ಕಾಸರಗೋಡು: ಕಲ್ಲಿಕೋಟೆಯ ಯುವತಿಯನ್ನು ವೇಶ್ಯಾವಾಟಿಕೆಗೆ ಬಳಸಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ನಗರ ಪೊಲೀಸರಿಗೆ ರಿಯಾನ ನಾಪತ್ತೆ ಪ್ರಕರಣದ ತನಿಖೆಯ ಹೊಣೆ ಇರುವ ಕಾರಣ ಈ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಕುಂಬಳೆ ಸಿ.ಐ. ಕೆ.ದಾಮೋದರನ್ ಅವರಿಗೆ ವಹಿಕೊಡಲಾಗಿದೆ.
ಕಾರು ಮತ್ತು ಬೈಕ್ ಡಿಕ್ಕಿ: ಸಾವು
ಕಾಸರಗೋಡು: ಕಾರು ಮತ್ತು ಬೈಕ್ ಡಿಕ್ಕಿ ಹೊಡೆದು ಮುಳಿಯಾರು ಸಮೀಪದ ಇರಿಯಣ್ಣಿ ಕಾಟಿಪಳ್ಳ ನಿವಾಸಿ ಬಿ.ಕೆ.ನಾರಾಯಣನ್ ಅವರ ಪುತ್ರ ಲೆನಿನ್(25) ಸಾವನ್ನಪ್ಪಿದ ಘಟನೆ ಶುಕ್ರವಾರ ರಾತ್ರಿ ಪಯ್ಯನ್ನೂರಿನ ಕಣ್ಣಂಗಾಡ್ ಕ್ಷೇತ್ರ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಇವರ ಜತೆಯಲ್ಲಿ ಸಂಚರಿಸುತ್ತಿದ್ದ ತಾಯನ್ನೂರು ಎಣ್ಣಪ್ಪಾರ ನಿವಾಸಿ ನಾರಾಯಣನ್ ಗಂಭೀರವಾಗಿ ಗಾಯಗೊಂಡುಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದಾರೆ.
ಇವರ ಜತೆಯಲ್ಲಿ ಸಂಚರಿಸುತ್ತಿದ್ದ ತಾಯನ್ನೂರು ಎಣ್ಣಪ್ಪಾರ ನಿವಾಸಿ ನಾರಾಯಣನ್ ಗಂಭೀರವಾಗಿ ಗಾಯಗೊಂಡುಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದಾರೆ.
ಕೊಲೆ ಯತ್ನ : ಆರೋಪಿ ಸೆರೆ
ಕಾಸರಗೋಡು: ಕೊಲೆ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿಯನ್ನು ಕುಂಬಳೆ ಸಿ.ಐ. ಕೆ.ದಾಮೋದರನ್ ಬಂಧಿಸಿದ್ದಾರೆ.
ಬಂದ್ಯೋಡು ಮುಟ್ಟ ನಿವಾಸಿ ಸಫಾ ಅಶ್ರಫ್ ಎಂಬಾತನೇ ಆರೋಪಿ. ಪೈವಳಿಕೆಯ ಖಾಲಿದ್ ಮತ್ತು ಅವರ ಸಹೋದರ ಖಾದರ್ ಎಂಬವರನ್ನು ತಿಂಗಳ ಹಿಂದೆ ಈತ ಇರಿದು ಗಾಯಗೊಳಿಸಿದ್ದಾನೆ ಎಂದು ಕುಂಬಳೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಬಂದ್ಯೋಡು ಮುಟ್ಟ ನಿವಾಸಿ ಸಫಾ ಅಶ್ರಫ್ ಎಂಬಾತನೇ ಆರೋಪಿ. ಪೈವಳಿಕೆಯ ಖಾಲಿದ್ ಮತ್ತು ಅವರ ಸಹೋದರ ಖಾದರ್ ಎಂಬವರನ್ನು ತಿಂಗಳ ಹಿಂದೆ ಈತ ಇರಿದು ಗಾಯಗೊಳಿಸಿದ್ದಾನೆ ಎಂದು ಕುಂಬಳೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
120 ಗ್ರಾಂ. ಗಾಂಜಾ ಸಹಿತ ಸೆರೆ
ಕಾಸರಗೋಡು: 120 ಗ್ರಾಂ ಗಾಂಜಾ ಸಹಿತ ಓರ್ವ ಆರೋಪಿಯನ್ನು ನಗರದ ಹಳೆ ಬಸ್ಸು ನಿಲ್ದಾಣದಿಂದ ಪೊಲೀಸರು ಬಂಧಿಸಿದ್ದಾರೆ.
