Friday, August 7, 2009

ಕಳವು ಆರೋಪಿಯ ಬಂಧನ/Stolen-Arrest


ದಿನಾಂಕ. 6.08.2009 ರಂದು 19:35 ಗಂಟೆಗೆ ಕಾಪು ಪಡುಗ್ರಾಮದ ಪೊಲೀಪು ಜಂಕ್ಷನ್ ಎಂಬಲ್ಲಿ ಕಾಪು ಠಾಣಾ ಸರಹದ್ದಿನ ಪೊಲೀಸ್ ನಿರೀಕ್ಷಕರಾದ ಚೆಲುವರಾಜ್.ಬಿ ಇವರು ಸಿಬ್ಬಂದಿಗಳೊಂದಿಗೆ ಅನುಮಾನಸ್ಪದವಾಗಿ ಬರುತ್ತಿದ್ದ ಕಾರು ನಂಬ್ರ ಕೆಎ-19-ಪಿ-0420 ನ್ನು ನಿಲ್ಲಿಸಿ ಕಾರು ಚಲಾಯಿಸುತ್ತಿದ್ದ ಆರೋಪಿ ಉದಯ ಪೂಜಾರಿ (30 ವರ್ಷ), ಕೋಣಿ, ಕುಂದಾಪುರ ಎಂಬಾತನ್ನು ವಿಚಾರಿಸಿದಾಗ ತಾನು 20 ದಿನ ಹಿಂದೆ ಸುರೇಶ್ ಎಂಬವನೊಂದಿಗೆ ಕುಂದಾಪುರದ ಒಡೆರಹೋಬಳಿಯ ಲೇಡಿಸ್ ಹಾಸ್ಟೆಲಿನ ಒಳಹೊಕ್ಕು 2 ಚಿನ್ನದ ಸರ ಹಾಗೂ 4 ಮೊಬೈಲ್ನ್ನು ಕಳವು ಮಾಡಿದ್ದನ್ನು ಒಪ್ಪಿ ಕೊಂಡಿದ್ದು, ಕಳವು ಮಾಡಲಾದ ಎರಡು ತುಂಡಾದ ಚಿನ್ನದ ಸರ, 2 ಮೊಬೈಲ್ನ್ನು ತನ್ನ ವಶದಲ್ಲಿ ಇದ್ದುದನ್ನು ಹಾಜರುಪಡಿಸಿದನ್ನು ಮತ್ತು ಕೃತ್ಯ ನಡೆಸಲು ಉಪಯೋಗಿಸಿದ ಕಾರನ್ನು ಸ್ವಾಧೀನ ಪಡಿಸಿಕೊಂಡಿದ್ದು, ಸದ್ರಿ ಸೊತ್ತುಗಳು ಕುಂದಾಪುರ ಠಾಣಾ ಅ.ಕ್ರ. 213/09 ಕಲಂ. 457, 380 ಐ.ಪಿ.ಸಿ ಪ್ರಕರಣಕ್ಕೆ ಸಂಬಂಧಿಸಿದಾಗಿವೆ. ಈ ಬಗ್ಗೆ ಪೊಲೀಸ್ ನಿರೀಕ್ಷಕರಾದ ಚೆಲುವರಾಜ್.ಬಿ ರವರು ಕಾಪು ಠಾಣೆಗೆ ನೀಡಿದ ದೂ? ನಂತೆ ಅಪರಾಧ ಕ್ರಮಾಂಕ 155/09 ಕಲಂ: 41(1)(ಡಿ),102(1) ಸಿ.ಆರ್.ಪಿ.ಸಿ ಮತ್ತು 379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 
ಆಕಸ್ಮಿಕ ಮರಣ
 
ದಿನಾಂಕ 06/08/09 ರಂದು ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮದ ಬೆಳ್ಮಣ್ನಲ್ಲಿರುವ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಶಾಲಾ ಮಟ್ಟದ ಕರಾಟೆ ಸ್ಪಧರ್ೆಯಲ್ಲಿ ಭಾಗವಹಿಸಿದ ಸುಹಾನ್ ಹೆಗ್ಡೆ, ಪ್ರಾಯ ಸುಮಾರು 15 ವರ್ಷ, ತಂದೆ ನಿತ್ಯಾನಂದ ಹೆಗ್ಡೆ ಎಂಬಾತನಿಗೆ ಸ್ಪಧರ್ೆ ಸಮಯ ಹೊಟ್ಟೆಗೆ ಪೆಟ್ಟು ಬಿದ್ದ ಪರಿಣಾಮ ಹೊಟ್ಟೆಯೊಳಗಡೆ ಬೆಳೆದಿದ್ದ ದುಮರ್ಾಂಸದ ಗಡ್ಡೆ ಒಡೆದು ಅಸ್ವಸ್ಥಗೊಂಡು, ಚಿಕಿತ್ಸೆ ಬಗ್ಗೆ ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಾಗಿದ್ದವನು, ಚಿಕಿತ್ಸೆ ಫಲಕಾರಿಯಾಗದೆ. ಈ ಬಗ್ಗೆ ಸದಾನಂದ ಹೆಗ್ಡೆ (60 ವರ್ಷ) ತಂದೆ: ರಾಜೀವ ಹೆಗ್ಡೆ, ವಾಸ: ಮಾಳ ಗ್ರಾಮ, ಕಾರ್ಕಳ ತಾಲೂಕುರವರು ದೂರು ನೀಡಿದ್ದು ಅವರ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 27/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಅಪಘಾತ ಪ್ರಕರಣ
 
ದಿನಾಂಕ 07/08/09 ರಂದು ಬೆಳಿಗ್ಗೆ 9:15 ಗಂಟೆಗೆ ಸೂರ್ಯ ಕುಂದರ್ (29) ತಂದೆ: ಅಣ್ಣಪ್ಪ ಮರಕಾಲ ವಾಸ: ಐರೋಡಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಎಂಬವರು ರುಚಿ ಪ್ರಾಡಕ್ಟ್ ಗೆ ಸಂಬಂಧಿಸಿದ ಮ್ಯಾಕ್ಸಿ ಟ್ರಕ್ ನಂಬ್ರ ಕೆಎ 20 ಬಿ 4945ರಲ್ಲಿ ಐರೋಡಿಯಿಂದ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಹೊರಟು ಸಾಸ್ತಾನದ ಸಂತ ಅಂತೋನಿ ಶಾಲೆಯ ಬಳಿ ತಲುಪುವ ಸಮಯ ಕೆಎ 20 ಬಿ 2347 ನಂಬ್ರದ ಬಸ್ಸನ್ನು ಅದರ ಚಾಲಕ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಬಲಬದಿಗೆ ಚಲಾುಸಿ ಮ್ಯಾಕ್ಸಿ ಟ್ರಕ್ಗೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿರುತ್ತವೆ. ಈ ಅಪಘಾತದ ಬಗ್ಗೆ ಸೂರ್ಯ ಕುಂದರ್ರವರು ದೂರು ನೀಡಿದ್ದು ಅವರ ದೂರಿನಂತೆ ಕೋಟಾ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 186/09 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಅಪಘಾತ ಪ್ರಕರಣಗಳು
 
