Sunday, July 5, 2009
ಬೆಂಗಳೂರು-ಮಂಗಳೂರು ನಡುವೆ ಹಗಲು ರೈಲು/Day Train M'lore
ಬೆಂಗಳೂರು: ಬೆಂಗಳೂರು ಮತ್ತು ಮಂಗಳೂರು ನಡುವೆ ಸಕಲೇಶಪುರ ಮಾರ್ಗವಾಗಿ ಜುಲೈ ಕೊನೆಯಲ್ಲಿ ಹಗಲಿನ ರೈಲಿಗೆ ಚಾಲನೆ ನೀಡಲಾಗುತ್ತಿದೆ. ಇದಕ್ಕೆ ವೇಳಾಪಟ್ಟಿ ಮತ್ತು ಪ್ರಯಾಣದರವನ್ನು ನಿಗದಿ ಮಾಡುವ ಪ್ರಕ್ರಿಯೆ ಮತ್ತು ಅಗತ್ಯ ಅನುಮತಿ ಪಡೆಯುವ ಪ್ರಕ್ರಿಯೆ ಆರಂಭಿಸಲಾಗಿದೆಯೆಂದು ರೈಲ್ವೆ ಖಾತೆ ರಾಜ್ಯಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು. ಬೆಂಗಳೂರಿಂದ ಬೆಳಿಗ್ಗೆ ನಿರ್ಗಮಿಸುವ ರೈಲು ಸಂಜೆಯ ವೇಳೆಗೆ ಮಂಗಳೂರು ತಲುಪುತ್ತದೆಂದು ಹೇಳಲಾಗಿದೆ. ಬೆಂಗಳೂರು ಮತ್ತು ಮೈಸೂರು ನಡುವೆ ದ್ವಿಗುಣ ರೈಲ್ವೆ ಮಾರ್ಗ ನಿರ್ಮಾಣಕ್ಕೆ ತಾಂತ್ರಿಕ ತೊಂದರೆಗಳ ಹಿನ್ನೆಲೆಯಲ್ಲಿ ಇನ್ನೂ ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ.ಬೆಂಗಳೂರು-ರಾಮನಗರಂ ನಡುವೆ ಯೋಜನೆ ದಾಖಲೆಯ ಕಾಲದಲ್ಲಿ 80 ಕೋಟಿ ವೆಚ್ಚದಲ್ಲಿ ಮುಗಿದಿದ್ದರೂ, ಭೂಸ್ವಾಧೀನ ಮತ್ತು ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಗೆ ಸೇತುವೆ ನಿರ್ಮಾಣ ಮುಂತಾದ ಸಮಸ್ಯೆಗಳಿಂದ 280 ಕೋಟಿ ರೂ. ಕಾಮಗಾರಿ ವಿಳಂಬವಾಗಿದೆಯೆಂದು ಮುನಿಯಪ್ಪ ತಿಳಿಸಿದರು.
Subscribe to:
Post Comments (Atom)
No comments:
Post a Comment