ಆಲಂಪಾಡಿ ಕೆ.ಕೆ.ಹೌಸ್ನ ಕೆ.ಪಿ.ಅಬ್ದುಲ್ ಶಫೀಕ್(52) ಬಂಧನೊಳಕ್ಕಾದ ಆರೋಪಿ. ಶುಕ್ರವಾರ ಸಂಜೆ ಗಾಂಜಾದೊಂದಿಗೆ ಸಂಚರಿಸುತ್ತಿದ್ದ ಈತನನ್ನು ಟ್ರಾಫಿಕ್ ಎಸ್.ಐ. ಎ.ರಾಜೇಶ್ ಬಂಧಿಸಿದರು.
ಆಲಂಪಾಡಿ ಕೆ.ಕೆ.ಹೌಸ್ನ ಕೆ.ಪಿ.ಅಬ್ದುಲ್ ಶಫೀಕ್(52) ಬಂಧನೊಳಕ್ಕಾದ ಆರೋಪಿ. ಶುಕ್ರವಾರ ಸಂಜೆ ಗಾಂಜಾದೊಂದಿಗೆ ಸಂಚರಿಸುತ್ತಿದ್ದ ಈತನನ್ನು ಟ್ರಾಫಿಕ್ ಎಸ್.ಐ. ಎ.ರಾಜೇಶ್ ಬಂಧಿಸಿದರು.
ರೈಲು ಡಿಕ್ಕಿ: ಅಪರಿಚಿತ ಶವ ಪತ್ತೆ
ಕಾಸರಗೋಡು: ಕಾಞಂಗಾಡು ರೈಲ್ವೇ ನಿಲ್ದಾಣದ ಬಳಿ ರೈಲು ಡಿಕ್ಕಿ ಹೊಡೆದು ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ ನಡೆದಿದೆ.
ಮಂಗಳೂರಿಗೆ ಬರುತ್ತಿದ್ದ ಕೊಯಂಬತ್ತೂರು ಫಾಸ್ಟ್ ಪ್ಯಾಸೆಂಜರ್ ರೈಲು ಸಂಚರಿಸಿದ ಬಳಿಕ ಶವ ಪತ್ತೆಯಾಗಿದೆ. ರುಂಡ ಮುಂಡ ಬೇರ್ಪಟ್ಟಿದೆ. ಕಾಞಂಗಾಡು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಶವವನ್ನು ಇರಿಸಲಾಗಿದೆ.
ಮಂಗಳೂರಿಗೆ ಬರುತ್ತಿದ್ದ ಕೊಯಂಬತ್ತೂರು ಫಾಸ್ಟ್ ಪ್ಯಾಸೆಂಜರ್ ರೈಲು ಸಂಚರಿಸಿದ ಬಳಿಕ ಶವ ಪತ್ತೆಯಾಗಿದೆ. ರುಂಡ ಮುಂಡ ಬೇರ್ಪಟ್ಟಿದೆ. ಕಾಞಂಗಾಡು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಶವವನ್ನು ಇರಿಸಲಾಗಿದೆ.
ಗೂಂಡಾ ಪಟ್ಟಿಯ ಆರೋಪಿ ಸೆರೆ
ಮಂಜೇಶ್ವರ: ಗೂಂಡಾ ಪಟ್ಟಿಯಲ್ಲಿ ಸೇರ್ಪಡೆಗೊಂಡ ಉಪ್ಪಳದ ಹಿದಾಯತ್ ನಗರದ ಷೇಕ್ ಸಮದನಿ ಪುತ್ರ ಅಸರ್(23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯತ್ನ ಪ್ರಕರಣ ಸಹಿತ ಹತ್ತಕ್ಕೂ ಅಧಿಕ ಪ್ರಕರಣದಲ್ಲಿ ಈತ ಶಾಮೀಲಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
15 ಪವನ್ ಚಿನ್ನಾಭರಣ ಕಳವು
ಮಂಜೇಶ್ವರ: ಉಪ್ಪಳ ಸಮೀಪದ ಐಲದಲ್ಲಿ ಮನೆಗೆ ನುಗ್ಗಿ ಹಾಡಹಗಲೇ 15 ಪವನ್ ಚಿನ್ನಾಭರಣ ಮತ್ತು 1 ಸಾವಿರ ರೂ.ಗಳನ್ನು ಕಳವು ಮಾಡಿದ ಘಟನೆ ಶುಕ್ರವಾರ ನಡೆದಿದೆ.
ಘಟನೆಗೆ ಸಂಬಂಧಿಸಿ ಯೋಗೀಶ್ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳವು ನಡೆದಿದೆ.
ಘಟನೆಗೆ ಸಂಬಂಧಿಸಿ ಯೋಗೀಶ್ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳವು ನಡೆದಿದೆ.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment