Friday, August 7, 2009

ಬ್ಯಾಂಕ್ ಮುಷ್ಕರ ಯಶಸ್ವಿ/Bank Strike

ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಬ್ಯಾಂಕ್ ನೌಕರರು ಎರಡು ದಿನಗಳಿಂದ ನಡೆಸುತ್ತಿರುವ ಮುಷ್ಕರದಿಂದ ಗ್ರಾಹಕರು ಪರದಾಡುವಂತಾಯಿತು.
ನಗರದಲ್ಲಿ ಮುಷ್ಕರ ಯಶಸ್ವಿಯಾಗಿದೆ. ಐ.ಸಿ.ಐ.ಸಿ.ಐ., ಎಚ್.ಡಿ.ಎಫ್.ಸಿ., ಆಕ್ಸಿಸ್ ಬ್ಯಾಂಕುಗಳು ಮತ್ತು ಇತರ ಬ್ಯಾಂಕುಗಳು ಮುಚ್ಚಿತ್ತು. ಎ.ಟಿ.ಎಂ. ಕೌಂಟರ್ಗಳಲ್ಲಿಯೂ ಹಣದ ದೌರ್ಲಭ್ಯ ಕಂಡುಬಂತು. ಇದರಿಂದ ಗ್ರಾಹಕರು ಪರದಾಡಿದರು.
  

ಗಾಯಾಳು ಸಾವು
 
ಕಾಸರಗೋಡು: ಇತ್ತೀಚೆಗೆ ವಿದ್ಯಾನಗರದಲ್ಲಿ ಬೈಕ್ ಮತ್ತು ಸ್ಕೂಟರ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದ ಗಾಯಾಳು ಮೃತ ಪಟ್ಟ ಘಟನೆ ನಡೆದಿದೆ.
ನಗರದ ಉದ್ಯಮಿಯಾಗಿದ್ದ ವಿದ್ಯಾನಗರ ನಿವಾಸಿ ಎಂ.ಎ.ಅಬ್ದುಲ್ ಖಾದರ್(65) ಸಾವನ್ನಪ್ಪಿದವರು. ಕಳೆದ ಮಂಗಳವಾರ ಇವರು ಸಂಚರಿಸುತ್ತಿದ್ದ ಸ್ಕೂಟರ್ಗೆ ಬೈಕ್ ಡಿಕ್ಕಿ ಹೊಡೆದು ಗಾಯಗೊಂಡಿದ್ದರು.

