್ಿನ ಮೊರೆ ಹೋಗುವುದಾಗಿ ಇಲ್ಲಿನ ಎಂಡೋಸಲ್ಫಾನ್ ವಿರೋಧಿ ಹೋರಾಟ ಸಮಿತಿ ನಿರ್ಧರಿಸಿದೆ.
ಎಂಡೋಸಲ್ಫಾನ್ ಭಾರತದಲ್ಲಿ ಯಾವುದೇ ದುಷ್ಪರಿಣಾಮ ಬೀರಿಲ್ಲ ಎಂಬ ಕೇಂದ್ರ ಸಕರ್ಾರದ ಅಭಿಪ್ರಾಯವನ್ನು ಸಮಿತಿ ಖಂಡಿಸಿದೆ. ಎಂಡೋಸಲ್ಫಾನ್ ನಿಷೇಧವನ್ನು ಭಾರತದಾದ್ಯಂತ ಜಾರಿಗೆ ತರಲು ಸಕರ್ಾರ ಕ್ರಮಕೈಗೊಳ್ಳಬೇಕು ಎಂದು ಸಮಿತಿ ಸಭೆ ಆಗ್ರಹಿಸಿದೆ. ಬೇಯರ್ ಎಂಬ ಕಂಪೆನಿ ಎಂಡೋಸಲ್ಫಾನ್ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಬೆನ್ನಲ್ಲಿ ಕೇಂದ್ರ ಸಕರ್ಾರ ಈ ರೀತಿಯ ಜನವಿರೋಧಿ ಹೇಳಿಕೆ ನೀಡಿದೆ. ಇದು ಎಂಡೋಸಲ್ಫಾನ್ ದುಷ್ಪರಿಣಾಮಕ್ಕೊಳಗಾಗಿ ತತ್ತರಿಸಿದ ಕಾಸರಗೋಡಿನ ಜನತೆಯ ಮೇಲಿನ ಸವಾಲು ಆಗಿದೆ ಎಂದು ಸಮಿತಿ ಆತಂಕ ವ್ಯಕ್ತಪಡಿಸಿದೆ.
ಸಭೆಯಲ್ಲಿ ನಾರಾಯಣನ್ ಪೆರಿಯ, ಎಂ.ಎ.ರಹಿಮಾನ್, ಟಿ.ಸಿ.ಮಾಧವ ಪಣಿಕ್ಕರ್, ಪಿ.ವಿ.ಸುಧೀರ್ ಕುಮಾರ್, ಕೆ.ಬಿ.ಮುಹಮ್ಮದ್ ಕುಞ್ಞಿ, ಅಶ್ರಫ್, ಕುಞ್ಞಿಕೃಷ್ಣನ್ ಅಂಬಲತ್ತೆರೆ, ಅಬ್ಬಾಸ್ ಮುದಲಪ್ಪಾರೆ ಹಾಜರಿದ್ದರು.

--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment