Friday, July 10, 2009

ಕಾಸರಗೋಡು ರೈಲ್ವೇ ನಿಲ್ದಾಣ 'ಮಾದರಿ'/Model Railway Station

ಕಾಸರಗೋಡು : ವಿಶಾಲ ಕನರ್ಾಟಕವನ್ನು ಕಡೆಗಣಿಸಿರುವ ಕೇಂದ್ರ ರೈಲ್ವೇ ಸಚಿವೆ ಮಮತಾ ಬ್ಯಾನಜರ್ಿ ಕೇರಳದ ಪಾಲಿಗೆ ಹಲವಾರು ರೈಲ್ವೇ ಸೌಲಭ್ಯವನ್ನು ಪ್ರಕಟಿಸಿ ತನ್ನ ವಿಶೇಷ ಮಮತೆ ಪ್ರದಶರ್ಿಸಿದ್ದಾರೆ. ಇದರಿಂದ ಕೇರಳೀಯರ ಸಂಭ್ರಮ ಮುಗಿಲು ಮುಟ್ಟಿದೆ.
ರಾಜ್ಯದಲ್ಲಿ ಕಾಸರಗೋಡು ಸಹಿತ ಕಣ್ಣೂರು, ಮಲಪ್ಪುರಂ ಜಿಲ್ಲೆಯ ತಿರೂರು, ಪಟ್ಟಿಕ್ಕಾಡ್ ಸ್ಟೇಷನ್ಗಳನ್ನು ಮಾದರಿ ರೈಲ್ವೇ ಸ್ಟೇಷನ್ಗಳನ್ನಾಗಿ ಪರಿವತರ್ಿಸಲು ಸಂಸತ್ತಿನಲ್ಲಿ ಹಸಿರು ನಿಶಾನೆ ತೋರಿದ್ದಾರೆ. ಸಂಸತ್ತಿನ ಹೊರಗೆ ಕೇರಳ ಸಂಸದರು ನಡೆಸಿದ ಚಚರ್ೆಯ ಫಲವಾಗಿ ಕೊಟ್ಟಾಯಂ, ತಿರುವಲ್ಲ, ಚೆಂಗನ್ನೂರು, ವಡಗರ, ತಲಶ್ಶೇರಿ ಸ್ಟೇಷನ್ಗಳೂ 'ಮಾದರಿ'ಯಾಗುವ ಭಾಗ್ಯ ಲಭಿಸಿದೆ.
ತಿರುವನಂತಪುರ ಸೆಂಟ್ರಲ್, ಎನರ್ಾಕುಳಂ ಜಂಕ್ಷನ್ ಮತ್ತು ಕಲ್ಲಿಕೋಟೆ ರೈಲ್ವೇ ನಿಲ್ದಾಣಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸಲಾಗುವುದು. ಎನರ್ಾಕುಳಂ ನಾತರ್್, ಪಾಲಕ್ಕಾಡು ಮತ್ತು ಆಲಪ್ಪುರ ಸ್ಟೇಷನ್ಗಳಲ್ಲಿ ವಾಣಿಜ್ಯ ಸಮುಚ್ಛಯ ನಿಮರ್ಿಸಲಾಗುವುದು. ಕೊಚ್ಚಿ-ಜೈಪುರ ರೈಲನ್ನು ಅಜ್ಮೀರ್ ವರೆಗೆ ವಿಸ್ತರಿಸಲಾಗುವುದು. 
