Saturday, July 11, 2009
ಚೀನದಲ್ಲಿ ಭೂಕಂಪಕ್ಕೆ ಒಬ್ಬ ಬಲಿ, 324 ಜನರಿಗೆ ಗಾಯ/China-Earthquake
ಬೀಜಿಂಗ್: ವಾಯವ್ಯ ಚೀನಾವನ್ನು ಸಾಧಾರಣ ತೀವ್ರತೆಯ ಭೂಕಂಪ ಗುರುವಾರ ಅಪ್ಪಳಿಸಿದ್ದು, ಒಬ್ಬ ವ್ಯಕ್ತಿ ಸತ್ತಿದ್ದು ಕನಿಷ್ಠ 324 ಜನರು ಗಾಯಗೊಂಡಿದ್ದಾರೆ ಮತ್ತು 18,000 ಮನೆಗಳು ಕುಸಿದುಹೋಗಿವೆ ಎಂದು ರಾಜ್ಯ ಮಾಧ್ಯಮ ತಿಳಿಸಿದೆ. ಯುನಾನ್ ಪ್ರಾಂತ್ಯದ ಯಾವನ್ ಕೌಂಟಿಯಲ್ಲಿ ಕೇಂದ್ರೀಕೃತವಾಗಿದ್ದ 6.0 ತೀವ್ರತೆಯ ಭೂಕಂಪದಿಂದ 40,000 ಮನೆಗಳಿಗೆ ಹಾನಿಯಾಗಿದೆಯೆಂದು ಕ್ಸಿನುವಾ ಸುದ್ದಿಸಂಸ್ಥೆ ತಿಳಿಸಿದೆ. ಭೂಕಂಪದ ಬೆನ್ನಹಿಂದೆ ಎಂಟು ಲಘು ಕಂಪನಗಳು ಉಂಟಾಗಿದ್ದು ಪ್ರಾಂತೀಯ ನಾಗರಿಕ ವ್ಯವಹಾರ ಇಲಾಖೆ 4500 ಟೆಂಟ್‌ಗಳು ಮತ್ತಿತರ ಪರಿಹಾರ ಸಾಮಗ್ರಿಗಳನ್ನು ಯಾನ್‌ಗೆ ಕಳಿಸಿದೆಯೆಂದು ಕ್ಸಿನುವಾ ತಿಳಿಸಿದೆ.ಯುನಾನ್ ಭೂಕಂಪಪೀಡಿತ ಪ್ರದೇಶವಾಗಿದ್ದು, ಥೈಲೆಂಡ್ ಮತ್ತು ಮ್ಯಾನ್ಮಾರ್ ಗಡಿಯಲ್ಲಿ ಚೀನಾದ ದಕ್ಷಿಣಕ್ಕಿದೆ.ಕಳೆದ ವರ್ಷ 90,000 ಜನರನ್ನು ಬಲಿತೆಗೆದುಕೊಂಡ ಸಿಚುವಾನ್ ಪ್ರಾಂತ್ಯದ ಗಡಿಯಲ್ಲಿ ಕೂಡ ಯುನಾನ್ ಪ್ರಾಂತ್ಯವಿದೆ. 1988ರಲ್ಲಿ ಯುನಾನ್ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕಂಪದಲ್ಲಿ 903 ಜನರು ಬಲಿಯಾಗಿದ್ದರು. 1970ರಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪಕ್ಕೆ 15,000 ಜನರು ಬಲಿಯಾಗಿದ್ದರು.
Subscribe to:
Post Comments (Atom)
No comments:
Post a Comment