 
ರಿಯಾನ ಪತ್ತೆಗೆ ಹೊರಟ ಪೊಲೀಸ್ ಬಲೆಗೆ ಮತ್ತೊಂದು ವೇಶ್ಯಾವಾಟಿಕೆ ಜಾಲ
 
ಕಾಸರಗೋಡು: ಕಲ್ಲಿಕೋಟೆಯ ಹದಿನಾರರ ಹರೆಯದ ಯುವತಿಯನ್ನು ಕಳೆದ 3 ತಿಂಗಳಿನಿಂದ ಮಂಗಳೂರು, ಕಾಸರಗೋಡಿನ ವಸತಿಗೃಹಗಳಲ್ಲಿ ಲೈಂಗಿಕವಾಗಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಯುವತಿಯನ್ನು ಕಾಸರಗೋಡು ಸಿ.ಐ. ಟಿ.ಪಿ. ಪ್ರೇಮರಾಜನ್ ನೇತೃತ್ವದಲ್ಲಿ ಪೊಲೀಸರು ಮಂಗಳೂರಿನ ಕದ್ರಿಯಲ್ಲಿರುವ ವಸತಿಗೃಹದಿಂದ ಸಿನಿಮೀಯ ಶೈಲಿಯಲ್ಲಿ ಪಾರುಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಈಕೆಯನ್ನು ಇಲ್ಲಿನ ಚೌಕಿಯಲ್ಲಿರುವ ಬದರ್ ಜುಮಾ ಮಸೀದಿ ಸಮೀಪದ ವಸತಿ ಗೃಹದಲ್ಲಿ ವಶದಲ್ಲಿರಿಸಿದ ತಂಡ ವೇಶ್ಯಾವಾಟಿಕೆ ಆರಂಭಿಸಿದೆ. ಹಸನ್ ರಹ್ಮಾನ್, ಜಮೀಲಾ, ಉಸ್ಮಾನ್, ನಿಯಾಸ್ ಎಂಬವರನ್ನೊಳಗೊಂಡ ತಂಡ ಈ ಜಾಲದಲ್ಲಿ ಸಕ್ರಿಯವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ರಿಯಾನ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸ್ ತಂಡಕ್ಕೆ ಈ ವೇಶ್ಯಾವಾಟಿಕೆ ಜಾಲದ ಜಾಡು ಲಭಿಸಿತ್ತು. 2009 ಏಪ್ರಿಲ್ನಿಂದ ಯುವತಿ ಈ ಜಾಲದಲ್ಲಿ ಸಿಲುಕಿದ್ದಾಳೆ. ಈ ಯುವತಿ ರಿಯಾನ ಆಗಿರಬಹುದು ಎಂಬ ಗುಮಾನಿಯಿಂದ ತನಿಖೆ ನಡೆಸಿದಾಗ ಮತ್ತೊಂದು ವೇಶ್ಯಾವಾಟಿಕೆ ಜಾಲದ ಗುಟ್ಟು ರಟ್ಟಾಗಿದೆ. ಗಣ್ಯರನ್ನು ಕೇಂದ್ರೀಕರಿಸಿ ಈ ಜಾಲದ ಯುವತಿಯನ್ನು ಬಳಸಿಕೊಳ್ಳಲಾಗಿದೆ. 20,000 ರೂ. ವ್ಯವಹಾರ ಕುದುರಿಸಿ ತಂಡ ಯುವತಿಯನ್ನು ಅನೇಕರಿಗೆ ಪೂರೈಸುತ್ತಾ ಬಂದಿದೆ.
ರಿಯಾನ ಪ್ರಕರಣದ ತನಿಖೆಗೆ ಇಳಿದ ಪೊಲೀಸರು ಈಗಾಗಲೇ ಪನ್ನಿಪ್ಪಾರೆ ವೇಶ್ಯಾವಾಟಿಕೆ ಜಾಲವನ್ನು ಬಯಲಿಗೆ ಎಳೆದ ಬೆನ್ನಲ್ಲೇ ಈ ಪ್ರಕರಣ ಬಹಿರಂಗಗೊಂಡಿದೆ.
 
 
ಮುಳಿಗದ್ದೆಯಲ್ಲಿ ಘರ್ಷಣೆ


ಮಂಜೇಶ್ವರ: ಬಾಯಾರು ಸಮೀಪದ ಮುಳಿಗದ್ದೆಯಲ್ಲಿ ಗುರುವಾರ ರಾತ್ರಿ ಎರಡು ತಂಡಗಳ ಮಧ್ಯೆ ನಡೆದ ಘರ್ಷಣೆಯಲ್ಲಿ 7 ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ನಡೆದಿದೆ.
ಮುಸ್ಲಿಂ ಲೀಗ್ ಪೈವಳಿಕೆ ಪಂಚಾಯ್ತಿ ಸಮಿತಿ ಕಾರ್ಯದಶರ್ಿ  ಇಬ್ರಾಹಿಂ ಪೆವರ್ೋಡಿ, ಬಾಯಾರು ಬೆರಿಪದವು ನಿವಾಸಿ ಪ್ರಸಾದ್, ಕಲ್ಲಗದ್ದೆ ನಿವಾಸಿ ಗೋಪಾಲ, ಬದಿಯಾರು ನಿವಾಸಿ ಗುಣಪಾಲ, ಮುಳಿಗದ್ದೆ ಪಟ್ಲ ನಿವಾಸಿ ಪ್ರವೀಣ್ ರೈ, ಕಲ್ಲಗದ್ದೆಯ ಅಶೋಕ್, ಸುಣ್ಣಾಡದ ಉದಯ ಎಂಬವರು ಗಾಯಗೊಂಡವರು.  ಇಬ್ರಾಹಿಂ ಪೆವರ್ೋಡಿ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದರೆ ಉಳಿದವರೆಲ್ಲರೂ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಬಸ್ಸಿನಲ್ಲಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ತಂಡಗಳ ಮಧ್ಯೆ ಘರ್ಷಣೆ ನಡೆದಿದೆ. ಘರ್ಷಣೆಯ ಪರಿಣಾಮ ಸ್ಥಳೀಯ ಅಂಗಡಿಗಳಿಗೆ ಹಾನಿ ಉಂಟಾಗಿದೆ. ವಿಷಯ ತಿಳಿದು ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು. ಶುಕ್ರವಾರ ಅಂಗಡಿ ಮುಂಗಟ್ಟುಗಳು ಮುಚ್ಚಿಕೊಂಡಿದೆ.

 
 
ಪಾವೂರು ಶಾಲೆ ಸ್ಥಳಾಂತರ: ಪ್ರತಿಭಟನೆಗಿಳಿದ ವಿದ್ಯಾಥರ್ಿಗಳು
 
ಮಂಜೇಶ್ವರ: ಇಲ್ಲಿಗೆ ಸಮೀಪದ ಪಾವೂರು ವಿದ್ಯೋದಯ ಕಿರಿಯ ಪ್ರಾಥಮಿಕ ಶಾಲೆಯ ಸ್ಥಳಾಂತರ ವಿವಾದದಿಂದ ವಿದ್ಯಾಥರ್ಿಗಳು ಪಾಡು ತೂಗುಯ್ಯಾಲೆಯಲ್ಲಿದೆ.
ಕಳೆದ 5 ದಿನಗಳಿಂದ ವಿದ್ಯಾಥರ್ಿಗಳು ಸ್ಥಳಾಂತರ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶಾಲೆಯನ್ನು 2 ಕಿ.ಮೀ. ದೂರದ ಗೇರುಕಟ್ಟೆಯ ಡಾನ್ಬೋಸ್ಕೋ ಶಾಲೆಗೆ ಸ್ಥಳಾಂತರಿಸಲು ಶಾಲಾ ಆಡಳಿತ ವರ್ಗ ನಿರ್ಧರಿಸಿದೆ.  ರಕ್ಷಕ-ಶಿಕ್ಷಕ ಸಂಘದ ಸಭೆಯ ನಿಧರ್ಾರವನ್ನು ಗಾಳಿಗೆ ತೂರಿ ಆಡಳಿತ ಏಕಪಕ್ಷೀಯ ನಿಧರ್ಾರ ತಳೆದ ಹಿನ್ನೆಲೆಯಲ್ಲಿ ಸಮಸ್ಯೆ ಉಲ್ಬಣಗೊಂಡಿದೆ. ಇದೇ ಸೋಮವಾರದಿಂದ ಇಲ್ಲಿ ತರಗತಿ ನಡೆಯದೆ ವಿದ್ಯಾಥರ್ಿಗಳ ಶೈಕ್ಷಣಿಕ ಬದುಕು ತೂಗುಯ್ಯಾಲೆಯಲ್ಲಿದೆ.
 
 
ನಿಧನ

ನಾರಾಯಣ ಬೆಳ್ಚಪ್ಪಾಡ
ಮಂಜೇಶ್ವರ: ಸಿ.ಪಿ.ಎಂ. ಹಿರಿಯ ಕಾರ್ಯಕರ್ತ ಕಳಾಯಿ ನಾರಾಯಣ ಬೆಳ್ಚಪ್ಪಾಡ(65) ನಿಧನರಾದರು.
ಪತ್ನಿ ಲೀಲಾ ಮತ್ತು 6 ಮಂದಿ ಮಕ್ಕಳಿದ್ದಾರೆ.

ಸುಧಾಕರ ಶೆಟ್ಟಿ
ಮಂಜೇಶ್ವರ: ಬಸ್ ಚಾಲಕ ಗುಡ್ಡೆಗಿರಿ ನಿವಾಸಿ ಸುಧಾಕರ ಶೆಟ್ಟಿ(39) ನಿಧನರಾದರು.
ವರ್ಷದ ಹಿಂದೆ ಜ್ವರದಿಂದ ಬಳಲುತ್ತಿದ್ದ ಇವರಿಗೆ ವೈದ್ಯರು ನೀಡಿದ ಚುಚ್ಚು ಮದ್ದು ಬದಲಾದ ಹಿನ್ನೆಲೆಯಲ್ಲಿ ಆರೋಗ್ಯದಲ್ಲಿ ಏರುಪೇರು ಕಂಡುಬಂದು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು.
ಪತ್ನಿ ತಾರಾ ಮತ್ತು ಇಬ್ಬರು ಮಕ್ಕಳಿದ್ದಾರೆ.
 
  
 

 

 


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

No comments:

Post a Comment