ಇದಲ್ಲದೆ 8 ಹೊಸ ರೈಲುಗಳು ರಾಜ್ಯಕ್ಕೆ ಲಭಿಸಿದೆ. ಕೊಚ್ಚಿ-ಮಥುರಾ, ಎರುಮೇಲಿ-ಪುನಲೂರು-ತಿರುವನಂತಪುರ ಹಳಿ, ತಿರುವನಂತಪುರದಲ್ಲಿ ವೈದ್ಯಕೀಯ ಕಾಲೇಜು ನಿಮರ್ಾಣ ಪ್ರಸಕ್ತ ಬಜೆಟ್ನಲ್ಲಿ ಕೇರಳಕ್ಕೆ ಲಭಿಸಿದ ಇತರ ಮಹತ್ವದ ಕಾಣಿಕೆಗಳು.
ಕಾಸರಗೋಡಿನಲ್ಲಿ ರಾಜಧಾನಿ ಎಕ್ಸ್ಪ್ರೆಸ್ಗೆ ನಿಲುಗಡೆ, ಬೇಕಲದಲ್ಲಿ ರೈಲ್ವೇ ಕೈಗಾರಿಕಾ ಘಟಕ, ತಿರುವನಂತಪುರ-ಕಣ್ಣೂರು ರೈಲನ್ನು ಮಂಗಳೂರು ವರೆಗೆ ವಿಸ್ತರಣೆ ಕಾಸರಗೋಡಿನ ಸಂಸದ ಪಿ.ಕರುಣಾಕರನ್ ಸಂಸತ್ತಿನಲ್ಲಿ ಎತ್ತಿದ ಧ್ವನಿಗೆ ರೈಲ್ವೇ ಸಚಿವೆ ಕಾಸರಗೋಡನ್ನು ಮಾದರಿ ನಿಲ್ದಾಣವನ್ನಾಗಿ ಮೇಲ್ದಜರ್ೆಗೇರಿಸಲಾಗುವುದು ಎಂಬ ಭರವಸೆ ಲಭಿಸಿದೆ. ಮಂಗಳೂರು-ಬೆಂಗಳೂರು ರೈಲು ಕಣ್ಣೂರು ವರೆಗೆ ವಿಸ್ತರಣೆಗೊಳಿಸಿದ ಭರವಸೆ ರಾಜ್ಯಕ್ಕೆ ಮುಂಗಡ ಲಭಿಸಿದ ಕೊಡುಗೆಯಾಗಿದೆ. ಈ ಎಲ್ಲಾ ಕೊಡುಗೆಗಳ ಹಿಂದೆ ರಾಜ್ಯದ ಸಂಸದರ ವಿಶೇಷ ಶ್ರಮವಿದೆ.
ಕಾಸರಗೋಡು ಮಾದರಿ:
ಮಾದರಿ ರೈಲ್ವೇ ಸ್ಟೇಷನ್ ಪರಿಣಾಮ ನಿಲ್ದಾಣದ ಪ್ಲಾಟ್ಫಾರಂ ಅಭಿವೃದ್ಧಿ, ಟಿಕೆಟ್ ಕೌಂಟರ್ಗಳ ಹೆಚ್ಚಳ, ವಾಹನ ಪಾಕಿಂಗ್ ಸೌಲಭ್ಯ, ಪ್ರಥಮ ದಜರ್ೆ ಪ್ರಯಾಣಿಕರ ಕೊಠಡಿ ಸೌಲಭ್ಯ ಕಾಸರಗೋಡು ರೈಲ್ವೇ ನಿಲ್ದಾಣಕ್ಕೆ ಲಭಿಸಲಿದೆ.
ಬಜೆಟ್ ಮಂಡನೆಗೆ ಮೂರು ದಿನಗಳ ಹಿಂದೆಯೇ ಕಾಞಂಗಾಡು-ಪಾಣತ್ತೂರು ರೈಲ್ವೇ ಹಳಿ ಸಮೀಕ್ಷೆಯ ವರದಿಯನ್ನು ಸಂಸದರು ರೈಲ್ವೇ ಸಚಿವೆಗೆ ಸಲ್ಲಿಸಿದ್ದು, ಈ ಯೋಜನೆಯ ಬಗ್ಗೆ ಸಚಿವೆ ಆಸಕ್ತಿ ಪ್ರಕಟಿಸಿದ್ದಾರೆ.


 

No comments:

Post a Comment