ದಿನಾಂಕ 06/08/09 ರಂದು ಬೆಳಿಗ್ಗೆ 08:10 ಗಂಟೆಗೆ ಹಂದಾಡಿ ಗ್ರಾಮದ ಬೇಳೂರು ಜೆಡ್ಡು ಜನತಾ ಕಾಲೋನಿಯ ಸರಕಾರಿ ಬಾವಿಯ ಸಮೀಪ ಆರೋಪಿ ಚಾಲಕ ಮಹೇಂದ್ರ ಮಾಕ್ಸಿ ಕ್ಯಾಬ್ ನಂಬ್ರ ಸಿ.ಆರ್.ಎಕ್ಸ್ 7689 ನೇದನ್ನು ಬ್ರಹ್ಮಾವರ ಕಡೆಯಿಂದ ಮುಳ್ಳುಜೆಡ್ಡು ಕಡೆಗೆ ಅತೀ ವೇಗ ಹಾಗೂ ಅಜಾಗ್ರತೆಯಿಂದ ಚಲಾಯಿಸಿಕೊಂಡು ರಸ್ತೆಯ ಅತೀ ಬಲಕ್ಕೆ ಬಂದು ಮುಳ್ಳುಜೆಡ್ಡು ಕಡೆಯಿಂದ ಬ್ರಹ್ಮಾವರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಮಹೇಶ್ ಪೂಜಾರಿ ತಾಯಿ ರಾಧು ಪೂಜಾರ್ತಿ ವಾಸ: ನಡುಬೆಟ್ಟು ಹಂದಾಡಿ ಗ್ರಾಮ ಎಂಬವರ ಸೈಕಲಿಗೆ ಡಿಕ್ಕಿ ಹೊಡೆದು ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ತಲೆಯ ಬಲಬದಿಗೆ ರಕ್ತಗಾಯವಾಗಿರುತ್ತದೆ.ಈ ಬಗ್ಗೆ ಮಹೇಶ್ ಪೂಜಾರಿರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 138/09 ಕಲಂ. 279,337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ದಿನಾಂಕ 06/08/09 ರಂದು ಹಸನ್ ಸಾಹೇಬ್ (35), ತಂದೆ: ಮೌಲ ಸಾಬ್, ವಾಸ: ವಾಲೇಕಾರೆ, ಮುಷ್ಟಿಗೇರಿ ಗ್ರಾಮ, ಬಾದಾಮಿ ತಾ. ಬಾಗಲಕೊಟೆ ಜಿಲ್ಲೆ, ಹಾಲಿ ವಾಸ: ವಿಜಯ ನಗರ, ಎಂಡ್ ಪಾಂಯಿಟ್ ಬಳಿ, ಸರಳಬೆಟ್ಟು, ಮಣಿಪಾಲ. ಉಡುಪಿ. ಎಂಬವರು ತನ್ನ ಮೋಟಾರ್ ಬೈಕ್ ನಂ. ಕೆ.ಎ-20-ಆರ್-5376ನೇ ದರಲ್ಲಿ ತಮ್ಮ ಮಗಳನ್ನು ನೋಡಿಕೊಂಡು ಬರುವರೇ ಬನ್ನಂಜೆ ಬಾಲಕಿಯರ ಹಾಸ್ಟೇಲ್ ಕಡೆಗೆ ಹೊರಟು ಸಮಯ ಸುಮಾರು 14:45 ಗಂಟೆಗೆ ಎಂ.ಜಿ.ಎಂ. ಕಾಲೇಜ್ ಬಸ್ ನಿಲ್ದಾಣದ ಬಳಿ ತಲುಪುವಾಗ್ಗೆ ಆಪಾದಿತೆ ಕೆ.ಎ-20-ಎಂ-7641ನೇ ಮಾರುತಿ 800 ಕಾರಿನ ಚಾಲಕಿಯು ತನ್ನ ಬಾಬ್ತು ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಉಡುಪಿ ಕಡೆಯಿಂದ ಮಣಿಪಾಲದ ಕಡೆಗೆ ಚಲಾಯಿಸಿಕೊಂಡು ಬಂದು ತನ್ನ ಎದುರು ಹೋಗುತ್ತಿದ್ದ ಅಟೋ ರಿಕ್ಷಾವನ್ನು ಓವರ್ ಟೇಕ್ ಮಾಡುವ ಭರದಲ್ಲಿ ತೀರಾ ಬಲಬದಿಗೆ ಬಂದು ಮೋಟಾರ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸಮೇತ ರಸ್ತೆ ಬದಿಯ ತೋಡಿಗೆ ಬಿದ್ದಿದ್ದು. ಬಿದ್ದ ಪರಿಣಾಮ ಎಡಕಾಲಿನ ಹಿಮ್ಮಡಿಗೆ, ಬಲಕಾಲಿಗೆ ಮೂಳೆ ಮುರಿತದ ರಕ್ತಗಾಯ, ಬೆನ್ನಿಗೆ ಜಜ್ಜಿದ ಒಳಗಾಯ ಹಾಗೂ ಕೈಗೆ ತರಚಿದ ಗಾಯವಾಗಿರುತ್ತದೆ. ಈ ಅಪಘಾತದ ಬಗ್ಗೆ ಹಸನ್ ಸಾಹೇಬ್ (35), ರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 259/09 ಕಲಂ. 279,338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ದಿನಾಂಕ 05/08/2009 ರಂದು ಮಂಜುನಾಥ ಪ್ರಾಯ:21 ,ತಂದೆ:ನಾರಾಯಾಣಾ ಆಚಾರ್ಯ ,ವಾಸ:ಅಕ್ಕಸಾಲಮಕ್ಕಿ ದಬ್ಬನಗುಡ್ಡೆ ಗ್ರಾಮ ,ಮಹಿಷಿ ಅಂಚೆ ,ತೀರ್ಥಳ್ಳಿ ಎಂಬವರು ಕೆಲಸ ಮಾಡುತ್ತಿರುವ ಕುಂದಾಪುರ ಕಸಬಾ ಗ್ರಾಮದಲ್ಲಿರುವ ಶಬರಿ ಗ್ಯಾರೇಜಿನಲ್ಲಿ ಆರೋಪಿತನಾದ ನರೇಂದ್ರ ಕುಮಾರ್ನು ಕೆ.ಎ.20.ಬಿ.97 ನೇ ಬಸ್ಸನ್ನು ರಿಪೇರಿಗಾಗಿ ನಿಲ್ಲಸಿದ್ದು ಗ್ಯಾರೇಜಿನ ಮೆಕ್ಯಾನಿಕ್ ಗಣೇಶ ಆಚಾರ್ಯ ಎಂಬವರು ಬಸ್ಸಿನ ಅಡಿಯಲ್ಲಿ ಕೆಲಸ ಮಾಡುತ್ತಿದ್ದು ಸಮಯ ಮದ್ಯಾಹ್ನ 1.00 ಗಂಟೆಗೆ ಆರೋಪಿತನು ಯಾವುದೇ ಸೂಚನೆಯನ್ನ ನೀಡದೇ ನಿರ್ಲಕ್ಷತನದಿಂದ ಬಸ್ಸನ್ನು ಒಮ್ಮೆಲೆ ಹಿಂದಕ್ಕೆ ತೆಗೆದ ಪರಿಣಾಮ ಬಸ್ಸಿನ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಗಣೇಶ ಆಚಾರ್ಯರವರ ಎಡ ಕಾಲಿನ ಮೇಲೆ ಬಸ್ಸಿನ ಚಕ್ರ ಹಾದು ಹೋದ ಪರಿಣಾಮ ಅವರ ಎಡ ಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು ಮಣಿಪಾಲ ಕೆ.ಎಮ್.ಸಿ. ಅಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವುದಾಗಿದೆ. ಈ ಬಗ್ಗೆ ಮಂಜುನಾಥ ರವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 230/09 ಕಲಂ. 279,338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಆತ್ಮಹತ್ಯೆ ಪ್ರಕರಣ
 
