ಕಾಸರಗೋಡಿನ ಲಲಿತಕಲಾ ಸದನದಲ್ಲಿ ಶನಿವಾರ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಹೃದಯವಾಹಿನಿ ಪತ್ರಿಕೆಯ ಸಹಯೋಗದಲ್ಲಿ ಆಯೋಜಿಸಿದ 6ನೇ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಶಾಂತಮಲ್ಲ ಮಲ್ಲಿಕಾಜರ್ುನ ಸ್ವಾಮೀಜಿ ಆಶೀರ್ವಚನ ನೀಡಿದರು.
`ಸಂಸ್ಕೃತಿ ರಕ್ಷಣೆಯ ಜವಾಬ್ದಾರಿ ನಮ್ಮದು'
ಕಾಸರಗೋಡು: ಸಂಸ್ಕೃತಿ ಜೀವಂತವಾಗಿರಬೇಕಿದ್ದು ಅದನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮದು ಎಂದು ಶಾಂತಮಲ್ಲ ಮಲ್ಲಿಕಾಜರ್ುನ ಸ್ವಾಮೀಜಿ ಹೇಳಿದರು.
ಕಾಸರಗೋಡಿನ ಲಲಿತಕಲಾ ಸದನದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಹೃದಯವಾಹಿನಿ ಪತ್ರಿಕೆಯ ಸಹಯೋಗದಲ್ಲಿ ಆಯೋಜಿಸಿದ 6ನೇ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ವಿದ್ವಾಂಸ ಜಿ.ಡಿ.ಜೋಶಿ, ಚಿತ್ರ ಕಲಾವಿದ ಪಿ.ಎಸ್.ಪುಣಿಂಚತ್ತಾಯ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು, ಹೃದಯವಾಹಿನಿ ಪತ್ರಿಕೆಯ ಸಂಪಾದಕ ಮಂಜುನಾಥ್ ಹಾಜರಿದ್ದರು.
ಹೃದಯವಂತರು ಪ್ರಶಸ್ತಿ:
ಜಯಪ್ರಕಾಶ್ ರಾವ್ ಪುತ್ತೂರು, ಕೆ.ಎಂ ಕೋಟ್ಯಾನ್ ಮುಂಬೈ, ಡಾ.ಕೆ.ಬಿ.ನಾಗೂರು ಬಿಜಾಪುರ, ಎ.ನರಸಿಂಹ ಭಟ್, ಡಾ.ವೆಂಕಟರಮಣ ಹೆಗ್ಡೆ ಶಿಶರ್ಿ, ಮಧುಕರ ರೈ ಕೊರೆಕ್ಕಾನ, ಶಂಶುದ್ದೀನ್ ಸಾಲ್ಮರ ಪುತ್ತೂರು., ಆರ್.ಧನರಾಜ್ ಮಂಗಳೂರು, ಜಿ.ಎ.ಸಿದ್ಧಪ್ಪ ಬೆಂಗಳೂರು, ಭಾಸ್ಕರ ರೈ ಕುಕ್ಕುವಳ್ಳಿ, ಪೆಡರ್ೂರು ಪ್ರಭಾಕರನ್ ಕಲ್ಯಾಣಿ ಮಂಡ್ಯ, ರಂಗಪುತ್ಥಳಿ ರಘುನಂದನ್ ಮತ್ತು ವಾಪಿ ಕನರ್ಾಟಕ ಸಂಘದವರಿಗೆ ಹೃದಯವಂತರು ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿ.ಬಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷ್ಣ ಪೈ ಬದಿಯಡ್ಕ ಸ್ವಾಗತಿಸಿದರು. ಎ.ಶ್ರೀನಾಥ್ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment