skip to main |
skip to sidebar
ರಿಯಾನ ನಾಪತ್ತೆ ಪ್ರಕರಣ/Riyana

ಕಾ
ಸರಗೋಡು: ರಿಯಾನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ತಾಯಿ ಫೌಸಿಯಾ ಮತ್ತು ಪ್ರಕರಣದ ಬಗ್ಗೆ ಧ್ವನಿ ಎತ್ತಿದ ಜನಪರ ವೇದಿಕೆ ಹೈಕೋರ್ಟುಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದೆ.ನಾಯಮ್ಮಾರ್ ಮೂಲೆಯ ಖಾಸಗಿ ಶಾಲೆಯೊಂದರ ವಿದ್ಯಾರ್ಥಿ ರಿಯಾನ ಮೇ 18ರಂದು ನಾಪತ್ತೆಯಾಗಿದ್ದಳು. ವಿಶೇಷ ತರಗತಿ ಇದೆ ಎಂದು ಮನೆಯಿಂದ ಶಾಲೆಗೆ ಹೋದ ಆಕೆ ಮತ್ತೆ ಮನೆಗೆ ವಾಪಾಸಾಗಿಲ್ಲ. ಕಳೆದ 49 ದಿನಗಳಿಂದ ರಿಯಾನ ಕಾಣೆಯಾಗಿದ್ದರೂ ಪೊಲೀಸ್ ತನಿಖೆ ಚುರುಕುಕೊಂಡಿಲ್ಲ. ಆದ್ದರಿಂದ ನ್ಯಾಯಾಲಯ ಮಧ್ಯಪ್ರವೇಶಿಸಬೇಕು. ಇಲ್ಲದಿದ್ದರೆ ರಿಯಾನಳ ಪ್ರಾಣಾಪಾಯಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಕಾಸರಗೋಡಿನಲ್ಲಿ ಈ ರೀತಿ ಹಲವಾರು ಬಾಲಕಿಯರು ನಾಪತ್ತೆಯಾಗುತ್ತಿದ್ದು, ಸಫಿಯಾ ಕೊಲೆ ಪ್ರಕರಣವನ್ನು ಇಲ್ಲಿ ಸ್ಮರಿಸಬಹುದು.
No comments:
Post a Comment