ದಿನಾಂಕ 06/08/2009 ರಂದು 14.45 ಗಂಟೆಗೆ ಉಮೇಶ್ ಪುತ್ರನ್ ವೈದ್ಯೇಕೀಯ ನಿಧರ್ೇಶಕರು ಚಿನ್ಮಾಯಿ ಅಸ್ಪತ್ರೆ ಕುಂದಾಪುರ ಎಂಬವರು ಚಿನ್ಮಾಯಿ ಅಸ್ಪತ್ರೆ ರೋಗಿಗಳ ಕೋಣೆಗೆ ಒಬ್ಬನು ತಾನು ಟಿ.ವಿ.ರಿಪೇರಿಯವನು ಎಂದು ಹೇಳಿಕೊಂಡು ಬಂದವನನ್ನು ಅಸ್ಪತ್ರೆಯಲ್ಲಿ ಈ ಹಿಂದೆ ನಡೆದ ಕಳವು ಪ್ರಕರಣದ ಬಗ್ಗೆ ಗುಮಾನಿಯಿಂದ ಅವನನ್ನು ಕೆಳಗೆ ಕರೆದುಕೊಂಡು ಬಂದು ರೂಮ್ ನಂಬ್ರ 13 ರಲ್ಲಿ ಕುಳ್ಳಿರಿಸಿ ವಿಚಾರಿಸಿದಾಗ ಆತನು ತಾನು ದುಗರ್ಾಂಬರವರ ಕಡೆಯವನು ಎಂದು ತಿಳಿಸಿದ್ದು ಅವನನ್ನು ಅಲ್ಲೇ ಕುಳ್ಳಿರಿಸಿ ವಾಚ್ಮ್ಯಾನ್ ಮತ್ತು ಪ್ರಸಾದ ಇವರು ಬಂದು ದೂರಾವಾಣಿ ಮುಖೇನಾ ದುಗರ್ಾಂಬದ ಸುಪ್ರೀತಾ ಚಾತ್ರರವರಲ್ಲಿ ವಿಚಾರಿಸಿದಾಗ ತಮ್ಮ ಕಡೆಯವನು ಅಲ್ಲ ಎಂದು ತಿಳಿಸಿದ್ದು ನಂತರ ವಾಪಾಸು ರೂಮ್ ನಂಬ್ರ 13 ರ ಹತ್ತಿರ ಹೋದಾಗ ಆತನು ಒಳಗಿನಿಂದ ಬಾಗಿಲಿಗೆ ಚಿಲಕ ಹಾಕಿದ್ದು ಮೇಲಿನ ಕಿಟಕಿಯಿಂದ ಇಣುಕಿ ನೋಡಲಾಗಿ ಆತನು ನೇಣು ಹಾಕಿ ಮೃತ ಪಟ್ಟಿರುವುದಾಗಿದೆ.ಮೃತನು ಅಪರಿಚಿತನಾಗಿದ್ದು ಈ ಬಗ್ಗೆ ಉಮೇಶ್ ಪುತ್ರನ್ ರವರು ಕುಂದಾಪುರ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 33/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಅಸ್ವಾಭಾವಿಕ ಮರಣ
 
ಸುಮಾರು ಒಂದು ತಿಂಗಳ ಹಿಂದೆ ಕುಂದಾಪುರದ ರೈಲ್ವೆ ಸ್ಟೇಷನ್ ಹೊರಗಡೆ ಇರುವ ರಿಕ್ಷಾ ಸ್ಟಾಂಡಿನ ಪಕ್ಕ ಅಸೌಖ್ಯದಿಂದ ಬಳಲುತ್ತಿದ್ದ ಸುಮಾರು 38 ವರ್ಷ ಪ್ರಾಯದ ಒಬ್ಬ ಹೆಂಗಸನ್ನು ರವೀಂದ್ರೆ ಶೆಟ್ಟಿಗಾರ ತಂದೆ: ಗಣಪತಿ ಶೆಟ್ಟಿಗಾರ ವಾಸ: ಕಂದಾವರ, ಕಂದಾವರ ಗ್ರಾಮ ಕುಂದಾಪುರ ಎಂಬವರು ಚಿಕಿತ್ಸೆಯ ಬಗ್ಗೆ ಕುಂದಾಪುರ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಅವಳ ಹೆಸರು ರೇಣುಕಾ ಭಂಡಾರಿ (38) ರಾಯಬಾಗ ಬೆಳಗಾಂ ಜಿಲ್ಲೆ ಎಂಬುದಾಗಿ ವಿಚಾರಿಸಿದಾಗ ತಿಳಿದಿರುತ್ತದೆ. ರೇಣುಕಾ ಭಂಡಾರಿ ಇವರು ಕುಂದಾಪುರ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 06/08/09 ರಂದು ಸಂಜೆ 5:40 ಗಂಟೆಗೆ ಮೃತಪಟ್ಟಿದ್ದಾಗಿದೆ ಈ ಬಗ್ಗೆ ರವೀಂದ್ರೆ ಶೆಟ್ಟಿಗಾರ ರವರು ಕುಂದಾಪುರ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 34/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಹಲ್ಲೆ ಪ್ರಕರಣಗಳು
 
05ರಂದು 11:15 ಗಂಟೆಗೆ ಬಾಕರ್ೂರು ರುಕ್ಷ್ಮೀಣಿ ಶೆಡ್ತಿ ಕಾಲೇಜಿನ ದ್ವಿತೀಯ ಬಿ.ಬಿ.ಎಂ ಕ್ಲಾಸಿನಲ್ಲಿ ಚೇತನ ಎಂ ತಂದೆ: ಮೋಹನ ವಾಸ: ಮಂದಾತರ್ಿ ಹೆಗ್ಗುಂಜೆ ಗ್ರಾಮ ಇವರು ಹಾಗೂ ಇತರ ವಿದ್ಯಾಥರ್ಿಗಳು ತರಗತಿಯಲ್ಲಿರುವಾಗ ಆರೋಪಿ 1) ರಾಜೇಶ್ ಶೆಟ್ಟಿ 2) ಭೋಜಶೆಟ್ಟಿ 3) ಅವಿನಾಶ್ 4) ಪ್ರಸಾದ್ 5) ಪ್ರವೀಣ ಎಂಬವರುಗಳು ಅಕ್ರಮಕೂಟ ಸೇರಿಕೊಂಡು ಬಂದು ಈ ಹಿಂದೆ ಆರೋಪಿಗಳು ವಿನಾ ಕಾರಣ ಜೋರು ಮಾಡಿದ ಬಗ್ಗೆ ಪ್ರಾಂಶುಪಾಲರಿಗೆ ದೂರು ನೀಡಿದರೆಂಬ ಕಾರಣದಿಂದ ಚೇತನ ಮತ್ತು ಅವರ ಸ್ನೇಹಿತರಾದ ವಿಶ್ವನಾಥ, ಉದಯ್ ಕುಂದರ್, ಸಂದೀಪ, ಚೇತನ್ ಎಂಬವರಿಗೆ ಕೈಯಿಂದ ಹೊಡೆದು ಪೊಲೀಸರಿಗೆ ದೂರು ನೀಡಿದರೆ ಕ್ಯಾಂಪಸ್ನಿಂದ ಹೊರಗೆ ಬಂದ ಮೇಲೆ ಹೊಡೆಯುವುದಾಗಿ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಚೇತನ ರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 139/09 ಕಲಂ. 143, 147, 323, 506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 05/08/09 ರಂದು ಸಂಜೆ 7:00 ಗಂಟೆಗೆ ಕುಂದಾಪುರ ಕಸಬಾ ಗ್ರಾಮದ ಮೈಲಾರೇಶ್ವರ ಯುವಕ ಮಂಡಲದಲ್ಲಿ ಕೇರಂ ಆಡುತ್ತಿದ್ದ ಗಣೇಶ್ ಹೆಗ್ಡೆ ತಂದೆ: ಅಣ್ಣಯ್ಯ ಹೆಗ್ಡೆ ವಾಸ: ಮಾಲತಿ ನಿಲಯ ಇಶ್ ಮಾಕರ್ೆಟ್ ರಸ್ತೆ, ಕುಂದಾಪುರ ರವರಿಗೆ ಆರೋಪಿಯು ಓಂಕು @ ವೆಂಕಟೇಶ್ ಎಂಬಾತನು ಕೇರಂ ಬೋಡರ್್ಗೆ ಪೌಡರ್ ಹಾಕುವ ವಿಷಯದಲ್ಲಿ ಜಗಳ ಮಾಡಿ ಕ್ಲಬಿನ ಪ್ಲಾಸ್ಟಿಕ್ ಕುಚರ್ಿಯಿಂದ ಹೊಡೆದು, ಎಡ ಕೈಗೆ ರಕ್ತಗಾಯ ಉಂಟುಮಾಡಿದ್ದಾಗಿದೆ. ಈ ಹಲ್ಲೆ ಬಗ್ಗೆ ಗಣೇಶ್ ಹೆಗ್ಡೆ ರವರು ಕುಂದಾಪುರ ಠಾಣೆಯಲ್ಲಿ ನೀಡಿದ ದೂರಿನಂತೆ ಠಾಣಾ ಅಪರಾಧ ಕ್ರಮಾಂಕ 231/09 ಕಲಂ: 324 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಜೀವ ಬೆದರಿಕೆ ಪ್ರಕರಣ
 
ದಿನಾಂಕ:27.07.09 ರಂದು 14:00 ಘಂಟೆಗೆ ಸಾಂತೂರು ಗ್ರಾಮದಲ್ಲಿರುವ ಮಾರ್ಗರೆಟ್ ಮಾಬೆನ್ ಪ್ರಾಯ:39 ವರ್ಷ ಗಂಡ: ಡೇವಿಡ್ ಮಾಬೆನ್ ವಾಸ:ವಿಶನ್ ಕಂಪೌಂಡ್ ಸಾಂತೂರು ಗ್ರಾಮ ಉಡುಪಿ ಎಂಬವರ ಅತ್ತೆಯವರ ಖಾಸಗಿ ಜಾಗ ಸವರ್ೇ ನಂಬ್ರ:22-1ಪಿ3,2-28,22-5,2-6,22-7 ನೇದಕ್ಕೆ ಅಕ್ರಮ ಕೂಟ ಸೇರಿಕೊಂಡು ಜಾಗಕ್ಕೆ ಅಕ್ರಮ ಪ್ರವೇಶ ಮಾಡಿದ ಆರೋಪಿಗಳಾದ 1 .ಡೇವಿಡ್ ಡಿ.ಸೋಜ, 2.ಶರತ್ ಶೆಟ್ಟಿ 3 ಉದಯ ಕುಮಾರ್ ಹಾಗೂ ಇತರ 20 ಜನರು ಗಳು ಜಾಗದಲ್ಲಿದ್ದ ಬೆಲೆಬಾಳುವ ಮರಗಳನ್ನು ಕಡಿದು ಜಾಗವನ್ನು ನೆಲಸಮಗೊಳಿಸಿದ್ದಲ್ಲದೇ, ಅವಾಚ್ಯ ಶಬ್ದಗಳಿಂದ ಬೈದು ಕೊಲ್ಲುವುದಾಗಿ ಜೀವಬೆದರಿಕೆ ಹಾಕಿರುವುದಾಗಿದೆ ಈ ಬಗ್ಗೆ ಮಾಬೆನ್ ರವರು ನೀಡಿದ ದೂರಿನಂತೆ ಪಡುಬಿದ್ರೆ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 133/09 ಕಲಂ: 143,147,148,447,504,506,427, ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

No comments:

Post a Comment